ಇರಾನ್ ಮಾತ್ರವಲ್ಲ ಉತ್ತರ ಕೊರಿಯಾ ಸರ್ವಾಧಿಕಾರಿ ನಡೆಗೆ ಬೆಚ್ಚಿಬಿದ್ದ ಅಮೆರಿಕ | Kim Jong Un
ಇರಾನ್ ವಿರುದ್ಧ ಘೋರ ಯುದ್ಧವನ್ನೇ ಶುರು ಮಾಡಿದ ನಂತರ ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಹೊಸ ಹೊಸ ತಂತ್ರ ಹೆಣೆಯುತ್ತಿವೆ. ಇರಾನ್ ತಮಗೆ ಸುಲಭದ ತುತ್ತು ಎಂದು ಭಾವಿಸಿದ್ದ ಅಮೆರಿಕ ಹಾಗೂ ಇಸ್ರೇಲ್‌ಗೆ ಈಗ ಕಠಿಣ ಸವಾಲು ಎದುರಾಗುತ್ತಿದೆ. ಇಂತಹ ಸಮಯದಲ್ಲೇ ಅತ್ತ ಉ. ಕೊರಿಯಾ ಸರ್ವಾಧಿಕಾರಿ ಕೂಡ ಅಮೆರಿಕ ಮತ್ತು ಮಿತ್ರ ದೇಶಗಳಿಗೆ ಭಯ ಮೂಡಿಸಿದ್ದಾನೆ. ಇಷ್ಟೆಲ್ಲದರ ನಡುವೆ ಕೂಡ ಮತ್ತೊಮ್ಮೆ ಕಿಮ್ ಜಾಂಗ್ ಉನ್ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾನೆ.
ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಒಂದು ಕ್ಷಣ ಈ ಜಗತ್ತಿನ ಯಾವುದೇ ದೇಶವಾದ್ರು ಭಯ ಪಡುವುದು ಗ್ಯಾರಂಟಿ, ಯಾಕಂದ್ರೆ ಕಿಮ್ ಜಾಂಗ್ ಉನ್ ಇಟ್ಟಿರುವ ಹವಾ ಅಂತಹದ್ದು. ಕಿಮ್ ಒಮ್ಮೆ ಗುಡುಗಿದರೆ ಸಾಕು ದೂರ ದೂರದಲ್ಲಿ ಇರುವ ದೇಶಗಳು ಕೂಡ ಒಂದು ಕ್ಷಣ ಭಯಪಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೆರೆಯ ದೇಶ ದಕ್ಷಿಣ ಕೊರಿಯಾಗೆ ಹಾಗೂ ಜಪಾನ್‌ಗೆ ಗ್ರಹಚಾರ ಎದುರಾಗಿದೆ. ಯಾಕಂದ್ರೆ ಈಗ ಶೇಕಡಾ 100ರಷ್ಟು ಮತ ಪಡೆದು ಮತ್ತೆ ಗೆದ್ದು ಬೀಗಿದ್ದಾನೆ ಸರ್ವಾಧಿಕಾರಿ, ಈ ಮೂಲಕ ಉತ್ತರ ಕೊರಿಯಾಗೆ ಮತ್ತೆ ಕಿಮ್ ಜಾಂಗ್ ಉನ್ ಬಾಸ್ ಆಗಿದ್ದಾನೆ.

ಚುನಾವಣೆ ಫಲಿತಾಂಶದಲ್ಲಿ ಭರ್ಜರಿ ಗೆಲುವು
ಜಾಗತಿಕ ರಾಜಕೀಯ ವೇದಿಕೆಯಲ್ಲಿ ಇತ್ತೀಚೆಗೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿ ಗಮನ ಸೆಳೆದಿದ್ದ. ತನ್ನ ದೇಶದಲ್ಲಿ ಹೆಸರಿಗೆ ಮಾತ್ರ ಚುನಾವಣೆಯನ್ನ ನಡೆಸುವ ಕಿಮ್, ಎದುರಾಳಿ ಇಲ್ಲದ ರೀತಿ ಒತ್ತಡ ಹಾಕುತ್ತಾನೆ. ಈ ಮೂಲಕ ತಾನೇ ಗೆದ್ದು ಬೀಗುವ ವಾತಾವರಣ ಸೃಷ್ಟಿ ಮಾಡಿಕೊಳ್ಳುತ್ತಾನೆ. ಈಗ ಕೂಡ ಅಷ್ಟೇ, 2026 ಉತ್ತರ ಕೊರಿಯಾ ಸರ್ವಾತ್ರಿಕ ಚುನಾವಣೆ ಅಖಾಡದಲ್ಲಿ ಕಿಮ್ ಗೆದ್ದಿದ್ದಾನೆ. ಒಟ್ಟು ಮತ ಪ್ರಮಾಣದಲ್ಲಿ ಶೇಕಡಾ 99.93 ಮತಗಳ ಪ್ರಮಾಣವನ್ನು ಕಿಮ್ ಜಾಂಗ್ ಉನ್ ಪಡೆಯುವ ಮೂಲಕ, ಮತ್ತೊಮ್ಮೆ ಉತ್ತರ ಕೊರಿಯಾ ದೇಶದ ಅಧ್ಯಕ್ಷನಾಗಿ ಆಯ್ಕೆ ಆಗಿದ್ದಾನೆ.
ಮತದಾನ ನಡೆದಿದ್ದು ಯಾವಾಗಾ?
ಕಳೆದ ಭಾನುವಾರ ಎಂದರೆ ಮಾರ್ಚ್ 15ಕ್ಕೆ ಉತ್ತರ ಕೊರಿಯಾ ಅಧ್ಯಕ್ಷನ ಆಯ್ಕೆಗೆ ಚುನಾವಣೆ ನಡೆಸಿ, ಮತದಾನ ಮಾಡಿಸಲಾಗಿತ್ತು. ಹೀಗೆ ನಡೆದ ಚುನಾವಣೆಯಲ್ಲಿ ಅಧಿಕೃತವಾಗಿ ಶೇಕಡಾ 99.99 ವೋಟ್ ಆಗಿತ್ತು. ಆಡಳಿತಾರೂಢ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ & ಅದರ ಮಿತ್ರ ಪಕ್ಷಗಳು 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಶೇಕಡಾ 99.93 ರಷ್ಟು ಮತ ಪಡೆದು ಗೆದ್ದು ಬೀಗಿವೆ. ಈ ಮೂಲಕ ಮತ್ತೊಮ್ಮೆ ಕಿಮ್ ಜಾಂಗ್ ಉನ್ ಅಧ್ಯಕ್ಷನಾಗಿ ಆಯ್ಕೆ ಕೂಡ ಆಗಿದ್ದಾನೆ. ಇದು ಎದುರಾಳಿ ದೇಶಗಳ ಎದೆಯಲ್ಲಿ ಭಯ ಮೂಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಕಿಮ್ ಸುಮಾರು 10 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಆತಂಕ ಹುಟ್ಟಿಸಿದ್ದ, ಇದೀಗ ಜಪಾನ್ ಮತ್ತು ದಕ್ಷಿಣ ಕೊರಿಯಾ ನಾಯಕರ ಎದೆ ನಡುಗುವಂತೆ ಮಾಡಿದ್ದಾನೆ ಕಿಮ್ ಜಾಂಗ್ ಉನ್ ಮತ್ತೊಮ್ಮೆ.












Click it and Unblock the Notifications