Kim Jong Un: ಟೆನ್ಷನ್ ಬಿಟ್ಟು ಸ್ಪಾ ಕಡೆ ಹೊರಟ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ವಿಡಿಯೋ ವೈರಲ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಷ್ಟು ಕ್ರೂರಿ, ಇಷ್ಟು ಕ್ರೂರಿ ಅಂತೆಲ್ಲಾ ಆಗಾಗ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅದರಲ್ಲೂ ಉತ್ತರ ಕೊರಿಯಾ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ನೀಡುವ ಶಿಕ್ಷೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅತ್ಯಂತ ಕ್ರೂರವಾಗಿ ಅಧಿಕಾರಿಗಳ ಕಥೆ ಮುಗಿಸಿದ ಹಿನ್ನೆಲೆ ಕೂಡ ಕಿಮ್ ಜಾಂಗ್ ಉನ್ ಆಡಳಿತಕ್ಕೆ ಇದೆ. ಹೀಗೆಲ್ಲಾ ಇದ್ದರೂ ಕಿಮ್ ಜಾಂಗ್ ಉನ್ ಬಗ್ಗೆ ಉತ್ತರ ಕೊರಿಯಾದಲ್ಲಿ ಉಸಿರು ಎತ್ತಲು ಆಗಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ಟೆನ್ಷನ್ ಬಿಟ್ಟು ಸ್ಪಾ ಕಡೆ ಹೊರಟ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಡಿದ್ದು ಏನು ಗೊತ್ತಾ?

ಹೌದು, ಉತ್ತರ ಕೊರಿಯಾ ಸದಾ ಒಂದಿಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಅತ್ತ ಕ್ಷಿಪಣಿ ಪರೀಕ್ಷೆ ಅಥವಾ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಕಿಮ್ ಸೌಂಡ್ ಮಾಡಿದ್ದು ಆಗಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಕಿಮ್ ಜಾಂಗ್ ಉನ್ ದಿಢೀರ್ ಉತ್ತರ ಕೊರಿಯಾದಲ್ಲಿರುವ ಸ್ಪಾಗೆ ಭೇಟಿ ಕೊಟ್ಟು, ಭರ್ಜರಿಯಾಗಿ ಮಿಂಚಿರುವ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚೆಗೆ ಸೋಷಿಲ್ ಮೀಡಿಯಾ ವೇದಿಕೆಯಲ್ಲಿ ಕಿಮ್ ಜಾಂಗ್ ಉನ್ ವಿಡಿಯೋ ವೈರಲ್ ಆಗಿದ್ದು, ಉತ್ತರ ಕೊರಿಯಾದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸದಾಗಿ ಕಟ್ಟಿಸಿರುವ ಐಷಾರಾಮಿ ರೆಸಾರ್ಟ್‌ಗೆ ಕಿಮ್ ಜಾಂಗ್ ಉನ್ ಭೇಟಿ ನೀಡಿರುವ ವಿಡಿಯೋ ಹಲ್‌ಚಲ್ ಎಬ್ಬಿಸಿದೆ. ಜನವರಿ 21 ಬುಧವಾರ ಕಿಮ್ ಈ ಭೇಟಿ ಕೈಗೊಂಡ ಬಗ್ಗೆ ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

Kim Jong Un

ಸರ್ವಾಧಿಕಾರಿ ನೋಡಿ ಜನರು ಖುಷ್

ಕಿಮ್ ಈ ವಿಡಿಯೋದಲ್ಲಿ ಫುಲ್ ಬಿಂದಾಸ್ ಆಗಿ ಓಡಾಡುವುದನ್ನು ಕಾಣಬಹುದಾಗಿದ್ದು, ರೆಸಾರ್ಟ್‌ನಲ್ಲಿ ಜನರು ಬಿಸಿ ನೀರಿನ ಜೊತೆಗೆ ಎಂಜಾಯ್ ಮಾಡುವ ವೇಳೆ ಕಿಮ್ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಆ ಸಮಯದಲ್ಲಿ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಕಪ್ಪು ಜಾಕೆಟ್ ಮತ್ತು ಪ್ಯಾಂಟ್ ಹಾಕಿಕೊಂಡು ಎಂಟ್ರಿ ಕೊಟ್ಟಿರುವ ಕಿಮ್ ಕಂಡು ಜನರು ಕೂಡ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಅಕಸ್ಮಾತ್ ಖುಷಿಯಾಗಿ ಮಾತನಾಡದೇ ಇದ್ದರೆ ಅವರ ಕಥೆ ಅಷ್ಟೇ ಅನ್ನೋದು ಅವರಿಗೂ ಗೊತ್ತು, ಹೀಗಾಗಿಯೇ ಅವರು ಖುಷಿಯಾಗಿ ಮಾತನಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಉ.ಕೊರಿಯಾ ಆಡಳಿತದ ಬಗ್ಗೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+