• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಹಳಸಿದ ಟ್ರಂಪ್ - ಕಿಮ್ ಜಾಂಗ್ ಉನ್ ಸಂಬಂಧ

|

ಸಿಯೋಲ್, ಆಗಸ್ಟ್ , 7: ಕಳೆದೊಂದು ವರ್ಷದಿಂದ ಅಮೆರಿಕ ಅಧ್ಯಕ್ಷ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ನಡುವೆ ಸಾಕಷ್ಟು ಮಾತುಕತೆಗಳು ನಡೆದಿದ್ದವು.

ಅಣ್ವಸ್ತ್ರ ಸೇರಿ ಇತರೆ ನಿಶಸ್ತ್ರೀಕರಣಕ್ಕೆ ಕಿಮ್ ಜಾಂಗ್ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಆದರೆ ಕಿಮ್ ಜಾಂಗ್ ಮತ್ತೆ ತಿರುಗಿಬಿದ್ದಿದ್ದಾರೆ. ನಿರ್ದಿಷ್ಟ ಗುರಿಯ ನಾಲ್ಕನೇ ಹಂತದ ಕ್ಷಿಪಣಿಯನ್ನು ಯಶಸ್ವಿ ಹಾರಾಟ ನಡೆಸಿದ್ದಾರೆ.

ಯಶಸ್ವಿ ಪರೀಕ್ಷ ಬಳಿಕ ಟ್ರಂಪ್‌ಗೆ ನೇರ ಸಂದೇಶ ನೀಡಿರುವ ಕಿಮ್ ಜಾಂಗ್ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಜಂಟಿ ಸೇನಾ ತಾಲೀಮು ಈ ಬೆಳವಣಿಗೆಗೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಇಬ್ಬರು ನಾಯಕರ ನಡುವೆ ಸಮಸ್ಯೆ ಮತ್ತೆ ತಾರಕಕ್ಕೇರಿದೆ. ಈ ಹಿಂದೆ ನ್ಯೂಯಾರ್ಕ್, ವಾಷಿಂಗ್ಟನ್ ಇತರೆ ನಗರಗಳ ಮೇಲೆ ದಾಳಿ ಮಾಡಬಲ್ಲ ಕ್ಷಿಪಣಿಯನ್ನು ಉತ್ತರ ಕೊರಿಯಾ ತಯಾರಿಸಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಟ್ರಂಪ್ ಕಿಮ್ ಮಾತುಕತೆ ನಡೆಸಿದ್ದರು.

ಆದರೆ ಕಿಮ್ ಜಾಂಗ್ ಉನ್ ಅಮೆರಿಕಕ್ಕೆ ತೆರಳಿದ್ದರೆ ಟ್ರಂಪ್ ಮೊದಲ ಬಾರಿಗೆ ಉತ್ತರ ಕೊರಿಯಾಕ್ಕೆ ಹೋಗಿದ್ದರು. ಕಿಮ್ ಜಾಂಗ್‌ನ್ನು ಹಾಡಿ ಹೊಗಳಿದ್ದರು.

ಆದರೆ ಈಗ ತಿರುಗಿಬಿದ್ದಿರುವ ಕಿಮ್ ಜಾಂಗ್ ಟ್ರಂಪ್ ಪ್ರಯತ್ನ ವ್ಯರ್ಥ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಈಗ ಸೇನಾ ಸಿದ್ಧತೆ ಮುಂದುವರೆದರೆ ಅದಕ್ಕೆ ಪ್ರತಿಯಾಗಿ ಇನ್ನಷ್ಟು ಕಠಿಣ ಕ್ರಮಗಳಿಗೆ ಸಾಕ್ಷಿಯಾಗಬೇಕಾಗುತ್ತದೆ ಎಂದು ಕಿಮ್ ಜಾನ್ ಎಚ್ಚರಿಸಿದ್ದಾರೆ.

English summary
North Korean leader Kim Jong Un says latest missile launch was a warning to US and South Korea, AFP news agency quoting North Korea state media, KCNA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X