ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ತೂಕ ಇಳಿಕೆಯ ಬಳಿಕ ವಿಡಿಯೋ ವೈರಲ್
ಉತ್ತರ ಕೊರಿಯಾ, ಜೂ.28: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಧಿಡೀರ್ ತೆಳ್ಳಗಾಗಿರುವುದೇ ಈಗ ಚರ್ಚೆಯ ವಿಚಾರವಾಗಿದೆ. ರಾಜ್ಯದ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೆಳ್ಳಗಾಗಿರುವ ಕಿಮ್ ವಿಡಿಯೋಗಳು ವೈರಲ್ ಆಗುತ್ತಿದೆ. "ಬಹುಶಃ, ಕಿಮ್ ಡಯಟ್ ಮಾಡುತ್ತಿರಬೇಕು" ಎಂದು ಉತ್ತರ ಕೊರಿಯಾದ ನಾಯಕನ ವೀಡಿಯೋ ತಡವಾಗಿ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಹಲವಾರು ಮಾಧ್ಯಮಗಳು ಕಿಮ್ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಮಾಡಿದ್ದವು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಧಿಡೀರ್ ತೆಳ್ಳಗಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಕಿಮ್ ಜೊಂಗ್ ಉನ್‌ರ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಊಹಾಪೋಹ ಸೃಷ್ಟಿಗೆ ಎಡೆಮಾಡಿಕೊಟ್ಟಿತ್ತು.
37 ವರ್ಷ ವಯಸ್ಸಿವರು ಎಂದು ಹೇಳಲಾದ ನಿರಂಕುಶಾಧಿಕಾರಿ ನಾಯಕನು ''ಗಮನಾರ್ಹವಾದ ತೂಕವನ್ನು ಕಳೆದುಕೊಂಡಿರುವುದು ಕಂಡುಬಂದಿದೆ,'' ಎಂದು ವಿದೇಶಿ ವಿಶ್ಲೇಷಕರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕಿಮ್ ಜೊಂಗ್ ಉನ್ ತೂಕ ಇಳಿಕೆಯ ಬಗ್ಗೆ ಉತ್ತರ ಕೊರಿಯಾದ ಜನರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದು ಪಯೋಂಗ್‌ಯಾಗ್‌ನ ಅಪರಿಚಿತ ನಿವಾಸಿ ನಾಯಕನ ಇತ್ತೀಚಿನ ವೀಡಿಯೊ ತುಣುಕನ್ನು ನೋಡಿದ ನಂತರ ಅಭಿಪ್ರಾಯಿಸಿದ್ದಾರೆ ಎಂದು ಕೂಡಾ ವರದಿಯಾಗಿದೆ.
ವೈರಲ್ ವೀಡಿಯೊದಲ್ಲಿ, ಕಿಮ್ ಜೊಂಗ್ ಉನ್ ಮತ್ತು ಕಿಮ್‌ನ ಪಕ್ಷದ ಅಧಿಕಾರಿಗಳು ಭಾಗವಹಿಸಿದ ಸಂಗೀತ ಕಾರ್ಯಕ್ರಮವೊಂದರ ದೃಶ್ಯವಿದೆ. ಬೀದಿಯಲ್ಲಿ ದೊಡ್ಡ ಪರದೆಯಲ್ಲಿ ಈ ವಿಡಿಯೋವನ್ನು ನೀಡಿದ ಪಯೋಂಗ್‌ಯಾಗ್‌ನ ನಿವಾಸಿಗಳು, ಇಷ್ಟೊಂದು ತೂಕ ಕಳೆದುಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವಾರು ಮಾಧ್ಯಮಗಳು ಕಿಮ್‌ನ ಈ ಹಿಂದಿನ ವಿಡಿಯೋ ಹಾಗೂ ಈಗೀನ ವಿಡಿಯೋವನ್ನು ತುಲನೆ ಮಾಡಿ ವ್ಯತ್ಯಾಸ ವರದಿ ಮಾಡುತ್ತಿದೆ.
Before-and-after videos show that North Korean leader Kim Jong Un noticeably lost weight. On Sunday, the country's state media offered a rare public segment on it, although the reason for the weight loss is unclear https://t.co/RhQEqL7dXH pic.twitter.com/H9szU1rA1W
— Reuters (@Reuters) June 27, 2021
ಇನ್ನು ಕಿಮ್ ತನ್ನ ತೂಕ ನಷ್ಟದ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡದಿರುವುದು ಕೆಲವೊಂದು ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆ ಪುಕ್ಕ ಸೃಷ್ಟಿಸಿದೆ.
ಏತನ್ಮಧ್ಯೆ, ಉತ್ತರ ಕೊರಿಯಾ ಮೇಲ್ವಿಚಾರಣೆ ಮಾಡುವ ಸಿಯೋಲ್ ಮೂಲದ ಎನ್‌ಕೆ ನ್ಯೂಸ್, ಕಿಮ್ ಜೊಂಗ್ ಉನ್‌ನ ಕೈಗಡಿಯಾರದ ಮೂಲಕ ತೂಕ ನಷ್ಟವನ್ನು ಸ್ಪಷ್ಟವಾಗಿ ಗುರುತಿಸಿದೆ. ಮೊದಲಿಗಿಂತ ಹೆಚ್ಚು ಬಿಗಿಯಾಗಿ ಈ ವಾಚ್ ಅನ್ನು ಕಟ್ಟಲಾಗಿದೆ ಎಂದು ಈ ಮಾಧ್ಯಮ ವರದಿ ಮಾಡಿದೆ.
ಕಿಮ್‌ನ ದೇಹದ ತೂಕ ಭಾರೀ ಕಡಿಮೆಯಾಗಿರುವುದು ಸುಮಾರು ಒಂದು ತಿಂಗಳ ಬಳಿಕ ರಾಜ್ಯ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿತ್ತು. ಉತ್ತರ ಕೊರಿಯಾದ ಸರ್ವೋಚ್ಚ ನಾಯಕನ ಇತ್ತೀಚಿನ ವ್ಯಕ್ತಿತ್ವದ ವಿವರವಾದ ವಿಶ್ಲೇಷಣೆಯನ್ನು ಎನ್‌ಕೆ ನ್ಯೂಸ್ ಮಾಡಿತ್ತು. ಈ ವರದಿಯಲ್ಲಿ 2020 ರ ನವೆಂಬರ್‌ನಲ್ಲಿ ಬಿಡುಗಡೆಯಾದ ಕಿಮ್ ಛಾಯಾಚಿತ್ರ ಹಾಗೂ ಪ್ರಸ್ತುತ ಛಾಯಾಚಿತ್ರಗಳನ್ನು ವಿಶ್ಲೇಷಿಸಲಾಗಿತ್ತು. ವಿಡಿಯೋವೊಂದನ್ನು ಗಮನಿಸಿದಾಗ ಕಿಮ್ ದೇಹದ ತೂಕ ತೆಳ್ಳಗಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ವರದಿಯ ಪ್ರಕಾರ, ''ಕಿಮ್ ಜೊಂಗ್-ಉನ್ ನವೆಂಬರ್ 2020 ರಲ್ಲಿ ಸುಮಾರು 140 ಕೆಜಿ ತೂಕವಿದ್ದರು. 2011 ರಲ್ಲಿ ತಾನು ಅಧಿಕಾರ ಸ್ವೀಕರಿಸಿದ ದಿನದಿಂದ ನವೆಂಬರ್ 2020 ರವರೆಗೆ ಸುಮಾರು 50 ಕೆಜಿ ತೂಕ ಹೆಚ್ಚಾಗಿತ್ತು. ಕಿಮ್ ತೂಕ ನಷ್ಟವು ಜೀವನಶೈಲಿಯ ಬದಲಾವಣೆ ಅಥವಾ ಆರೋಗ್ಯ ಸಮಸ್ಯೆಯಿಂದ ಆಗಿರಬಹುದು'' ಎಂದು ಊಹಿಸಲಾಗಿದೆ.
(ಒನ್‌ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications