World's Oldest Man Died: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ
ಬ್ರೆಜಿಲ್: ಇದು ಹೈಬ್ರೀಡ್ ಜಮಾನ ಈ ಕಾಲದಲ್ಲಿ ಮನುಷ್ಯ ಬದುಕಿದರೆ ಅದೆಷ್ಟು ವರ್ಷ ಬದುಕಬಹುದು ಹೇಳಿ? ಅಬ್ಬಬ್ಬಾ ಅಂದ್ರೆ 60ರಿಂದ 70 ವರ್ಷ. ಆದರೆ ಇಲ್ಲೊಬ್ಬ ವ್ಯಕ್ತಿ ಇದರ ಡಬಲ್ ಅಂದರೆ ಸುಮಾರು 127 ವರ್ಷ ಬದುಕಿದ್ದರು. ಇನ್ನೇನು 128ನೇ ವರ್ಷದ ಹುಟ್ಟುಹಬ್ಬಕ್ಕೂ ತಯಾರಿ ನಡೆಸಿದ್ದರು ವಿಶ್ವದ ಹಿರಿಯ ವ್ಯಕ್ತಿ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು, ಒಂದೆರಡು ದಿನದ ಅಂತರದಲ್ಲಿ ನಡೆಯಬಾರದ ಘಟನೆ ನಡೆದಿತ್ತು.
ಹೌದು, ಇಡೀ ಜಗತ್ತಿನಲ್ಲೇ ಅತ್ಯಂತ ಹಿರಿಯ ವ್ಯಕ್ತಿ ಎನ್ನಲಾಗಿದ್ದ ಬ್ರೆಜಿಲ್ ಮೂಲದ ಜೋಸ್ ಪಾಲಿನೊ ಗೋಮ್ಸ್ ಮೃತಪಟ್ಟಿದ್ದಾರೆ. ತಮ್ಮ 127ನೇ ವಯಸ್ಸಿಗೆ ನಿಧನರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಸೆಂಚ್ಯುರಿ ಹೊಡೆದಿದ್ದ ಮೃತ ವ್ಯಕ್ತಿ ತನ್ನ ಹೆಸರಿಗೆ ಹಲವು ದಾಖಲೆ ಬರೆದುಕೊಂಡಿದ್ದರು. ಆದರೆ ಬಹು ಅಂಗಾಂಗ ವೈಫಲ್ಯದ ಪರಿಣಾಮ ಅನಾರೋಗ್ಯದಿಂದ ಬಳಲುತ್ತಿದ್ದ ಗೋಮ್ಸ್, ತಮ್ಮ ನಿವಾಸ ಪೆಡ್ರಾ ಬೊನಿಟಾದಲ್ಲಿ ನಿಧನರಾಗಿದ್ದಾರೆ ಎಂದು ವಿಶ್ವದ ಹಿರಿಯ ವ್ಯಕ್ತಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

128ನೇ ಹುಟ್ಟುಹಬ್ಬಕ್ಕೆ ತಯಾರಿ ನಡೆದಿತ್ತು!
ಅಷ್ಟಕ್ಕೂ ಜೋಸ್ ಪಾಲಿನೊ ಗೋಮ್ಸ್ ಬದುಕಿದ್ದರೆ ಆಗಸ್ಟ್ 4ರಂದು 128ನೇ ಹುಟ್ಟು ಹಬ್ಬ ಆಚರಿಸಿಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು, ಹೀಗಾಗಿ ಗೋಮ್ಸ್ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಗೋಮ್ಸ್ ಮದುವೆ ಪ್ರಮಾಣ ಪತ್ರದ ಪ್ರಕಾರ ಅವರ ಹುಟ್ಟಿದ ಡೇಟ್ 1895ರ ಆಗಸ್ಟ್ 4. ತಮ್ಮ ಜೀವಿತಾವಧಿಯಲ್ಲಿ ಮಹಾಯುದ್ಧ ಮತ್ತು ಕೋವಿಡ್ ಎರಡನ್ನೂ ಕಣ್ಣಾರೆ ಕಂಡ ವ್ಯಕ್ತಿ ಎಂಬ ದಾಖಲೆಗೆ ಮೃತ ಜೋಸ್ ಪಾಲಿನೊ ಗೋಮ್ಸ್ ಸಾಕ್ಷಿಯಾಗಿದ್ದು, ವಿಶ್ವದ ಹಿರಿಯ ವ್ಯಕ್ತಿ ನಿಧನ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ವೇದಿಕೆ ಒದಗಿಸಿದೆ. ಅಲ್ಲದೆ ಸೋಷಿಯಲ್ ಮೀಡಿಯಾ ಬಳಕೆದಾರರು ಸಂತಾಪ ಸೂಚಿಸಿದ್ದಾರೆ.
The 'world's oldest man', has died in Brazil aged 127. 😮
— Mr Pål Christiansen (@TheNorskaPaul) August 2, 2023
Jose Paulino Gomes was born on August 4 1895, local media claim & lived in the rural Corrego do Cafe in the west of the country on Friday – just days before his 128th birthday. pic.twitter.com/vrKMLh2CME
127 ವರ್ಷ ಬದುಕಿದ್ದು ಹೇಗೆ?
ಮೊದಲೇ ಹೇಳಿದಂತೆ ಈಗಿನದ್ದು ಹೈಬ್ರೀಡ್ ಮತ್ತು ಫಾಸ್ಟ್ ಫುಡ್ ಜಮಾನ. ಹೀಗಾಗಿಯೇ ಮನುಷ್ಯ ತನ್ನ ಸಾಂಪ್ರದಾಯಿಕ ಆಹಾರ ಪದ್ಧತಿ ಮರೆತಿದ್ದಾನೆ. ಆದರೆ ವಿಶ್ವದ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಜೋಸ್ ಪಾಲಿನೊ ಗೋಮ್ಸ್, ಒಬ್ಬ ಸರಳ ವ್ಯಕ್ತಿ & ಯಾವಾಗಲೂ ವಿನಮ್ರತೆಯಿಂದ ಇರುತ್ತಿದ್ದರಂತೆ. ಹಾಗೇ ನೈಸರ್ಗಿಕವಾಗಿ ಸಿಗುತ್ತಿದ್ದ ಆಹಾರ ಪದಾರ್ಥವನ್ನೇ ಸೇವಿಸುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕೋಳಿ-ಕುರಿ ಸಾಕಾಣೆ ಅಂದರೆ ಗೋಮ್ಸ್‌ಗೆ ಬಲು ಇಷ್ಟವಾಗಿದ್ದ ಕೆಲಸ. ಯಾವುದನ್ನೂ ಹೆಚ್ಚಾಗಿ ಮಾಡದೆ ಜೀವನದಲ್ಲಿ ಅಚ್ಚುಕಟ್ಟು ನಿಯಮ ಅನುಸರಿಸಿದ್ದರು ಗೋಮ್ಸ್.
ಯಾರು ಅತ್ಯಂತ ಹಿರಿಯ ವ್ಯಕ್ತಿ?
ಇಷ್ಟೆಲ್ಲದರ ಮಧ್ಯೆ ವಿಶ್ವದ ಹಿರಿಯ ವ್ಯಕ್ತಿ ಎಂಬ ಬಿರುದಿನ ಬಗ್ಗೆ ಈಗ ಗೊಂದಲ ಮೂಡಿದೆ. ಗೋಮ್ಸ್ ಕುಟುಂಬಕ್ಕೂ ಈ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ಗಿನ್ನೆಸ್ ದಾಖಲೆ ಪ್ರಕಾರ 116 ವರ್ಷದ ಮಾರಿಯಾ ಬ್ರನ್ಯಾಸ್ ಮೊರೆರ್ 'ವಿಶ್ವದ ಹಿರಿಯ ಜೀವಂತ ವ್ಯಕ್ತಿ' ಎನ್ನಲಾಗಿದೆ. ಹಾಗೇ ಈ ಜಗತ್ತಿನ ವಿಶ್ವದ ಅತ್ಯಂತ ಹಿರಿಯ ಪುರುಷ ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೋರಾ ಎನ್ನಲಾಗಿದೆ. ಅವರಿಗೆ ಈಗ 114 ವರ್ಷ ವಯಸ್ಸು. ಹೀಗಾಗಿ ಜೋಸ್ ಪಾಲಿನೊ ಗೋಮ್ಸ್ ಮರಣ ಪ್ರಮಾಣ ಪತ್ರಕ್ಕಾಗಿ ಕಾಯಲಾಗುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ತಮ್ಮ ಆಹಾರ ಪದ್ಧತಿ & ಸರಳತೆಯಿಂದ ಜೀವಿಸುತ್ತಿದ್ದ ಜೋಸ್ ಪಾಲಿನೊ ಗೋಮ್ಸ್ ಸಾವು ಈಗ ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಸ್ಥರಿಗೆ ಸಾಕಷ್ಟು ನೋವು ತಂದಿದೆ. ಅಲ್ಲದೆ ಗೋಮ್ಸ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಫ್ಯಾನ್ಸ್ ಪ್ರಾರ್ಥಿಸಿದ್ದಾರೆ. ಕುಟುಂಬ ಸದಸ್ಯರು ಕೂಡ ನೋವಿನಲ್ಲಿದ್ದು, 128ನೇ ಹುಟ್ಟುಹಬ್ಬದ ಸನಿಹದಲ್ಲೇ ಜೋಸ್ ಪಾಲಿನೊ ಗೋಮ್ಸ್ ಮೃತಪಟ್ಟಿದ್ದು ದುರಂತವೇ ಸರಿ.
-
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು?












Click it and Unblock the Notifications