World War: ‘ಗೋಮುಖ ವ್ಯಾಘ್ರ’ ಅಮೆರಿಕ, ಹೀಗೆ ಹೇಳಿದ್ದು ಯಾರು?

ಮನುಷ್ಯರು ಭೂಮಿ ಮೇಲೆ ನೆಮ್ಮದಿಯಾಗಿ ಬದಕುವುದು ಕೆಲವರಿಗೆ ಇಷ್ಟವೇ ಇಲ್ಲ ಅಂತ ಕಾಣುತ್ತೆ. ಅದ್ರಲ್ಲೂ ಅಮೆರಿಕ ತೆಗೆದುಕೊಳ್ಳುತ್ತಿರುವ ಎಡವಟ್ಟು ನಿರ್ಧಾರಗಳು ಈಗ ಅದೇ ದೇಶದ ಬುಡಕ್ಕೆ ಬತ್ತಿ ಇಡುವ ಜೊತೆಗೆ, ಭೂಮಿಯ ಮೇಲೆ ಮತ್ತೊಂದು ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದೆ ಅನ್ನೋ ಆರೋಪ ಕೇಳಿಬಂದಿದೆ. ಇದೆಲ್ಲಾ ಸಾಲದು ಅಂತಾ ಈಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಮೆರಿಕದ ಎದೆ ನಡುಗಿಸಿದ್ದಾನೆ.

ನಿಮಗೆಲ್ಲ ಗೊತ್ತಿರುವಂತೆ ಈಗಾಗಲೇ ಉತ್ತರ ಕೊರಿಯಾ ತನ್ನ ಮೊಟ್ಟ ಮೊದಲನೇ ಸೇನಾ ಉಪಗ್ರಹ ಉಡಾವಣೆ ಮಾಡಿದೆ. ಪಾಶ್ಚಿಮಾತ್ಯ ದೇಶಗಳು, ಉತ್ತರ ಕೊರಿಯಾದ ಶತ್ರುಗಳು ಉತ್ತರ ಕೊರಿಯಾದ ಈ ಉಪಗ್ರಹವನ್ನು ಗೂಢಾಚಾರ ಉಪಗ್ರಹ ಎಂದು ಕರೆದಿದ್ದಾರೆ. ಈ ಸಮಯದಲ್ಲೇ ಅಮೆರಿಕ ಕೂಡ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ವಿಧ ವಿಧದ ಆರೋಪ ಮಾಡುತ್ತಿದೆ. ಈ ಆರೋಪಗಳ ಪರಿಣಾಮ, ಉತ್ತರ ಕೊರಿಯಾ ಈಗ ಅಮೆರಿಕನ 'ಗೋಮುಖ ವ್ಯಾಘ್ರ' ಎಂದಿದೆ!

Kim Jong Un Continues Fraction With American Government

ಅಮೆರಿಕದ ಶಕ್ತಿ ಕೇಂದ್ರದ ಮೇಲೆ ಕಿಮ್ ಕಣ್ಣು?

ಅಂದಹಾಗೆ ಕೆಲ ದಿನದ ಹಿಂದಷ್ಟೇ ಉತ್ತರ ಕೊರಿಯಾ ಮೊಟ್ಟ ಮೊದಲ ಉಪಗ್ರಹ ಉಡಾವಣೆ ಮಾಡಿತ್ತು. ಇದೀಗ ಭೂಮಿ ಕಕ್ಷೆಯಲ್ಲಿ ಅದು ಸುತ್ತುತ್ತಿದ್ದು ಅಲ್ಲಿಂದ ತನ್ನ ಶತ್ರು ಅಡಗುದಾಣ ನೋಡುತ್ತಿದ್ದಾನೆ ಕಿಮ್ ಜಾಂಗ್ ಉನ್ ಎಂಬ ಆರೋಪ ಕೇಳಿಬಂದಿತ್ತು. ಇದು ಸಾಲದೆಂಬ ರೀತಿ, ಸರ್ವಾಧಿಕಾರಿ ಕಿಮ್ ಸರ್ಕಾರದ ಅಧಿಕಾರಿಗಳು ತಾವು ತಮ್ಮ ಉಪಗ್ರಹದ ಮೂಲಕ ಅಮೆರಿಕದ ಶಕ್ತಿಕೇಂದ್ರ ಶ್ವೇತಭವನ ಅಂದರೆ, ಅಮೆರಿಕದ ಅಧ್ಯಕ್ಷರ ಮನೆಯನ್ನ ನೋಡ್ತಾ ಇದ್ದೀವಿ ಎಂದಿದ್ದರು. ಅಲ್ಲದೆ ಅದರ ಫೋಟೋಗಳು ಕೂಡ ಸಿಕ್ಕಿವೆ ಎಂದಿದ್ದರು. ಇದನ್ನು ಕೇಳಿದ ತಕ್ಷಣ ನಡುಗಿತ್ತು ಅಮೆರಿಕ, ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಸರ್ವಾಧಿಕಾರಿ ಜೊತೆಗೆ ಅಮೆರಿಕ ಮಾತುಕತೆ?

ಹೌದು ಒಂದು ಕಡೆ ಕಿಮ್ ಜಾಂಗ್ ಉನ್ ಉಪಗ್ರಹ ಉಡಾವಣೆ ಮಾಡಿದ್ದೇ ತಡ ಅಮೆರಿಕ ಒಂದು ಕ್ಷಣ ಯೋಚಿಸುವಂತಾಗಿದೆ. ಏಕೆಂದರೆ ಹೀಗೆ ಬಾಹ್ಯಾಕಾಶದಿಂದ ತಮ್ಮ ವಿರುದ್ಧವೆ ಕಿಮ್ ಸಂಚು ರೂಪಿಸಬಹುದು ಎನ್ನುವ ಭಯ ಅಮೆರಿಕಗೆ ಕಾಡುತ್ತಿದೆ. ಹೀಗಾಗಿ ಚರ್ಚೆಗೆ ಕೂರಲು ಉತ್ತರ ಕೊರಿಯಾಗೆ ಅಮೆರಿಕ ಆಫರ್ ಕೊಟ್ಟಿದೆ ಎಂಬ ಆರೋಪ ಕೇಳಿಬಂದಿದ್ದು ಇದನ್ನ ಉತ್ತರ ಕೊರಿಯಾ ತಿರಸ್ಕಾರ ಮಾಡಿದೆಯಂತೆ! ಅಲ್ಲದೆ ನಾವು ಎರಡು ಮುಖದ, ಅಮೆರಿಕ ಜೊತೆಗೆ ಎದುರು ಕೂತು ಮಾತನಾಡಲ್ಲ ಎಂದಿದೆ ಉತ್ತರ ಕೊರಿಯಾ. ಇನ್ನ ಈ ಮಾತು ಹೇಳಿರುವುದು ಸ್ವತಃ ಕಿಮ್ ಜಾಂಗ್ ಉನ್ ತಂಗಿ ಎನ್ನಲಾಗಿದೆ.

Kim Jong Un Continues Fraction With American Government

ರಷ್ಯಾ ಬೆಂಬಲವೇ ಶ್ರೀರಕ್ಷೆ!

ಮೇ 31ಕ್ಕೆ ಕಿಮ್ ಜಾಂಗ್ ಉನ್ ಮೊದಲ ಬಾರಿ ಗೂಢಚಾರ ಉಪಗ್ರಹ ಉಡಾವಣೆ ಮಾಡಿಸಿದ್ದ. ಆದ್ರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಅದು ಹಾಳಾಗಿ ಸಮುದ್ರಕ್ಕೆ ಬಿದ್ದಿತ್ತು. ಉತ್ತರ ಕೊರಿಯಾದ ತಂತ್ರಜ್ಞಾನ ಕೈಕೊಟ್ಟ ಕಾರಣಕ್ಕೆ ಇದೀಗ ರಷ್ಯಾ ಬಲದಿಂದ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಮೊದಲ ಉಪಗ್ರಹ ಉಡಾವಣೆ ಮಾಡಿಸಿದ್ದಾನೆ. ಆದರೆ ಈ ಸಮಯಕ್ಕೆ ಅದು ಇದು ಅಂತಾ ಕಿಮ್ ವಿರುದ್ಧ ಆರೋಪ ಕೇಳಿಬರುತ್ತಿದೆ. ಅದರಲ್ಲೂ ದಕ್ಷಿಣ ಕೊರಿಯಾ & ಜಪಾನ್ ದೇಶಗಳ ನಾಯಕರು ನಿದ್ದೆ ಕೂಡ ಮಾಡುತ್ತಿಲ್ಲ.

ಮಿಸೈಲ್ ಹೋಗಿ ಉಪಗ್ರಹ ಬಂತು!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಷ್ಟುದಿನ ಮಿಸೈಲ್‌ಗಳ ಮೂಲಕ ತನ್ನ ಶತ್ರುಗಳಿಗೆ ಭಯ ಹುಟ್ಟಿಸಿದ್ದ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಶತ್ರುಗಳ ನಾಶಕ್ಕೆ ಪಣತೊಟ್ಟಿರುವ ಕಿಮ್ ತನ್ನ ಉಪಗ್ರಹದ ಮೂಲಕ ಸಂಚು ರೂಪಿಸುತ್ತಿದ್ದಾನೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದರ ಜೊತೆ ಅಮೆರಿಕ ಮಾತುಕತೆಗೆ ಕರೆದಿದೆ ನಾವು ಹೋಗಲ್ಲ ಅಂತಾ ಉತ್ತರ ಕೊರಿಯಾ ಆರೋಪ ಮಾಡಿದೆ. ಹೀಗೆ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧ ಮತ್ತಷ್ಟು ಗಂಟು ಗಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+