ಇಸ್ರೇಲ್ VS ಹಮಾಸ್ ಯುದ್ಧ ನಿಂತು ಹೋಯ್ತಾ?

ಕಳೆದ 6 ತಿಂಗಳಿಂದ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಯುದ್ಧ ಈಗ ದೊಡ್ಡ ತಿರುವನ್ನು ಪಡೆದಿದೆ. ಸುಮಾರು 32,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಯುದ್ಧದ ಕೆನ್ನಾಲಿಗೆಯಲ್ಲಿ ಜೀವ ಬಿಟ್ಟಿರುವ ನಡುವೆ, ಇಸ್ರೇಲ್‌ನ ಸೇನೆ ಇದೀಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದರೆ ಏನದು ಮಹತ್ವದ ನಿರ್ಧಾರ? ಯುದ್ಧ ನಿಲ್ಲುತ್ತಾ? ಮುಂದೆ ಓದಿ.

ಗಾಜಾ ಪಟ್ಟಿ ಈಗ ನರಕವಾಗಿ ಬದಲಾಗಿದ್ದು ಅಕ್ಟೋಬರ್ 7 ರಂದು ತಮ್ಮ ಮೇಲೆ ಉಗ್ರ ಪಡೆ ದಾಳಿ ಮಾಡಿದ್ದ ಕಾರಣ ಇಸ್ರೇಲ್ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಯುದ್ಧದ ಬಲೆಗೆ ಸಿಲುಕಿ, ಇಸ್ರೇಲ್ ಕೂಡ ಸಂಕಷ್ಟ ಎದುರಿಸುತ್ತಿದೆ.

Israeli Troops Are Returned From The Al Shifa Hospital Of Gaza

ಪರಿಸ್ಥಿತಿ ಹೀಗಿದ್ದಾಗ ಗಾಜಾ ಪಟ್ಟಿ ರಕ್ತಸಿಕ್ತವಾಗಿ ಹೋಗಿದೆ ಇಸ್ರೇಲ್ ವಿರುದ್ಧ ಜಗತ್ತಿನ ಹಲವು ದೇಶಗಳು ಆಕ್ರೋಶ ಹೊರಹಾಕಿ ಪ್ಯಾಲೆಸ್ತೀನ್ ಪರ ನಿಲ್ಲುತ್ತಿವೆ. ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಬೆನ್ನಲ್ಲೇ ಮಹತ್ವದ ಕ್ರಮವನ್ನು ಕೈಗೊಂಡಿದೆ. ಹಾಗಾದರೆ ಏನದು ಕ್ರಮ? ಯುದ್ಧ ನಿಂತು ಹೋಯ್ತಾ? ಬನ್ನಿ ತಿಳಿಯೋಣ.

ಆಸ್ಪತ್ರೆಯಿಂದ ಹೊರಬಂದ ಇಸ್ರೇಲ್ ಸೇನೆ?

ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಭಾಗದಲ್ಲಿ ಇರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾ ಆವರಣದಿಂದ ಇಸ್ರೇಲಿ ಪಡೆಗಳು ವಾಪಸ್ ಬಂದಿವೆ ಎಂಬ ಮಾಹಿತಿ ಸಿಕ್ಕಿದೆ. ಹಲವು ದಿನಗಳ ಕಾಲ, ಇಸ್ರೇಲ್ ಸೈನಿಕರು ಇಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಅಲ್ಲದೆ ಹಮಾಸ್ ಉಗ್ರರು ಆಸ್ಪತ್ರೆಯಲ್ಲಿ ರಕ್ಷಣೆ ಪಡೆದಿದ್ದಾರೆ ಎಂಬ ಆರೋಪ ಕೂಡ ಮಾಡಲಾಗಿತ್ತು. ಈಗ, ಹಲವು ದಿನಗಳ ಕಾರ್ಯಾಚರಣೆ ನಂತರ ಅಲ್ ಶಿಫಾ ಆಸ್ಪತ್ರೆ ಆವರಣದಿಂದ ಇಸ್ರೇಲಿ ಪಡೆಗಳು ವಾಪಸ್ ಬಂದಿವೆ ಎನ್ನಲಾಗಿದೆ. ಈ ಮೂಲಕ ಗಾಜಾ ಜನರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Israeli Troops Are Returned From The Al Shifa Hospital Of Gaza

ಇಸ್ರೇಲ್ ಸೇನೆ ಆರೋಪ ಏನು?

ಅಂದಹಾಗೆ ಈಗ ಗಾಜಾದ ಶಿಫಾ ಆಸ್ಪತ್ರೆಯಲ್ಲಿ ನಿಯೋಜಿಸಿದ್ದ ಸೈನಿಕರನ್ನೆಲ್ಲಾ ಇಸ್ರೇಲ್‌ ವಾಪಸ್ ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎರಡು ವಾರಗಳಿಂದಲು ಇಸ್ರೇಲ್‌ ಸೇನೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, ಅನೇಕರನ್ನು ಹತ್ಯೆ ಮಾಡಿದೆ ಎಂಬ ಆರೋಪವು ಕೇಳಿಬಂದಿತ್ತು. ಆದರೆ ಇಸ್ರೇಲ್ ಸೇನೆ ಈ ಆಸ್ಪತ್ರೆಯಲ್ಲಿ ಉಗ್ರರು ಅಡಗಿ ಕೂತಿದ್ದಾರೆ ಎಂದಿತ್ತು. ಹಾಗೇ 900 ಶಂಕಿತ ಭಯೋತ್ಪಾದಕರನ್ನ ಬಂಧಿಸಿ ಸುಮಾರು 30 ಲಕ್ಷ ಅಮೆರಿಕನ್‌ ಡಾಲರ್‌ ಮತ್ತು ಶಸ್ತ್ರಾಸ್ತ್ರ ವಶಕ್ಕೆ ಪಡೆದಿದ್ದೇವೆ ಎಂದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಇಸ್ರೇಲ್ ಸೇನೆ, ಶಿಫಾ ಆಸ್ಪತ್ರೆಯಿಂದ ಹೊರಬಂದಿದೆ.

88 ಸಾವಿರ ಕಟ್ಟಡ ಉಡೀಸ್?

ಇಸ್ರೇಲ್‌ ದಾಳಿ ಪರಿಣಾಮ ಗಾಜಾಪಟ್ಟಿಯ ಶೇ 35ರಷ್ಟು ಕಟ್ಟಡಗಳು ಪೂರ್ತಿ ಅಥವಾ ಭಾಗಶಃ ಹಾನಿ ಆಗಿವೆ ಎಂಬ ವಿಚಾರ ಆತಂಕ ಹುಟ್ಟಿಸಿದೆ. ವಿಶ್ವಸಂಸ್ಥೆ ಸ್ಯಾಟಲೈಟ್‌ ಕೇಂದ್ರ, ಇಂತಹ ಭಯಾನಕ ಸತ್ಯ ಹೊರಗೆಡವಿದೆ. ಫೆಬ್ರವರಿ 29 ರಂದು & ಯುದ್ಧ ಆರಂಭವಾಗುವ ಮೊದಲು ಸೆರೆ ಹಿಡಿದಿರುವ ಫೋಟೋ ಆಧರಿಸಿ ಈ ಲೆಕ್ಕಾಚಾರ ಮಾಡಲಾಗಿತ್ತು. ಗಾಜಾ ಪಟ್ಟಿಯಲ್ಲಿ, 88,868 ಕಟ್ಟಡ ಪೂರ್ಣ ಅಥವಾ ಭಾಗಶಃ ಹಾನಿ ಆಗಿವೆ ಎಂಬುದು ಉಪಗ್ರಹದಲ್ಲಿ ಸೆರೆಸಿಕ್ಕ ಚಿತ್ರಗಳಿಂದ ಗೊತ್ತಾಗಿತ್ತು. ಹೀಗೆ ಹಾನಿಯಾಗಿರುವ ಕಟ್ಟಡಗಳ ಪೈಕಿ 31,198 ಕಟ್ಟಡ ಸಂಪೂರ್ಣವಾಗಿ ಹಾನಿಗೊಂಡಿದ್ದರೆ, 16,908 ಕಟ್ಟಡ ಭಾಗಶಃ ಅಂದರೆ ಇನ್ನೇನು ಕುಸಿದು ಬೀಳುವ ಹಂತದಲ್ಲಿ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+