ವಿಮಾನಗಳಲ್ಲಿ ‘ಪೇಜರ್ಸ್’ ನಿಷೇಧ: ಇಸ್ರೇಲ್ ಬಗ್ಗೆ ಭಯವೇ ಕಾರಣ!

ಇಸ್ರೇಲ್ ವಿರುದ್ಧ ಈಗ ಇಡೀ ಮಧ್ಯಪ್ರಾಚ್ಯ ಕೊತ ಕೊತ ಕುದಿಯುತ್ತಿದೆ. ಯಾಕಂದ್ರೆ ಇದೇ ಇಸ್ರೇಲ್ ಕಾರಣಕ್ಕೆ 'ಪೇಜರ್ಸ್' ಸ್ಫೋಟಗೊಂಡು ಲೆಬನಾನ್ ನಲುಗಿದೆ ಎಂಬ ಆರೋಪವಿದೆ. ಈ ಕಾರಣಕ್ಕೆ ರಿವೇಂಜ್ ತೆಗೆದುಕೊಳ್ಳಲು ಇರಾನ್ ಕೂಡ ಕಾಯುತ್ತಿದೆ. ಪರಿಸ್ಥಿತಿ ಹೀಗೆ ಇದ್ದಾಗ ಮತ್ತಷ್ಟು ಸ್ಫೋಟಗಳು ಸಂಭವಿಸುವ ಭಯ ಆವರಿಸಿದ್ದು, ಇದೇ ಕಾರಣಕ್ಕೆ ಇದೀಗ ಹೊಸ ಐಡಿಯಾ ಮಾಡಲಾಗಿದೆ. ವಿಮಾನಗಳಲ್ಲಿ 'ಪೇಜರ್ಸ್' ನಿಷೇಧಿಸಿ ಲೆಬನಾನ್ ಆದೇಶ ನೀಡಿದೆ. ಹಾಗಾದ್ರೆ ದಿಢೀರ್ ಇಂತಹ ನಿರ್ಧಾರ ಏಕೆ? ಬನ್ನಿ ತಿಳಿಯೋಣ.

ಲೆಬನಾನ್ ಜನರ ಸ್ಥಿತಿ ಹೇಗೆ ಆಗಿದೆ ಅಂದ್ರೆ, ಮನೆ ಬಳಿ ಒಂದು ಸಣ್ಣ ಪಟಾಕಿ ಢಂ.. ಅಂದ್ರೂ ಸಾಕು ಭಯದಿಂದ ಹೊರಗೆ ಓಡಿ ಬರುವ ಸ್ಥಿತಿ ಇದೆ. ಯಾಕಂದ್ರೆ ಕೆಲವು ದಿನಗಳ ಹಿಂದಷ್ಟೇ ಈ ದೇಶದಲ್ಲಿ 'ಪೇಜರ್ಸ್' ಸೇರಿದಂತೆ ವಾಕಿ-ಟಾಕಿ & ಸೋಲಾರ್ ಪ್ಯಾನಲ್ ಬ್ಲಾಸ್ಟ್ ಆಗಿದ್ದವು. ಹೀಗಾಗಿ ಭಯದಲ್ಲೇ ಲೆಬನಾನ್ ಜನರು ನಲುಗಿ ಹೋಗಿದ್ದಾರೆ. ಮತ್ತೊಂದು ಕಡೆ ಈ ರೀತಿ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡ ಇದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಲೆಬನಾನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ವಿಮಾನಗಳಲ್ಲಿ ಪೇಜರ್ಸ್ ಹಾಗೂ ವಾಕಿಟಾಕಿ ಬಳಕೆ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

Lebanon Is Banned Pagers On Flights After Explosion

3,000ಕ್ಕೂ ಹೆಚ್ಚು ಜನರು ಗಂಭೀರ

ಮಧ್ಯಪ್ರಾಚ್ಯ ದೇಶಗಳ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೊ? ಎನ್ನುತ್ತಾ ಅಲ್ಲಿನ ಜನರು ದಿನ ದೂಡುತ್ತಿದ್ದಾರೆ. ಅದರಲ್ಲೂ ಲೆಬನಾನ್‌ & ಸಿರಿಯಾ ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಪೇಜರ್ಸ್ ಮತ್ತು ವಾಕಿಟಾಕಿಗಳು ಬ್ಲಾಸ್ಟ್ ಆಗಿದ್ದವು. ಈ ಘಟನೆಯ ಕಾರಣ ಹತ್ತಾರು ಜನ ಜೀವ ಕಳೆದುಕೊಂಡು 3,000ಕ್ಕೂ ಹೆಚ್ಚು ಜನರು ಗಂಭೀರ ಗಾಯಕ್ಕೆ ತುತ್ತಾಗಿ ಇವತ್ತಿಗೂ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಲೆಬನಾನ್ ದೇಶದಲ್ಲಿ ಪೇಜರ್ಸ್ ಮತ್ತು ವಾಕಿಟಾಕಿ ಬಳಕೆ ಮೇಲೆ ಕಠಿಣ ನಿಯಮ ಹೇರಿದ್ದು, ವಿಮಾನಗಳ ಬಳಿ ಸುಳಿಯದಂತೆ ಕ್ರಮ ವಹಿಸಲಾಗಿದೆ.

ಬಡ ರಾಷ್ಟ್ರಗಳಿಗೆ ತುಂಬಾ ಭಯ!

ಒಟ್ನಲ್ಲಿ ಪೇಜರ್ಸ್ & ವಾಕಿಟಾಕಿಗಳು ಸ್ಫೋಟಗೊಂಡ ಹಿನ್ನೆಲೆಯಲ್ಲಿ ಇದೀಗ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾವ ಕ್ಷಣದಲ್ಲಿ ಇಸ್ರೇಲ್ ವಿರುದ್ಧ ಇರಾನ್ & ಲೆಬನಾನ್ ಯುದ್ಧ ಘೋಷಣೆ ಮಾಡುತ್ತೋ? ಎನ್ನುವ ಆತಂಕ ಕೂಡ ಆವರಿಸಿದೆ. ಯಾಕಂದ್ರೆ ಈಗಾಗಲೇ ಜಗತ್ತಿನ ಹಲವು ಕಡೆ ಯುದ್ಧಗಳು ನಡೆಯುತ್ತಿವೆ. ಹೀಗಾಗಿ ಮತ್ತೊಂದು ಯುದ್ಧ ಶುರುವಾದರೆ ಅದು ನೇರವಾಗಿ ಬಡ ರಾಷ್ಟ್ರಗಳು & ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಪರಿಣಾಮವನ್ನ ಬೀರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+