ತೈವಾನ್‌ನಲ್ಲಿ 6.3 ತೀವ್ರತೆಯಲ್ಲಿ ಭಾರೀ ಭೂಕಂಪ
ತೈವಾನ್, ಸೆಪ್ಟೆಂಬರ್ 18: ತೈವಾನ್ ದೇಶದ ಈಶಾನ್ಯದಲ್ಲಿ ಪ್ರದೇಶದದಲ್ಲಿ ಸೋಮವಾರ 6.3 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋ ಸೈನ್ಸ್ (GFZ) ತಿಳಿಸಿದೆ. ಭೂಕಂಪವು 171 ಕಿಲೋಮೀಟರ್ (106.25 ಮೈಲುಗಳು) ಆಳದಲ್ಲಿತ್ತು ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋ ಸೈನ್ಸ್ ತಿಳಿಸಿದೆ.
ಇನ್ನು ಇತ್ತೀಚಿಗೆ ಮೊರಾಕೊದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಬರೋಬ್ಬರಿ 2,862 ಮಂದಿ ಸಾವನ್ನಪ್ಪಿದ್ದರು. 2,562ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು. ಮೊರಾಕೊದ ಹೈ ಅಟ್ಲಾಸ್ ಪರ್ವತಗಳ ಕಣಿವೆಗಳಲ್ಲಿ ನೆಲೆಗೊಂಡಿರುವ ಹಳ್ಳಿಗಳು ಭೂಕಂಪದಿಂದಾಗಿ ಹೆಚ್ಚು ಹಾನಿಗೊಳಗಾಗಿವೆ. ಪರ್ವತದ ಅವಶೇಷಗಳು ಕೆಳಗಿಳಿದ ಕಾರಣ ಇಲ್ಲಿ ಅನೇಕ ಹಳ್ಳಿಗಳು ನಾಶವಾಗಿವೆ.

ಕಳೆದ ಮಂಗಳವಾರ ಮುಂಜಾನೆ ಅಂಡಮಾನ್ ಸಮುದ್ರ ಮತ್ತು ಮಣಿಪುರದ ಉಖ್ರುಲ್‌ನಲ್ಲಿ ಎರಡು ಪ್ರತ್ಯೇಕ ಭೂಕಂಪಗಳು ಸಂಭವಿಸಿದ್ದವು. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 4.4 ಮತ್ತು 5.1ರಷ್ಟು ತೀವ್ರತೆಯನ್ನು ತೋರಿಸಿವೆ ಎಂದು ವರದಿಯಾಗಿತ್ತು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಅಂಡಮಾನ್ ಸಮುದ್ರದಲ್ಲಿ 4.4 ತೀವ್ರತೆಯ ಭೂಕಂಪವು ಸಂಭವಿಸಿತ್ತು. ಭೂಕಂಪದ ಆಳವು 93 ಕಿಲೋಮೀಟರ್‌ನಲ್ಲಿ ಕಂಡುಬಂದಿದೆ ಮತ್ತು ಭೂಕಂಪನದ ಕೇಂದ್ರವು ಅಂಡಮಾನ್ ಸಮುದ್ರದಲ್ಲಿದೆ ಎಂದು ಎನ್‌ಸಿಎಸ್ ಟ್ವೀಟ್ ಮೂಲಕ ತಿಳಿಸಿತ್ತು. ಮಾಡಿದೆ.
ಇನ್ನು ಕಳೆದ ಸೋಮವಾರ ತಡರಾತ್ರಿ ಈಶಾನ್ಯ ರಾಜ್ಯ ಮಣಿಪುರದಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಉಖ್ರುಲ್‌ನಲ್ಲಿ ಭೂಕಂಪದ ಕೇಂದ್ರಬಿಂದು ವರದಿಯಾಗಿತ್ತು. 20 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಟ್ವೀಟ್ ಮೂಲಕ ತಿಳಿಸಿತ್ತು.












Click it and Unblock the Notifications