ಪಾಕ್ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದ ಇಮ್ರಾನ್ ಖಾನ್
Recommended Video
ಇಸ್ಲಾಮಾಬಾದ್, ಆಗಸ್ಟ್ 20: ಜಮ್ಮು ಕಾಶ್ಮೀರವು ಭಾರತದ ಒಂದು ಭಾಗ ಹಾಗಾಗಿ ಕಾಶ್ಮೀರದ ವಿಷಯ ಕುರಿತಾಗಿ ಇಮ್ರಾನ್ ಖಾನ್ ಹೆಚ್ಚಿನ ಆಸಕ್ತಿ ತೋರುವುದು ತಪ್ಪು ಎಂದು ಪಾಕಿಸ್ತಾನ ವಿರೋಧ ಪಕ್ಷಗಳು ಇಮ್ರಾನ್ ಖಾನ್ ನಡೆ ವಿರುದ್ಧ ಟೀಕೆ ಮಾಡಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370 ಮುಂದುವರೆಸುವುದು ಅಥವಾ ರದ್ದುಪಡಿಸುವುದು ಭಾರತದ ಆಂತರಿಕ ವಿಷಯವಾಗಿದೆ. ಆದರೆ ಇಮ್ರಾನ್ ಖಾನ್ ಎಲ್ಲದಕ್ಕೂ ಮೂಗು ತೂರಿಸುತ್ತಿದ್ದಾರೆ ಎಂದು ಹೇಳಿವೆ.
ಇಮ್ರಾನ್ ಖಾನ್ ಸರ್ಕಾರ "ಇಮ್ರಾನ್ ಖಾನ್ ಸರ್ಕಾರ ಬಿಕರಿಯಾಗಿದೆ'ಪಾಕಿಸ್ತಾನ ವಿರೋಧ ಪಕ್ಷವು ಟೀಕಿಸಿದೆ. ವಿಧಿ 370 ರದ್ದು ಮಾಡಿರುವುದರಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿದೆ.

ಇಮ್ರಾನ್ ಖಾನ್ ಬೇರೆ ರಾಷ್ಟ್ರಗಳ ಬೆಂಬಲ ಪಡೆಯುವಲ್ಲಿ ಸೋತಿದ್ದಾರೆ. ಇದೀಗ ತಮ್ಮದೇ ರಾಷ್ಟ್ರದಲ್ಲಿ ಒತ್ತಡ ಅನುಭವಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಜಮ್ಮು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಕುರಿತು ವಿರೋಧ ವ್ಯಕ್ತಪಡಿಸಿದಾಗ, ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಜಮ್ಮು ಕಾಶ್ಮೀರದ ಹಣೆಬರಹ ಬದಲಾಗುತ್ತದೆ ಎಂದರೆ ನೀವು ಸುಮ್ಮನಿರಿ ಎಂದು ಟ್ರಂಪ್ ಹೇಳಿದ್ದರು.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ -ನವಾಜ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.











Click it and Unblock the Notifications