Israel & Gaza: ಇಸ್ರೇಲ್ & ಗಾಜಾ ಕದನ ವಿರಾಮಕ್ಕೆ ಕೊನೆಗೂ ಸಿಕ್ಕಿತು ಒಪ್ಪಿಗೆ!
ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿದ್ದ ಯುದ್ಧ ಇನ್ನೇನು ನಿಂತು ಹೋಯಿತು ಅಂತಾನೇ ಇಡೀ ಜಗತ್ತು ನಂಬುವಾಗ, ದಿಢೀರ್ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಹೊರ ಬಿದ್ದಿತ್ತು. ಇಸ್ರೇಲ್ & ಗಾಜಾ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸರ್ಕಾರಕ್ಕೆ ಅನುಮೋದನೆ ಇನ್ನೂ ಸಿಕ್ಕಿಲ್ಲ ಎಂಬ ಸುದ್ದಿ ತಲ್ಲಣ ಎಬ್ಬಿಸಿತ್ತು. ಇಂತಹ ಸಮಯದಲ್ಲೇ, ಗಾಜಾ ಜನರು ಕೂಡ ನಲುಗಿ ಹೋಗಿದ್ದರು.
ಇಸ್ರೇಲ್ & ಗಾಜಾ ಕದನ ಶುರುವಾಗಿ 15 ತಿಂಗಳು ಕಳೆದರೂ ಯುದ್ಧ ನಿಲ್ಲುತ್ತಿಲ್ಲ ಎನ್ನುವ ಆಕ್ರೋಶ ಜಗತ್ತಿನಾದ್ಯಂತ ಮೊಳಗಿತ್ತು. ಇದೇ ಕಾರಣಕ್ಕೆ ಹೇಗೋ ಹಾಗೋ ಕಷ್ಟಪಟ್ಟು ಈ ಯುದ್ಧ ನಿಲ್ಲಿಸಲು ಸರ್ವ ಸಿದ್ಧತೆ ಮಾಡಿಕೊಂಡಿದ್ದರು ಇಸ್ರೇಲ್ ನಾಯಕರು. ಆದರೆ ಇದೇ ಸಮಯದಲ್ಲಿ ಇಸ್ರೇಲ್ ಸಂಸತ್ ಮೂಲಕ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಪಡೆಯಲು ಸೋತು ಹೋಗಿತ್ತು ಇಸ್ರೇಲ್ ಸರ್ಕಾರ. ಇಂತಹ ಸಮಯದಲ್ಲೇ ಭರ್ಜರಿ ಸುದ್ದಿಯೊಂದು ಈಗ ಹೊರ ಬಿದ್ದಿದ್ದು, ಗಾಜಾ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಗಾಜಾ ಜನರು ಫುಲ್ ಖುಷ್!
ಹೌದು, ಇದೀಗ ಇಸ್ರೇಲ್ & ಗಾಜಾ ಯುದ್ಧಕ್ಕೆ ಬ್ರೇಕ್ ಹಾಕುವ ಕದನ ವಿರಾಮ ಒಪ್ಪಂದಕ್ಕೆ ಅಂತೂ ಇಸ್ರೇಲ್ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಮೂಲಕ ಇಸ್ರೇಲ್ ಒತ್ತೆಯಾಳು ಬಿಡುಗಡೆ & ಇತರ ಶಾಂತಿ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿದಂತೆ ಆಗಲಿದೆ. ಹೀಗೆ ಇಸ್ರೇಲ್ ಸೇನೆ ಕದನ ವಿರಾಮ ಘೋಷಣೆ ಮಾಡಿದ ನಂತರ, ಹಲವು ಕೆಲಸಗಳು ಕೂಡ ಬಾಕಿ ಉಳಿದಿದೆ. ಹೀಗಾಗಿ ವಿಶ್ವಸಂಸ್ಥೆ ಈ ಕೆಲಸಗಳನ್ನು ಪೂರೈಸುವ ನಿರೀಕ್ಷೆ ಇದೆ.
ಕದನ ವಿರಾಮದಲ್ಲೂ 72 ಜನರ ಸಾವು?
ಗಾಜಾ ಪಟ್ಟಿ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹಮಾಸ್ ಬಂಡುಕೊರರು & ಇಸ್ರೇಲ್ ಸರ್ಕಾರದ ನಡುವೆ ಮಾತುಕತೆ ನಡೆದು, ಕದನ ವಿರಾಮ ಘೋಷಣೆ ಮಾಡಿದ ನಂತರ ಕೂಡ ವಾಯುದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ರೀತಿ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಕದನ ವಿರಾಮ ಸಮಯದಲ್ಲಿ ಕೂಡ ದಾಳಿ ನಡೆಸಿರುವ ಪರಿಣಾಮ ಸುಮಾರು 72 ಜನ ಮೃತಪಟ್ಟಿದ್ದಾರೆ ಅಂತಾ ಆರೋಪ ಮಾಡಲಾಗಿದೆ. ಈ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಕದನ ವಿರಾಮದ ಬಗ್ಗೆ ಕೂಡ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications