ಇಸ್ರೇಲ್ vs ಇರಾನ್ ಭೀರಕ ಯುದ್ಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಟ್ವೀಟ್!
ಇರಾನ್‌ನ ಮೇಲೆ ಅಮೆರಿಕ ದೇಶವು ಭೀಕರ ದಾಳಿ ಮಾಡಿದೆ. ಈ ದಾಳಿಯ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಚಿತಪಡಿಸಿದ್ದಾರೆ. ಅಲ್ಲದೇ ಇರಾನ್ ದೇಶವೇನಾದರೂ ಅಮೆರಿಕದ ಮೇಲೆ ಮರು ದಾಳಿ ಮಾಡುವುದಕ್ಕೆ ಮುಂದಾದರೆ ಇರಾನ್ ಸರ್ವನಾಶವಾಗಲಿದೆ ಎನ್ನುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇರಾನ್ - ಇಸ್ರೇಲ್‌ನ ನಡುವೆ ಭಾರೀ ಭೀಕರ ದಾಳಿ ನಡೆದಿತ್ತು. ಈ ಭೀಕರ ದಾಳಿಯಲ್ಲಿ ಅಮೆರಿಕ ಎಂಟ್ರಿ ಕೊಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಮುಸ್ಲಿಂ ರಾಷ್ಟ್ರಗಳಲ್ಲಿ ನಡುಕವನ್ನುಂಟು ಮಾಡಿದೆ. ಆದರೆ, ಇರಾನ್ ತೀವ್ರ ದಾಳಿಯ ನಡುವೆ ತಿರುಗೇಟು ನೀಡುವುದಾಗಿ ಹೇಳಿದೆ.
ಇಸ್ರೇಲ್ vs ಇರಾನ್ ನಡುವೆ ಇತ್ತೀಚಿನ ದಿನಗಳಲ್ಲಿ ಭೀಕರ ದಾಳಿ ನಡೆದಿತ್ತು. ಇದೀಗ ಇಸ್ರೇಲ್‌ನ ಪರವಾಗಿ ದೈತ್ಯ ಸೇನೆ ಹಾಗೂ ಶಸ್ತ್ರಸ್ತ್ರಗಳನ್ನು ಹೊಂದಿರುವ ಹಾಗೂ ಸೂಪರ್ ನೇಷನ್ ಖ್ಯಾತಿಯ ಅಮೆರಿಕ ಎಂಟ್ರಿ ಕೊಟ್ಟಿದೆ. ಇರಾನ್‌ನ ಮೇಲೆ ಮಾಡಲಾಗಿರುವ ದಾಳಿಯ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಚಿತಪಡಿಸಿದ್ದು. ಮತ್ತೊಂದು ಭೀಕರ ವಾರ್ನಿಂಗ್ ಸಹ ಕೊಟ್ಟಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನಾವು ಮಾಡಿರುವ ಈ ದಾಳಿಯನ್ನು ವಿಶ್ವದ ಯಾವುದೇ ದೇಶವೂ ಮಾಡಲು ಸಾಧ್ಯವಿಲ್ಲ ಅಂತ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಂಚಲನ ಸೃಷ್ಟಿದ ಟ್ರಂಪ್ ಟ್ವೀಟ್: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಮೇಲೆ ಅಮೆರಿಕ ಕ್ಷಿಪಣಿ ಸುರಿ ಮಳೆ ಸುರಿಸಿದ ಮೇಲೆ ಸರಣಿ ಟ್ವೀಟ್ ಮಾಡಿದ್ದಾರೆ. ಒಂದೊಂದು ಟ್ವೀಟ್ ಸಹ ಸಂಚಲನ ಸೃಷ್ಟಿದೆ.
ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿದ್ದು. ಇದರಲ್ಲಿ ಇರಾನ್‌ನ ಮೂರು ಪರಮಾಣು / ನ್ಯೂಕ್ಲಿಯರ್ ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್‌ಗಳನ್ನು ಸಂಪೂರ್ಣವಾಗಿ ಇರಾನ್ ಪೇಲೋಡ್ ನ್ಯೂಕ್ಲಿಯರ್ ಕೇಂದ್ರದ ಮೇಲೆ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ (ಅಮೆರಿಕ) ಹೋಗುತ್ತಿವೆ. ನಮ್ಮ ಮಹಾನ್ ಅಮೆರಿಕನ್ ಯೋಧರಿಗೆ ಅಭಿನಂದನೆಗಳು. ಇದನ್ನು ಮಾಡಬಹುದಾದ ಮತ್ತೊಂದು ಮಿಲಿಟರಿ ಜಗತ್ತಿನಲ್ಲಿ ಇಲ್ಲ. ಈಗ ಶಾಂತಿಯ ಸಮಯ! ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು ಎಂದಿದ್ದಾರೆ.
"ANY RETALIATION BY IRAN AGAINST THE UNITED STATES OF AMERICA WILL BE MET WITH FORCE FAR GREATER THAN WHAT WAS WITNESSED TONIGHT. THANK YOU! DONALD J. TRUMP, PRESIDENT OF THE UNITED STATES" pic.twitter.com/vhTb5uNuCB
— The White House (@WhiteHouse) June 22, 2025
ಅಮೆರಿಕದ ವಿರುದ್ಧ ಇರಾನ್ ಮಾಡುವ ಯಾವುದೇ ಪ್ರತೀಕಾರಕ್ಕೆ ಇಂದು ರಾತ್ರಿ ಸಾಕ್ಷಿಯಾಗಿದ್ದಕ್ಕಿಂತ ಹೆಚ್ಚಿನ ಬಲವನ್ನು ಎದುರಿಸಬೇಕಾಗುತ್ತದೆ. ಧನ್ಯವಾದಗಳು! ಎಂದೂ ಡೊನಾಲ್ಡ್ ಟ್ರಂಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಇರಾನ್‌ದೇಶವು ಅಮೆರಿಕದ ಮೇಲೆ ದಾಳಿ ಮಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎನ್ನುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಈ ಟ್ವೀಟ್‌ಗಳು ಇದೀಗ ವೈರಲ್ ಆಗುತ್ತಿವೆ.












Click it and Unblock the Notifications