Brazil: ಅಧ್ಯಕ್ಷರ ಅರಮನೆ, ಸಂಸತ್ ಭವನ, ಸುಪ್ರೀಂ ಕೋರ್ಟ್‌ಗೆ ನುಗ್ಗಿದ ಗಲಭೆಗೋರರು- ಕಾರಣ ತಿಳಿಯಿರಿ
ಬ್ರೆಸಿಲಿಯಾ, ಜನವರಿ 9: ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ದೇಶದ ಅಧ್ಯಕ್ಷರ ಭವನ, ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮತ್ತು ಸಚಿವಾಲಯಗಳ ಕಟ್ಟಡಕ್ಕೆ ನುಗ್ಗಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಆತಂಕಕ್ಕೀಡು ಮಾಡುತ್ತಿವೆ. ಹಳದಿ ಮತ್ತು ಹಸಿರು ಬಣ್ಣದ ದ್ವಜ ಹಿಡಿದಿರುವ ಸಾವಿರಾರು ಜನರು ರಾಜಧಾನಿ ಬ್ರೆಸಿಲಿಯಾದಲ್ಲಿರುವ ಕಾಂಗ್ರೆಸ್ ಕಟ್ಟಡದಲ್ಲಿ ನುಗ್ಗಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
A police car is driving into protesters in Brazil pic.twitter.com/CIvZf72b5t
— Jack Posobiec 🇺🇸 (@JackPosobiec) January 8, 2023
ಕಳೆದ ವಾರ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ಅಧಿಕಾರ ಸ್ವೀಕರಿಸಿದ್ದಾರೆ ಇದರ ವಿರುದ್ಧ ಮಾಜಿ ಅಧ್ಯಕ್ಷರ ಬೆಂಬಲದಿಂದ ನಡೆದ ಪ್ರತಿಭಟನೆಯ ನಂತರ ಈ ದಾಳಿ ನಡೆದಿದೆ. ಘಟನೆ ಬಳಿಕ, ಬ್ರೆಸಿಲಿಯಾದ ಸಂಸತ್ತಿನ ಕಟ್ಟಡದ ಸುತ್ತಲಿನ ಪ್ರದೇಶವನ್ನು ಅಧಿಕಾರಿಗಳು ಸುತ್ತುವರೆದಿದ್ದಾರೆ. ಇದನ್ನೂ ಬೇಧಿಸಿ ಸಾವಿರಾರು ಜೈರ್ ಬೋಲ್ಸನಾರೊ ಬೆಂಬಲಿಗರು ಕಟ್ಟಡಗಳ ಒಳಗೆ ನುಗ್ಗಿದ್ದಾರೆ. ಛಾವಣಿಗಳ ಮೇಲೆ ಒಟ್ಟುಗೂಡಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಜನವರಿ 6, 2021 ರಂದು ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ಮಾಡಿದಂತೆಯೇ, ಜೈರ್ ಬೋಲ್ಸನಾರೊ ಬೆಂಬಲಿಗರು ದಾಳಿ ಮಾಡಿದ್ದಾರೆ. ಬೋಲ್ಸನಾರೊ ಡೊನಾಲ್ಡ್ ಟ್ರಂಪ್ ನಿಕಟ ಸ್ನೇಹಿತರಾಗಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನಲ್ಲಿ ಜೈರ್ ಬೋಲ್ಸನಾರೊ ಅವರನ್ನು ಲುಲಾ ಅವರು ಕಡಿಮೆ ಅಂತರದಲ್ಲಿ ಸೋಲಿಸಿದ್ದರು. ಬೋಲ್ಸನಾರೊ ಡಿಸೆಂಬರ್‌ನಲ್ಲಿ ಬ್ರೆಜಿಲ್‌ನಿಂದ ಹೊರಟು ಡೊನಾಲ್ಡ್ ಟ್ರಂಪ್ ವಾಸಿಸುವ ಯುಎಸ್‌ನ ಫ್ಲೋರಿಡಾಕ್ಕೆ ಹೋಗಿದ್ದಾರೆ.
Bolsonarista terrorists broke down the police barrier and invaded the Congress ramp and threatened to occupy the chamber and the Senate. The Minister of Justice @FlavioDino announced that he is allowing the use of all federal forces against them.pic.twitter.com/Q3nbRhjfpV
— Nathália Urban (@UrbanNathalia) January 8, 2023
ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಗಣ್ಯ ನಾಯಕರು ಖಂಡಿಸಿದ್ದಾರೆ. 'ಬ್ರೆಸಿಲಿಯಾದಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಗಲಭೆ ಮತ್ತು ವಿಧ್ವಂಸಕ ಸುದ್ದಿಗಳ ಬಗ್ಗೆ ತೀವ್ರ ಕಳವಳವಿದೆ. ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ನಾವು ಬ್ರೆಜಿಲ್ ನಾಯಕರಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ' ಎಂದು ಅವರು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬಲಪಂಥೀಯ ಬೆಂಬಲಿಗರು ಬ್ರೆಸಿಲಿಯಾದಲ್ಲಿನ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಪರಿಸ್ಥಿತಿಯನ್ನು ಅಧ್ಯಕ್ಷ ಜೋ ಬಿಡೆನ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

2018ರಲ್ಲಿ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೋಲ್ಸನಾರೊ ಅವರ ಹೊಟ್ಟೆಗೆ ಇರಿಯಲಾಗಿತ್ತು.












Click it and Unblock the Notifications