ಅಮೆರಿಕದಲ್ಲೂ ಶ್ರೀರಾಮನ ಜಪ: ಟೆಸ್ಲಾ ಕಾರ್ ಬೆಳಕಿನಲ್ಲಿ ಮೂಡಿದ ಶ್ರೀರಾಮ!
ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ಜೋರಾಗಿದೆ. ಅದರಲ್ಲೂ ವಿದೇಶದಲ್ಲಿ ನೆಲೆಸಿ, ಭಾರತೀಯ ಸಂಸ್ಕೃತಿ ಮರೆಯದ ಭಾರತೀಯರು ಇದೀಗ ಶ್ರೀರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಅಮೆರಿಕದಲ್ಲಿ ಭಕ್ತರು ವಿಶಿಷ್ಟವಾಗಿ ಈಗ ಶ್ರೀರಾಮನ ಜಪ ಮಾಡಿದ್ದಾರೆ. ಟೆಸ್ಲಾ ಕಾರ್ ಬೆಳಕಿನಲ್ಲಿ ಶ್ರೀರಾಮನನ್ನು ಮೂಡಿಸಿದ್ದಾರೆ. ಈ ಸುಂದರ ದೃಶ್ಯ ಈಗ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ. ಆ ವಿಡಿಯೋಗಾಗಿ ಮುಂದೆ ಓದಿ.
ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲ ಗಂಟೆ ಬಾಕಿ ಇದೆ. ಹೀಗಾಗಿ ಜಗತ್ತೇ ರಾಮನ ದೇಗುಲದ ಉದ್ಘಾಟನೆಗೆ ಕಾಯುತ್ತಿದೆ. ನಾಳೆ ಅಂದ್ರೆ ಜನವರಿ 22ಕ್ಕೆ ಅದ್ಧೂರಿಯಾಗಿ ಶ್ರೀರಾಮ ದೇಗುಲ ಉದ್ಘಾಟನೆ ಆಗಲಿದೆ. ಇದೇ ಸಮಯದಲ್ಲಿ ವಿದೇಶದಲ್ಲಿ ಇರುವ ಭಾರತೀಯರು ಕೂಡ ಈ ಸಂಭ್ರಮದ ಭಾಗವಾಗಿದ್ದಾರೆ. ಅದೇ ರೀತಿ ಈಗ, ಅಮೆರಿಕದ ಹ್ಯೂಸ್ಟನ್ ಪ್ರದೇಶದಲ್ಲಿರುವ ಭಾರತೀಯರು ವಿಶೇಷವಾಗಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕಾರಿನ ಬೆಳಕಲ್ಲಿ, ರಾಮನಾಮ ಜಪ ಮಾಡಿ ಸಂಭ್ರಮಿಸಿದ್ದಾರೆ. ವಿಡಿಯೋ ಇಲ್ಲಿದೆ ಮುಂದೆ ನೋಡಿ.

ಟೆಸ್ಲಾ ಕಾರ್ ಬೆಳಕಿನಲ್ಲಿ ಶ್ರೀರಾಮ!
ಹೌದು, ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಅಮೆರಿಕದಲ್ಲಿನ ಭಾರತೀಯರು ಅತ್ಯಂತ ವಿಶಿಷ್ಟವಾಗಿ ಟೆಸ್ಲಾ ಕಾರ್ ಬೆಳಕಿನ ಪ್ರದರ್ಶನ ನಡೆಸಿದ್ರು. ಹ್ಯೂಸ್ಟನ್ ಭಾಗದಲ್ಲಿರುವ ಗುರುವಾಯೂರಪ್ಪನ್ ಕೃಷ್ಣ ದೇವಸ್ಥಾನದ ಬಳಿ, ನೂರಾರು ಕಾರುಗಳ ಬಳಸಿ ಏಕಕಾಲಕ್ಕೆ ಕಾರುಗಳ ದೀಪ ಉರಿಸುವ ಮೂಲಕ ಮತ್ತು ನಂದಿಸುವ ಮೂಲಕ ಸುಂದರವಾದ ಬೆಳಕಿನ ಪ್ರದರ್ಶನವನ್ನ ನಡೆಸಲಾಯಿತು.
ಅಮೆರಿಕದಲ್ಲಿ ಸಂಭ್ರಮವೋ ಸಂಭ್ರಮ
ಹಲವು ದಿನದಿಂದಲೂ ಅಮೆರಿಕದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಕಾರ್ ರ್‍ಯಾಲಿಗಳನ್ನು ಭಕ್ತರು ಆಯೋಜನೆ ಮಾಡುತ್ತಿದ್ದಾರೆ. ಈ ಮೂಲಕ ಶ್ರೀರಾಮ ಮಂದಿರದ ಉದ್ಘಾಟನೆಯ ಸಂಭ್ರಮವನ್ನು ಆರಂಭಿಸಿದ್ದರು. ಇದೀಗ ಇನ್ನೇನು ನಾಳೆ ಭರ್ಜರಿಯಾಗಿ ಶ್ರೀರಾಮ ದೇಗುಲ ಉದ್ಘಾಟನೆ ಆಗಲಿದ್ದು, ಇದೇ ಸಮಯದಲ್ಲಿ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ ಶ್ರೀರಾಮನ ಭಕ್ತರು. ಟೆಸ್ಲಾ ಕಾರ್ ಬೆಳಕಿನ ಮೂಲಕ ಶ್ರೀರಾಮ ನಾಮ ಜಪ ಮಾಡಿರುವುದು ಇದೀಗ ಗಮನ ಸೆಳೆದಿದ್ದು, ಎಲ್ಲೆಲ್ಲೂ ವೈರಲ್ ಆಗುತ್ತಿದೆ.
The Tesla show at Houston, America#JaiShreeRam #AyodhaRamMandir pic.twitter.com/REPmQSBZ1q
— SINGH___Jee (@BADALSINGH20450) January 20, 2024
ವಿದೇಶದ ದೇಗುಲದಲ್ಲೂ ವಿಶೇಷ ಪೂಜೆ
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು ಎಲ್ಲೆಲ್ಲೂ ಸಂಭ್ರಮ ಮೇಳೈಸಿದೆ. ಇನ್ನೇನು ಕೆಲವೇ ಗಂಟೆಯಲ್ಲಿ ಭಾರತೀಯರು, ಅದರಲ್ಲೂ ಶತಕೋಟಿ ರಾಮ ಭಕ್ತರ ಕನಸು ಈಡೇರಲಿದೆ. ಹೀಗಾಗಿ ಅಮೆರಿಕದ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮಾಚರಣೆ ಆಯೋಜನೆ ಮಾಡಲಾಗಿದೆ. ಅದರಲ್ಲೂ ಭಾರತ ಮೂಲದ ಪ್ರಜೆಗಳು ಹೆಚ್ಚಾಗಿರುವ ಅಮೆರಿಕದ ರಾಜ್ಯದಲ್ಲಿ ಥೇಟ್ ಭಾರತದ ರೀತಿಯೇ ಈಗ ಸಂಭ್ರಮ ವ್ಯಕ್ತಪಡಿಸಲಾಗುತ್ತಿದೆ.
ಒಟ್ನಲ್ಲಿ ಶ್ರೀರಾಮನ ಭಕ್ತರಿಗೆ ನಾಳೆಯ ದಿನ ಎಂದೆಂದಿಗೂ ಮರೆಯಲು ಆಗದು. ಹೀಗಾಗಿ ವಿದೇಶದಲ್ಲಿ ಇರುವ ಭಾರತೀಯರು ಕೂಡ ಈ ಸಂಭ್ರಮಕ್ಕೆ ಜೊತೆಯಾಗಿ, ಈ ಕಾರ್ಯಕ್ರಮ ಹಬ್ಬದಂತೆ ನೆರವೇರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೊರ ದೇಶದಲ್ಲಿ ಇರುವ ಭಾರತದ ಪ್ರಜೆಗಳ ಒಕ್ಕೂಟ ಕೂಡ ಸಾಥ್ ನೀಡಿದೆ. ಹಾಗೇ ಹಿಂದೂ ಸಂಘಟನೆಗಳು ಕೂಡ ಶ್ರೀರಾಮ ಮಂದಿರ ಉದ್ಘಾಟನೆಯ ಭಾಗವಾಗಿ ಅನಿವಾಸಿ ಭಾರತೀಯರ ಜೊತೆ ಸಂಭ್ರಮಿಸಲಿವೆ.












Click it and Unblock the Notifications