ಐರ್ಲೆಂಡ್ ಪ್ರಧಾನಿಯಾದ ಭಾರತೀಯ ಮೂಲದ 'ಸಲಿಂಗಿ' ಲಿಯೋ

Posted By:
Subscribe to Oneindia Kannada

ಐರ್ಲೆಂಡ್, ಜೂನ್ 14: ಭಾರತೀಯ ಮೂಲದ ಲಿಯೋ ವಾರಾಡ್ಕರ್ ಐರ್ಲೆಂಡ್ ನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. 38 ವರ್ಷಕ್ಕೇ ಪ್ರಧಾನಿ ಹುದ್ದೆಗೇರುವ ಮೂಲಕ, ಐರ್ಲೆಂಡ್ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಿಯೋ ಅವರು ಐರ್ಲೆಂಡ್ ನ ಪ್ರಧಾನಿ ಪಟ್ಟಕ್ಕೇರಿದ ಮೊಟ್ಟ ಮೊದಲ ಸಲಿಂಗಿಯಾಗಿದ್ದಾರೆ.ಲಿಯಾ ವಾರಾಡ್ಕರ್ ತಂದೆ ಅಶೋಕ್ ಎಂಬುವರು ಸುಮಾರು 47 ವರ್ಷಗಳ ಹಿಂದೆ (1970ರಲ್ಲಿ) ಐರ್ಲೆಂಡ್ ಗೆ ಹೋಗಿ ನೆಲೆಸಿದ್ದರು. ಇದೀಗ, ಅವರ ಕಿರಿಯ ಪುತ್ರ ಈಗ ಆ ದೇಶದ ಪ್ರಧಾನಿಯಾಗಿ ನೇಮಕಗೊಂಡು ಭಾರತೀಯರಿಗೆ ಹೆಮ್ಮೆ ತರುವಂಥ ಸಾಧನೆ ಮಾಡಿದ್ದಾರೆ.

Leo Varadkar scripts history, becomes Ireland's first gay PM

ವಾರಾಡ್ಕರ್ ಅವರು 2007ರಲ್ಲಿ ಮೊದಲ ಬಾರಿಗೆ ಐರ್ಲೆಂಡ್ ಸಂಸತ್ತಿಗೆ ಚುನಾಯಿತರಾಗಿದ್ದರು. ಇದೀಗ, ಆ ದೇಶದ ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ ಅಧಿಕಾರಾವಧಿಯು ಶೀಘ್ರದಲ್ಲೇ ಮುಗಿದಿದೆ.

ಅಧಿಕಾರ ಗದ್ದುಗೆ ಹಿಡಿದಿರುವ ಫೈನ್ ಗಾಯೆಲ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ವಾರಾಡ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಎಂಡಾ ಕೆನ್ನಿ ಅವರ ಸರ್ಕಾರದಲ್ಲಿ ಸಚಿವರಾಗಿ ಕೂಡಾ ಕರ್ತವ್ಯ ನಿರ್ವಹಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Leo Varadkar, a 38-year-old Indian- origin doctor, on Wednesday scripted history by becoming Ireland's youngest and the first openly gay prime minister.
Please Wait while comments are loading...