Israel vs Iran Conflict: ಇರಾನ್‌ನ ವಾಯು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದೇವೆ ಎಂದ ಇಸ್ರೇಲ್!
Israel vs Iran Conflict: ರಷ್ಯಾದಿಂದಲೂ ಮಾಡಲಾಗದ್ದನ್ನು ಇರಾನ್ ಮೇಲೆ ಇಸ್ರೇಲ್ ಮಾಡಿದೆ. ಇರಾನ್ ಹಾಗೂ ಇಸ್ರೇಲ್‌ನ ನಡುವೆ ಸಂಘರ್ಷ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಇಸ್ರೇಲ್ ದೇಶವು ಇರಾನ್‌ನ ಮೇಲೆ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದು. ಹಲವು ಈ ಘೋರ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್ ದೇಶವು ಇರಾನ್‌ನ ಮೇಲೆ ಯುದ್ಧವನ್ನು ಪ್ರಾರಂಭಿಸಿ 48 ಗಂಟೆಗಳಾಗಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಇರಾನ್‌ನ ಟೆಹ್ರಾನ್ ಸೇರಿದಂತೆ ಪಶ್ಚಿಮ ಭಾಗದ ಮೇಲೆ ವಾಯು ಪ್ರಾಬಲ್ಯವನ್ನು ಗಳಿಸಿರುವುದಾಗಿ ಹೇಳಿದೆ. ಇರಾನ್‌ನ ವಿವಿಧ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿರುವುದಾಗಿಯೂ ಹೇಳಿದೆ. ಇಸ್ರೇಲ್ ಮಿಲಿಟರಿ ಪಡೆಗಳು ದುಬಾರಿ ಹಾಗೂ ಹಲವು ಕಿ.ಮೀ ಕ್ರಮಿಸಬಲ್ಲ ಕ್ಷಿಪಣಿಗಳನ್ನು ಅವಲಂಬಿಸುವ ಬದಲು ಯುದ್ಧ ವಿಮಾನಗಳು ಬಳಸಿದೆ. ಇರಾನ್‌ನ ಮೇಲೆ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಲಾಗಿದೆ.
ಇನ್ನು ಇಸ್ರೇಲ್ ಹಾಗೂ ಇರಾನ್‌ನ ನಡುವೆ ಯುದ್ಧ ಸಂರ್ಘಷವು ಹೆಚ್ಚಾಗುತ್ತಿದ್ದು. ಇಷ್ಟು ವರ್ಷಗಳ ಕಾಲ ಈ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಕೇಳಿ ಬರದ ಹೆಸರುಗಳು ಇದೀಗ ಕೇಳಿ ಬರುತ್ತಿವೆ. ಇಸ್ರೇಲ್ ಹಾಗೂ ಇರಾನ್‌ನ ನಡುವೆ ಶತಮಾನಗಳಿಂದಲೂ ಸಂಘರ್ಷವಿದೆ. ಇದೀಗ ಇರಾನ್ - ಪಾಕಿಸ್ತಾನದ ಹೆಸರು ಹೇಳಿದೆ. ಇನ್ನೊಂದು ಕಡೆ ಇಸ್ರೇಲ್‌ಗೆ ಸೂಪರ್ ಪವರ್ ನೇಷನ್ ಎನ್ನುವ ಖ್ಯಾತಿ ಗಳಿಸಿರುವ ಅಮೆರಿಕ ಬೆಂಬಲ ನೀಡಲಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ಈ ಮೂಲಕ ಇಸ್ರೇಲ್ ಹಾಗೂ ಇರಾನ್‌ನ ನಡುವಿನ ಯುದ್ಧವು ಜಾಗತಿಕ ಸಮಸ್ಯೆಯಾಗಿ ಬದಲಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಕಳೆದ 3 ವರ್ಷಕ್ಕೂ ಹೆಚ್ಚು ಅವಧಿಯಿಂದ ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಯುದ್ಧ ನಡೆಯುತ್ತಿದೆ. ಆದರೆ, ರಷ್ಯಾ ಸಹ ಉಕ್ರೇನ್‌ನ ಮೇಲೆ ಸಾಧಿಸಲಾಗದ ಗೆಲುವನ್ನು ಇರಾನ್‌ನ ಮೇಲೆ ಇಸ್ರೇಲ್ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ರಷ್ಯಾದಂತಹ ಬಲಾಢ್ಯ ಮಿಲಿಟರಿ ಪಡೆಗೆ ಉಕ್ರೇನ್ ತಿರುಗೇಟು ನೀಡುತ್ತಲ್ಲೇ ಇದೆ. ಆದರೆ ಎರಡು ದಿನಗಳಲ್ಲಿ ಇರಾನ್‌ನ ವಾಯುನೆಲೆಯ ಮೇಲೆ ಇಸ್ರೇಲ್ ಪಾರುಪತ್ಯ ಸಾಧಿಸಿದೆ ಎಂದು ಹೇಳಿಕೊಂಡಿದೆ.
ನ್ಯೂಕ್ಲಿಯರ್ ಬಳಕೆ ಭೀತಿ: ಇನ್ನು ಇಸ್ರೇಲ್ ಹಾಗೂ ಇರಾನ್‌ನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ನ್ಯೂಕ್ಲಿಯರ್ ಬಾಂಬ್ ಬಳಕೆಯ ಆತಂಕ ಎದುರಾಗಿದೆ. ಪಾಕಿಸ್ತಾನವು ಇರಾನ್‌ಗೆ ಬೆಂಬಲ ನೀಡಲಿದೆ. ಒಂದೊಮ್ಮೆ ಯುದ್ಧವನ್ನು ಇಸ್ರೇಲ್ ಮುಂದುವರಿಸಿದರೆ, ಪಾಕಿಸ್ತಾನವು ನ್ಯೂಕ್ಲಿಯರ್ ಬಾಂಬ್ ದಾಳಿಯನ್ನು ಇಸ್ರೇಲ್‌ನ ಮೇಲೆ ಮಾಡಲಿದೆ ಎಂದು ಇರಾನ್ ಹೇಳಿತ್ತು. ಆದರೆ ಇದೀಗ ಈ ವಿಚಾರದಲ್ಲಿ ಪಾಕಿಸ್ತಾನವು ಹಿಂದೆ ಸರಿದಿದೆ. ನಾವು ಯಾವುದೇ ನ್ಯೂಕ್ಲಿಯರ್ ಬಾಂಬ್ ದಾಳಿಯನ್ನು ಮಾಡುವುದಿಲ್ಲ ಎಂದು ಪಾಕಿಸ್ತಾನವು ಸ್ಪಷ್ಟಪಡಿಸಿದೆ.












Click it and Unblock the Notifications