ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಟಿಲೇಟರ್‌ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!

|
Google Oneindia Kannada News

ನ್ಯೂಯಾರ್ಕ್ ಆಗಸ್ಟ್ 13: ಭಾರತೀಯ ಮೂಲದ ಕಾದಂಬರಿಕಾರ ಮತ್ತು ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರು ದಾಳಿಯ ಬಳಿಕ ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ನ್ಯೂಯಾರ್ಕ್‌ನ ಬಫಲೋ ಬಳಿಯ ಚೌಟಕ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಲಾಯಿತು. ಸಲ್ಮಾನ್ ರಶ್ದಿ ಮೇಲೆ 10-15 ಬಾರಿ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಸಲ್ಮಾನ್ ರಶ್ದಿ ಅವರು ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಪ್ರಸ್ತುತ ವೆಂಟಿಲೇಟರ್‌ನಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಅವರು ಒಂದು ಕಣ್ಣಿನಲ್ಲಿ ದೃಷ್ಟಿ ಕಳೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸಲ್ಮಾನ್ ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಅವರು, ಸಲ್ಮಾನ್ ರಶ್ದಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸಲ್ಮಾನ್ ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲ್ಲಿ, "ಪರಿಸ್ಥಿತಿ ಚೆನ್ನಾಗಿಲ್ಲ. ಸಲ್ಮಾನ್ ಅವರು ಕಣ್ಣು ಕಳೆದುಕೊಂಡಿರುವ ಸಾಧ್ಯತೆಯಿದೆ. ಅವರ ತೋಳಿನಲ್ಲಿ ಮೂಳೆ ಮುರಿದುಹೋಗಿದ್ದು ಅವರು ಸಂಪೂರ್ಣವಾಗಿ ಹಾನಿಗೊಳಗಾಗಿದ್ದಾರೆ" ಎಂದಿದ್ದಾರೆ.

ಘಟನೆಯ ಹಿಂದಿನ ಉದ್ದೇಶ ನಿಗೂಢ

ಘಟನೆಯ ಹಿಂದಿನ ಉದ್ದೇಶ ನಿಗೂಢ

ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ರಶ್ದಿ ಕುತ್ತಿಗೆ ಮತ್ತು ದೇಹಕ್ಕೆ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ವೇಳೆ ಹೊಟ್ಟೆಗೂ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ನ್ಯೂಯಾರ್ಕ್ ಸ್ಟೇಟ್ ಪೊಲೀಸರು ಸಲ್ಮಾನ್ ರಶ್ದಿಯ ಮೇಲೆ ದಾಳಿ ಮಾಡಿದ ಶಂಕಿತನನ್ನು ನ್ಯೂಜೆರ್ಸಿಯ 24 ವರ್ಷದ ಹಾದಿ ಮಾತರ್ ಎಂದು ಗುರುತಿಸಿದ್ದಾರೆ. ಆದರೆ, ಈ ಘಟನೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಭಾರತೀಯ ಮೂಲದ ಬ್ರಿಟಿನ್ ಬರಹಗಾರ ರಶ್ದಿ ಅವರು ತಮ್ಮ 'ದಿ ಸೈಟಾನಿಕ್ ವರ್ಸಸ್' ಪುಸ್ತಕಕ್ಕಾಗಿ ಇರಾನ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು. ಸಲ್ಮಾನ್ ರಶ್ದಿಯವರ ಈ ಪುಸ್ತಕ 1988 ರಲ್ಲಿ ಬಿಡುಗಡೆಯಾಯಿತು.

ಹಾದಿ ಮಾತರ್ ಯಾರು?

ಹಾದಿ ಮಾತರ್ ಯಾರು?

ನ್ಯೂಯಾರ್ಕ್ ಪೊಲೀಸರು ಶಂಕಿತನನ್ನು ನ್ಯೂಜೆರ್ಸಿಯ ಫೇರ್‌ವ್ಯೂನಿಂದ ಬಂಧಿಸಿದ್ದಾರೆ. ಬಂಧಿತನನ್ನು ಹದಿ ಮತರ್ (24) ಎಂದು ಗುರುತಿಸಲಾಗಿದೆ. ನ್ಯೂಯಾರ್ಕ್ ಸ್ಟೇಟ್ ಪೋಲೀಸ್‌ನ ಮೇಜರ್ ಯುಜೀನ್ ಸ್ಟಾನಿಸ್ಜೆವ್ಸ್ಕಿ ಶುಕ್ರವಾರ ಮಾಧ್ಯಮಗಳಿಗೆ ಮಾತನಾಡಿ, ಶಂಕಿತ ಹಾದಿ ಮಾತರ್ ವೇದಿಕೆಯ ಮೇಲೆ ಹಾರಿ "ಕನಿಷ್ಠ ಒಮ್ಮೆ ಕುತ್ತಿಗೆಗೆ ಮತ್ತು ಒಮ್ಮೆಯಾದರೂ ಹೊಟ್ಟೆಗೆ ಇರಿದ" ಎಂದು ಹೇಳಿದರು.

ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದ್ದ ದಾಳಿಕೋರ

ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದ್ದ ದಾಳಿಕೋರ

ರಶ್ದಿ ಭಾಷಣ ಮಾಡಲಿರುವ ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರು, ಮೈದಾನವನ್ನು ಪ್ರವೇಶಿಸಲು ಪಾಸ್ ಹೊಂದಿದ್ದರು. ಈ ವೇಳೆ ದಾಳಿಕೋರ ಪಾಸ್‌ ಪಡೆದು ಉಪನ್ಯಾಸದ ವೇದಿಗಕೆಗೆ ಆಗಮಿಸಿದ್ದಾನೆ ಎಂದು ಹೇಳಿದರು. ಅಧಿಕಾರಿಗಳು "ವಿವಿಧ ವಸ್ತುಗಳಿಗೆ ಸರ್ಚ್ ವಾರಂಟ್‌ಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ. ಘಟನಾ ಸ್ಥಳದಲ್ಲಿ ಬೆನ್ನುಹೊರೆಯಿತ್ತು. ಎಲೆಕ್ಟ್ರಾನಿಕ್ ಸಾಧನಗಳೂ ಇದ್ದವು" ಎಂದು ಮೇಜರ್ ಸ್ಟಾನಿಸ್ಜೆವ್ಸ್ಕಿ ಹೇಳಿದರು.

ಆರಂಭಿಕ ಹಂತದಲ್ಲಿ ತನಿಖೆ

ಆರಂಭಿಕ ಹಂತದಲ್ಲಿ ತನಿಖೆ

ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಸದ್ಯಕ್ಕೆ ಯಾವುದೇ ಉದ್ದೇಶದ ಸೂಚನೆಯಿಲ್ಲ ಎಂದು ಅವರು ಹೇಳಿದರು. ದಾಳಿಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ನ್ಯೂಯಾರ್ಕ್ ಪೊಲೀಸರು ಎಫ್‌ಬಿಐ ಮತ್ತು ಶೆರಿಫ್ ಕಚೇರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ಟಾನಿಸ್ಜೆವ್ಸ್ಕಿ ಹೇಳಿದರು.

ಈ ಸಮಯದಲ್ಲಿ, ಶಂಕಿತ ವ್ಯಕ್ತಿಯು "ಒಬ್ಬನೇ ಕೆಲಸ ಮಾಡುತ್ತಿದ್ದಾನೆ" ಎಂದು ಭಾವಿಸಲಾಗಿದೆ. ಆದರೆ ಅದು ನಿಜವೆಂದು ಖಚಿತಪಡಿಸಿಕೊಳ್ಳಲು ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

Recommended Video

Chamarajpeteಯಲ್ಲಿ Zameer ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಅದ್ಧೂರಿ ಚಾಲನೆ | *Karnataka |OneIndia Kannada

English summary
Salman Rushdie on ventilator, also at risk of loss of eyesight, know how is the author's condition after the attack. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X