Johnson & Johnson: ಓಮಿಕ್ರಾನ್ ವಿರುದ್ಧ ಯಾವುದೇ ರಕ್ಷಣೆ ನೀಡುವುದಿಲ್ಲ

ಜಾನ್ಸನ್ & ಜಾನ್ಸನ್ ಕಂಪನಿಯ ಕೊರೊನಾ ಲಸಿಕೆಗಳು ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ವಿರುದ್ಧ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ ಎಂದು ಸಾಬೀತಾಗಿದೆ.

ಓಮಿಕ್ರಾನ್ ರೂಪಾಂತರಿ ಎಷ್ಟು ಪ್ರಬಲವಾದದ್ದು ಎನ್ನುವುದಕ್ಕೆ ಇದೀಗ ನಿದರ್ಶನ ದೊರೆತಿದೆ. ಓಮಿಕ್ರಾನ್ ವಿರುದ್ಧ ಜಾನ್ಸನ್ & ಜಾನ್ಸನ್ ಕಂಪನಿಯ ಲಸಿಕೆಯಗಳು ಯಾವುದೇ ಪ್ರತಿಕಾಯವನ್ನು ಸೃಷ್ಟಿಸುವುದಿಲ್ಲ.

ದಕ್ಷಿಣ ಆಫ್ರಿಕಾದ ವೈರಾಲಜಿಸ್ಟ್ ಮೂರ್ ಪ್ರಕಾರ, ಲಸಿಕೆಯು ಓಮಿಕ್ರಾನ್ ವಿರುದ್ಧ ಸ್ವಲ್ಪ ರಕ್ಷಣೆಯನ್ನು ನೀಡುತ್ತದೆ. ಸಂಶೋಧನೆಗಳು ಹಾಗೂ ಇತರೆ ಅಧ್ಯಯನಗಳು ಹೇಳುವ ಪ್ರಕಾರ ಬಹುತೇಕ ಕೊರೊನಾ ಲಸಿಕೆಗಳು ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುವುದಿಲ್ಲ. ಜಾನ್ಸನ್ & ಜಾನ್ಸನ್ ಲಸಿಕೆಗಳು ಕೂಡ ಈ ರೂಪಾಂತರಿ ಮುಂದೆ ದುರ್ಬಲವಾಗಿದೆ.

Johnson & Johnson Shot Loses Antibody Protection Against Omicron

ಜೊಹಾನ್ಸ್‌ಬರ್ಗ್‌ನ ವಿಟ್ವಾಟರ್‌ರಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೂರ್ ಹೇಳಿರುವ ಪ್ರಕಾರ, ಫೈಜರ್ ಇಂಕ್ ಹಾಗೂ ಬಯೋ ಎನ್‌ಟೆಕ್‌ನ ಎಸ್‌ಇ ಲಸಿಕೆ, ಹಾಗೂ ಜಾನ್ಸನ್ & ಜಾನ್ಸನ್ ಲಸಿಕೆಯನ್ನು ಜನರ ಮೇಲೆ ಪ್ರಯೋಗಿಸಲಾಗಿತ್ತು. ಅದರಲ್ಲಿ ಉಳಿದೆಲ್ಲಾ ಲಸಿಕೆಗಳಿಗಿಂತ ಜಾನ್ಸನ್ & ಜಾನ್ಸನ್ ಲಸಿಕೆಗಳು ದುರ್ಬಲವಾಗಿವೆ ಎಂದು ತಿಳಿದುಬಂದಿದೆ.

ಕೊರೊನಾದ ರೂಪಾಂತರಿ ವೈರಾಣು ಓಮಿಕ್ರಾನ್‌ ದೇಹದ ಸಹಜ ರೋಗ ನಿರೋಧಕ ಶಕ್ತಿಯನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

'ಓಮಿಕ್ರಾನ್‌ ತನ್ನ ರಚನೆಯನ್ನು 30ಕ್ಕೂ ಹೆಚ್ಚು ಬಾರಿ ಮಾರ್ಪಡಿಸಿಕೊಂಡಿರುವ ಕಾರಣ, ಎರಡೂ ಡೋಸ್‌ ಲಸಿಕೆ ಪಡೆದವರಿಗೂ ಸೋಂಕು ತಗುಲುತ್ತಿದೆ. ಜತೆಗೆ, ಲಸಿಕೆಯಿಂದ ಉದ್ಭವವಾಗಿರುವ ಪ್ರತಿಕಾಯಗಳನ್ನು ಓಮಿಕ್ರಾನ್‌ ಸೋಂಕು ವಂಚಿಸಿ ರೋಗ ಲಕ್ಷಣ ಹೆಚ್ಚಿಸುತ್ತಿದೆ.

ಆದರೂ, ದೇಹದಲ್ಲಿನ ಸಹಜ ರೋಗ ನಿರೋಧಕ ಶಕ್ತಿಯೇ ಓಮಿಕ್ರಾನ್‌ ವೈರಾಣು ಹತ್ತಿಕ್ಕುವಷ್ಟು ಸಮರ್ಥವಾಗಿದೆ' ಎಂದು ಸಾಂಕ್ರಾಮಿಕ ರೋಗ ತಜ್ಞ ಮಿಕ್‌ ಬೇಲಿ ಹೇಳಿದ್ದಾರೆ.

'ಕೊರೊನಾ ನಿರೋಧಕ ಲಸಿಕೆಯಿಂದ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಓಮಿಕ್ರಾನ್‌ ಈ ಪ್ರತಿಕಾಯಗಳನ್ನು ನಾಶ ಮಾಡಬಹುದು. ಪ್ರತಿಕಾಯಗಳು ಕಡಿಮೆ ಆದ ಮಾತ್ರಕ್ಕೆ ದೇಹದ ರೋಗ ನಿರೋಧಕ ಶಕ್ತಿಯೇ ನಾಶವಾಗಿದೆ ಎಂದಲ್ಲ.

ದೇಹದಲ್ಲಿ ಸಹಜವಾಗಿಯೇ ಇರುವ ರೋಗ ನಿರೋಧಕ ಶಕ್ತಿಯು ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಟ ಮಾಡಲು ಸಶಕ್ತವಾಗಿದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಡೆಲ್ಟಾ ಪ್ರಸರಣ ಆರಂಭವಾದಾಗಲೂ ಹಲವು ಜನರ ದೇಹವು ಸೋಂಕಿನ ವಿರುದ್ಧ ನೈಸರ್ಗಿಕವಾಗಿ ಹೋರಾಡಿ ಗೆದ್ದಿರುವುದು ಪೂರಕ ಅಂಶವಾಗಿದೆ' ಎಂದು ಬೇಲಿ ವಿವರಿಸಿದ್ದಾರೆ.

ಬೂಸ್ಟರ್‌ ರಾಮಬಾಣ: 'ಓಮಿಕ್ರಾನ್‌ ಸೋಂಕಿನ ರೋಗ ಲಕ್ಷಣಗಳಿಂದ ಬಳಲುತ್ತಿರುವವರನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ಮೂರನೇ ಡೋಸ್‌ ಅಥವಾ ಬೂಸ್ಟರ್‌ ಡೋಸ್‌ ನೀಡಿದಲ್ಲಿ ಓಮಿಕ್ರಾನ್‌ ದಾಳಿಗೆ ಅಂಕುಶ ಹಾಕಲು ಸಾಧ್ಯ' ಎಂದು ಬ್ರಿಟನ್‌ ಆರೋಗ್ಯ ಸುರಕ್ಷತೆ ಏಜೆನ್ಸಿ (ಯುಕೆಎಚ್‌ಎಸ್‌ಎ) ಹೇಳಿದೆ.

'ಸದ್ಯ ಓಮಿಕ್ರಾನ್‌ ಸೋಂಕಿತರು ಪ್ರದರ್ಶಿಸುತ್ತಿರುವ ಲಕ್ಷಣಗಳಾದ ಮೈ - ಕೈ ನೋವು, ಜ್ವರ, ಸುಸ್ತನ್ನು ಕೊರೊನಾ ನಿರೋಧಕ ಲಸಿಕೆಯ ಮೂರನೇ ಡೋಸ್‌ ಅನ್ನು ಮುಂಚಿತವಾಗಿಯೇ ಪಡೆದವರು ಸುಲಭವಾಗಿ ಎದುರಿಸಬಹುದು.

ಅವರ ದೇಹವು ಶೀಘ್ರವೇ ಓಮಿಕ್ರಾನ್‌ ವೈರಾಣುವನ್ನು ಹತೋಟಿಗೆ ತರಲಿದೆ. ಓಮಿಕ್ರಾನ್‌ ಸೋಂಕಿನ ವಿರುದ್ಧ 3ನೇ ಡೋಸ್‌ ಲಸಿಕೆಯು 70-75% ರಕ್ಷಣೆ ನೀಡಲಿದೆ' ಎಂದು ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+