ಇಸ್ತಾನ್ಬುಲ್ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ, 35 ಜನರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಇಸ್ತಾನ್ ಬುಲ್, ಜನವರಿ 01 : ಇಡೀ ಜಗತ್ತು ಹೊಸ ವರ್ಷದ ಹರುಷದದ ಹೊನಲಲ್ಲಿ ತೇಲಾಡುತ್ತಿದ್ದರೆ, ಇಸ್ತಾನ್ ಬುಲ್ ನಲ್ಲಿ ಭಯೋತ್ಪಾದಕರು ರಕ್ತದೋಕುಳಿಯಾಡಿ ದುಃಖದ ಕಾರ್ಮೋಡ ಕವಿಯುವಂತೆ ಮಾಡಿದ್ದಾರೆ.

ಇಸ್ತಾನ್ ಬುಲ್‌ನ ನೈಟ್ ಕ್ಲಬ್ ನಲ್ಲಿ ಹೊಸ ವರ್ಷದ ಸಂತೋಷದಲ್ಲಿ ಮುಳುಗಿದ್ದ ಜನರ ಮೇಲೆ ಮೇಲೆ ಸಂತಾ ಕ್ಲಾಸ್ ದಿರಿಸಿನಲ್ಲಿ ಬಂದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 35 ಜನರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬೆಳಗಿನ ಜಾವ 1.30ರ ಸುಮಾರಿಗೆ ರೀನಾ ನೈಟ್ ಕ್ಲಬ್ ಮೇಲೆ ಈ ದಾಳಿ ನಡೆದಿದೆ. ಆ ಸಮಯದಲ್ಲಿ ಅಲ್ಲಿ ನೂರಾರು ಜನರು ಸೇರಿದ್ದರು. ಸಾಂತಾ ಕ್ಲಾಸ್ ಉಡುಪು ಧರಿಸಿ ಬಂದ ಇಬ್ಬರು ಉಗ್ರರು ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

Istanbul night club terror attack leaves 35 dead

ಉಗ್ರರಿಂದ ಸತತವಾಗಿ ದಾಳಿಗೊಳಗಾಗುತ್ತಿರುವ ಇಸ್ತಾನ್ ಬುಲ್ 17 ಸಾವಿರ ಭದ್ರತಾ ಸಿಬ್ಬಂದಿಯ ಕಟ್ಟೆಚ್ಚರಿಕೆಯಲ್ಲೇ ಹೊಸ ವರ್ಷವನ್ನು ಆಚರಿಸುತ್ತಿತ್ತು. ಇಷ್ಟೆಲ್ಲ ಭದ್ರತೆ ಇದ್ದರೂ ಇಬ್ಬರು ಉಗ್ರರು ಕಣ್ಣಿಗೆ ಮಣ್ಣೆರಚಿ ದಾಳಿ ನಡೆಸಿದ್ದಾರೆ. ದಾಳಿಕೋರರು ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

2016ರಲ್ಲಿ ಬೇರೆಲ್ಲೂ ನಡೆಯದಷ್ಟು ರಕ್ತಪಾತ

ಕೆಲವೇ ದಿನಗಳ ಹಿಂದೆ, ಡಿಸೆಂಬರ್ 20ರಂದು ಟರ್ಕಿಯ ಅಂಕಾರಾದಲ್ಲಿ ಮೆವ್ಲುಟ್ ಮರ್ಟ್ ಅಲ್ಟಿಂಟಾಸ್ ಎಂಬ ಪೊಲೀಸ್ ಅಧಿಕಾರಿ ರಷ್ಯಾದ ರಾಯಭಾರಿ ಆಂಡ್ರೈ ಕಾರ್ಲೋವ್ ರನ್ನು ಗುಂಡಿಟ್ಟು ಹತ್ಯೆಗೈದಿದ್ದ. ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗುತ್ತ ಅಟ್ಟಹಾಸ ಮೆರೆದಿದ್ದ.

ಡಿಸೆಂಬರ್ 10ರಂದು ಫುಟ್ಬಾಲ್ ಪಂದ್ಯ ನಡೆದ ನಂತರ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದವು. ಪೊಲೀಸ್ ವ್ಯಾನ್ ಮೇಲೆ ನಡೆಸಿದ ದಾಳಿಯಲ್ಲಿ 44 ಜನರು ಹತರಾಗಿದ್ದರು. ಈ ದಾಳಿಯ ಹೊಣೆಯನ್ನು ಕುರ್ದಿಸ್ತಾನ್ ಫ್ರೀಡಂ ಫಾಲ್ಕನ್ಸ್ ಸಂಘಟನೆ ಹೊತ್ತುಕೊಂಡಿತ್ತು.

2016ರ ಜೂನ್ ನಲ್ಲಿ ಇಸ್ತಾನ್ ಬುಲ್ ನ ಅತಾತುರ್ಕ್ ಏರ್ಪೋರ್ಟ್ ನಲ್ಲಿ ನಡೆದ ತ್ರಿವಳಿ ಮಾನವ ಆತ್ಮಹತ್ಯಾ ದಾಳಿಯಲ್ಲಿ 47 ಜನರು ಹತ್ಯೆಗೀಡಾಗಿದ್ದರು. ಆಗಸ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿದ್ದವರ ಮೇಲೆ ನಡೆದ ದಾಳಿಯಲ್ಲಿ 34 ಮಕ್ಕಳು ಸೇರಿದಂತೆ 57 ಜನರು ಅಸುನೀಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 35 people were killed and 40 others injured in an attack on a nightclub in Istanbul. Reports say that the attackers was dressed in a Santa Claus costume. The attack took place at the Reina nightclub, in the Ortakoy area, at about 01:30 local time.
Please Wait while comments are loading...