ಹಸನ್ ನಸ್ರಲ್ಲಾ ಸಾವು: ಕಣ್ಣೀರು ಹಾಕಿದ ನ್ಯೂಸ್ ಆಂಕರ್!
ಇಸ್ರೇಲ್ ಮಿಲಿಟರಿಯ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಉಸಿರು ಚೆಲ್ಲಿದ ವಿಷಯ ಇದೀಗ ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಮಧ್ಯಪ್ರಾಚ್ಯ ಈ ಘಟನೆಯ ಬಳಿಕ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಮತ್ತೊಂದು ಮಹಾಯುದ್ಧ ಆರಂಭವಾಗುತ್ತಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಲೆಬನಾನ್ ಜನರು ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿಯನ್ನ ನೋವಿನಿಂದ ಸ್ವೀಕರಿಸಿದ್ದಾರೆ. ಜನರು ಮಾತ್ರ ಅಲ್ಲ, ನ್ಯೂಸ್ ಆಂಕರ್ ಒಬ್ಬರು ಕೂಡ ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿ ಓದುವಾಗ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.
ಹಿಜ್ಬುಲ್ಲಾ & ಇಸ್ರೇಲ್ ನಡುವೆ ದುಷ್ಮನಿ ಇವತ್ತು ಅಥವಾ ನಿನ್ನೆಯದ್ದಲ್ಲ. ಇಬ್ಬರ ನಡುವೆ ಹತ್ತಾರು ವರ್ಷಗಳಿಂದ ಇದೇ ರೀತಿ ಕಿತ್ತಾಟ ಇದ್ದು, ಒಬ್ಬರ ಮೇಲೊಬ್ಬರು ದಾಳಿ ಮಾಡಿದ್ದಾರೆ. ಹೀಗಿದ್ದಾಗ ದಿಢೀರ್ ಇಸ್ರೇಲ್ ಸೇನೆ ಲೆಬನಾನ್ ದಕ್ಷಿಣ ಭಾಗದ ಮೇಲೆ ಮುಗಿಬಿದ್ದಿದ್ದು, ಈ ಭೀಕರ ದಾಳಿಗೆ ಮಧ್ಯಪ್ರಾಚ್ಯ ನಲುಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಜೀವ ತೆಗೆದಿರುವ ಇಸ್ರೇಲ್‌ನ ಮಿಲಿಟರಿ, ಮತ್ತಷ್ಟು ಬಲಿಗಾಗಿ ಕಾದು ಕುಳಿತಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಇಂತಹ ಸಮಯದಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವಿನ ಸುದ್ದಿ ಪ್ರಕಟಿಸುವ ವೇಳೆ, ನ್ಯೂಸ್ ಆಂಕರ್ ಏನು ಮಾಡಿದ್ದಾರೆ ಗೊತ್ತಾ?

ನ್ಯೂಸ್ ಓದುವಾಗಲೇ ಇದೆಂತಹ ಘಟನೆ?
ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಮೃತಪಟ್ಟ ಸುದ್ದಿ ಇಸ್ರೇಲ್ ದೇಶದಲ್ಲಿ ಭಾರಿ ಖುಷಿ ಕೊಟ್ಟಿದ್ದರೆ, ಇನ್ನೊಂದು ಕಡೆ ಇರಾನ್, ಲೆಬನಾನ್, ಸಿರಿಯಾ ದೇಶದಲ್ಲಿ ಈ ಸುದ್ದಿ ಬೆಂಕಿ ಹಚ್ಚಿದೆ. ಅದರಲ್ಲೂ ನ್ಯೂಸ್ ಆಂಕರ್ ಸಮೇತ ಈ ಸುದ್ದಿ ಕೇಳಿ ಕಣ್ಣೀರು ಹಾಕಿರುವ ವಿಚಾರ ವೈರಲ್ ಆಗುತ್ತಿದೆ. ಲೆಬನಾನ್‌ನ ನ್ಯೂಸ್ ಚಾನಲ್ ಒಂದರ ಆಂಕರ್ ಒಬ್ಬರು ಈ ಸುದ್ದಿ ಓದುವಾಗ, ಅಂದ್ರೆ ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಮೃತಪಟ್ಟ ಸುದ್ದಿ ಓದುವಾಗ ಕಣ್ಣೀರು ಹಾಕಿದ್ದಾರೆ. ನ್ಯೂಸ್ ಆಂಕರ್ ಈ ರೀತಿಯಾಗಿ ಕಣ್ಣೀರು ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
A news anchor on the Hezbollah affiliated Al-Mayadeen news network, seen crying following the announcement that Hezbollah leader Hassan Nasrallah was killed by Israel. Via @sentdefender pic.twitter.com/Wad9Eq55oz
— Eretz Yisrael 24 (@EretzYisrael24) September 29, 2024
ಆಂಕರ್ ಅಳುವ ವಿಡಿಯೋ ವೈರಲ್
ಹಿಜ್ಬುಲ್ಲಾ ಸಂಘಟನೆಗೆ ಲೆಬನಾನ್ ನಾಗರಿಕರು ಕೂಡ ಬೆಂಬಲ ನೀಡುತ್ತಾರೆ. ಹೀಗಿದ್ದಾಗಲೇ ಅಲ್ಲಿನ ಪತ್ರಕರ್ತರು ಕೂಡ ಹಿಜ್ಬುಲ್ಲಾಗೆ ಬೆಂಬಲ ನೀಡುತ್ತಾರಾ? ಎಂಬ ಪ್ರಶ್ನೆ ನ್ಯೂಸ್ ಆಂಕರ್ ಅಳುತ್ತಿರುವ ವಿಡಿಯೋ ನೋಡಿದ ನಂತರ ಎಲ್ಲೆಲ್ಲೂ ಕಾಡತೊಡಗಿದೆ. ಅಲ್ ಮಯಾದೀನ್ ನ್ಯೂಸ್ ಚಾನೆಲ್‌ನ ನಿರೂಪಕಿ ಈ ರೀತಿಯಾಗಿ ಕಣ್ಣೀರು ಹಾಕಿದ್ದು, ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವಿನ ನೋವು ತೋಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಹಿಜ್ಬುಲ್ಲಾ ಮುಖ್ಯಸ್ಥ ಶೇಕ್ ಹಸನ್ ನಸ್ರಲ್ಲಾ ಸಾವು ಇದೀಗ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಶೇಕ್ ಹಸನ್ ನಸ್ರಲ್ಲಾ ಸಾವಿನ ಬಗ್ಗೆ ಇಸ್ರೇಲ್ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications