ಭಾರತಕ್ಕೆ ಕೊಹಿನೂರು ವಜ್ರ ಹಿಂತಿರುಗಿಸಿ, ಕ್ವೀನ್ ವಿರುದ್ಧ ಕೇಸ್

ಲಂಡನ್, ನ.09: ಭಾರತದ ಅರಸದಿಂದ ಬಲವಂತವಾಗಿ ವಶ ಪಡಿಸಿಕೊಂಡಿರುವ ಕೊಹಿನೂರ್‌ ವಜ್ರವನ್ನು ಬ್ರಿಟನ್‌ನಿಂದ ಮರಳಿ ಭಾರತಕ್ಕೆ ತರಲು ಬಾಲಿವುಡ್ ತಾರೆಯರು, ಉದ್ಯಮಿಗಳ ಗುಂಪೊಂದು ಯತ್ನಿಸುತ್ತಿದೆ. ಕೊಹಿನೂರ್ ವಜ್ರವನ್ನು ಹಿಂತಿರುಗಿಸುವಂತೆ ಕೋರಿ ಕ್ವೀನ್ ಎಲಿಜಬೆತ್ II ವಿರುದ್ಧ ಕಾನೂನು ಸಮರ ಸಾರಲಾಗಿದೆ.

ಮಹಾರಾಜಾ ರಣಜಿತ್‌ಸಿಂಗ್‌ನ ಪುತ್ರ ದಲೀಪ್‌ ಸಿಂಗ್‌ರಿಂದ ಕೊಹಿನೂರು ವಜ್ರವನ್ನು ಬ್ರಿಟಿಷ್ ರಾಣಿ ವಶಪಡಿಸಿಕೊಂಡಿದ್ದಾರೆ. ಕೊಹಿನೂರು ವಜ್ರವನ್ನು ಲಂಡನ್ನಿನ ಮ್ಯೂಸಿಯಂನಲ್ಲಿಡುವ ಬದಲು ಭಾರತಕ್ಕೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಕ್ವೀನ್ ಎಲಿಜಬೆತ್ ವಿರುದ್ಧ 100 ಮಿಲಿಯನ್ ಪೌಂಡ್ ಮೊತ್ತದ ಮೊಕದ್ದಮೆ ಹೂಡಲಾಗಿದೆ.

Koh-i-noor to be back in India?

ಪ್ರಧಾನಿ ನರೇಂದ್ರ ಮೋದಿ ಅವರು ಯುಕೆ ಪ್ರವಾಸ ಕೈಗೊಳ್ಳುವ ವೇಳೆಯಲ್ಲಿ ಈ ಕೊಹಿನೂರು ವಜ್ರವನ್ನು ಮರಳಿಸಿದರೆ ಭಾರತ ಹಾಗೂ ಯುನೈಟೆಡ್ ಕಿಂಗ್ಡಮ್ ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ನಟಿ ಭೂಮಿಕಾ ಸಿಂಗ್ ಹೇಳಿದ್ದಾರೆ.

ಸುಮಾರು 105 ಕ್ಯಾರೆಟ್ ನ ಕೊಹಿನೂರು ವಜ್ರ, ಪ್ರಪಂಚದ ದೊಡ್ಡ ವಜ್ರಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಗುಂಟೂರು ಇದರ ಮೂಲ ಎನ್ನಲಾಗಿದೆ.

ಹಿಂದೂ ರಾಜರು, ಮೊಘಲರು, ಪರ್ಷಿಯನ್ನರು, ಅಫ್ಘನ್ನರು, ಸಿಖ್ಖರು ಹಾಗೂ ಬ್ರಿಟಿಷ್ ಅಧಿಕಾರಿಗಳು ಈ ವಜ್ರಕ್ಕಾಗಿ ಸಮರ ಸಾರಿದ್ದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಕೊನೆಗೆ ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ರಾಣಿ ವಿಕ್ಟೋರಿಯಾ ಆಳ್ವಿಕೆ ಕಾಲದಲ್ಲಿ ಬ್ರಿಟಿಷರ ಕೈ ಸೇರಿತು. ಯುನೆಸ್ಕೋ ನೆರವಿನೊಂದಿಗೆ ಭಾರತೀಯ ಪುರಾತತ್ವ ಇಲಾಖೆ(ASI) ಕೊಹಿನೂರು ವಜ್ರವನ್ನು ಭಾರತಕ್ಕೆ ತರಲು ಇನ್ನಿಲ್ಲದ್ದಂತೆ ಪ್ರಯತ್ನ ನಡೆಸಿ ವಿಫಲವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+