ಯುದ್ಧದ ರಕ್ತದಾಹಕ್ಕೆ ಬಲಿಯಾದ ಮನುಷ್ಯರ ಸಂಖ್ಯೆ ಎಷ್ಟು ಗೊತ್ತಾ?

ಯುದ್ಧ ಎಂಬ ಮಾತು ಬಂದರೆ ಮನುಷ್ಯರು ಮನುಷ್ಯತ್ವ ಮರೆತು ವರ್ತಿಸುತ್ತಾರೆ. ಇದು ಇಂದು ಅಥವಾ ನಿನ್ನೆಯಿಂದ ನಡೆದುಕೊಂಡು ಬಂದಿಲ್ಲ. ಸಾವಿರಾರು ವರ್ಷಗಳಿಂದ ಇದೆ ರೀತಿಯ ವರ್ತನೆಯನ್ನ ಯುದ್ಧದಾಹಿ ಮನುಷ್ಯ ತೋರಿಸುತ್ತಿದ್ದಾನೆ. ಇದೇ ರೀತಿ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಶುರುವಾದ ಕಾಳಗದಲ್ಲಿ ಬಲಿಯಾದ ಮನುಷ್ಯರ ಸಂಖ್ಯೆ ಎಷ್ಟು ಗೊತ್ತಾ? ಆ ಭಯಾನಕ ಅಂಕಿ-ಅಂಶದ ಮಾಹಿತಿ ಇಲ್ಲಿದೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000ಕ್ಕೂ ಹೆಚ್ಚು ರಾಕೆಟ್‌ಗಳ‌ನ್ನು ಒಂದೇ ಬಾರಿಗೆ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ನ‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಹೀಗೆ ಭೀಕರ ಯುದ್ಧ ಶುರುವಾದ ಬಳಿಕ ಸಾವಿರಾರು ಜನರು ಬಲಿಯಾಗಿದ್ದು, ಇಸ್ರೇಲ್ & ಗಾಜಾಪಟ್ಟಿ ಭಾಗದಲ್ಲಿ ಮೃತಪಟ್ಟಿರುವ ಜನರ ಒಟ್ಟು ಸಂಖ್ಯೆ ಭಯ ಹುಟ್ಟಿಸುವಂತಿದೆ.

Israel Vs Hamas War Death Toll Is Near To Cross 4 Digit And Will Reach 5 Digit Soon

ಭೀಕರ ಯುದ್ಧಕ್ಕೆ 7,000 ಜನ ಬಲಿ?

ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಹೀಗೆ ತಿಕ್ಕಾಟ ಜೋರಾದ ಸಮಯದಲ್ಲೇ 7,326ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೇ ಹಿಂಸೆಯಲ್ಲಿ ಮೃತಪಟ್ಟಿರುವ 7,326 ಜನರ ಪೈಕಿ, 3,038 ಮಕ್ಕಳು ಕೂಡ ಸೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಲ್ಲಿಂದಲೋ ಬಂದು ಬೀಳುವ ಬಾಂಬ್‌ಗಳು, ಕ್ಷಿಪಣಿಗಳು ಜನರನ್ನು ಬೆಚ್ಚಿ ಬೀಳಿಸಿವೆ. ಇನ್ನು ಏನೂ ಅರಿಯದ ಮಕ್ಕಳು ಜೀವ ಉಳಿಸಿಕೊಳ್ಳಲು, ಪುಟಾಣಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ.

ದೊಡ್ಡಣ್ಣ ಅಮೆರಿಕ ಯುದ್ಧ ನಿಲ್ಲಿಸುತ್ತಾ?

ಇಸ್ರೇಲ್‌ ಸೇನೆಗೆ ಹಮಾಸ್ ವಿರುದ್ಧ ಹೋರಾಡಲು ಅಗತ್ಯ ಇರುವ ಸಲಕರಣೆಗಳನ್ನು ಅಮೆರಿಕ ಕೊಡುತ್ತಿದೆ. ಅಮೆರಿಕ ಇದೀಗ ಇಸ್ರೇಲ್ ಗೆಲುವಿಗಾಗಿ ಕಾಯುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಬಗ್ಗೆ ಆಕ್ರೋಶ ಮೊಳಗುತ್ತಿದೆ. ಆದರೂ ಯುದ್ಧ ನಿಲ್ಲಿಸುವ ಯತ್ನಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೇಲೆ ಕೂಡ ಒತ್ತಡ ಹೆಚ್ಚಾಗುತ್ತಿದೆ. ಇಷ್ಟಾದ್ರೂ ಅಮೆರಿಕ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ. ಹೀಗಾಗಿಯೇ ಮುಂಬರುವ ದಿನದಲ್ಲಿ ಯುದ್ಧ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

ವಿಶ್ವಸಂಸ್ಥೆ ಸಿಬ್ಬಂದಿ ಕೂಡ ಬಲಿ

ಇದು ಮಾತ್ರವಲ್ಲ, ಯುದ್ಧದಲ್ಲಿ 35 ಮಂದಿ ವಿಶ್ವಸಂಸ್ಥೆ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಯುದ್ಧದ ನೆಲದಲ್ಲಿ, ಸಂಕಷ್ಟಕ್ಕೆ ಸಿಲುಕಿದವರ ಪರವಾಗಿ ಕೆಲಸ ಮಾಡ್ತಿದ್ದ ಹತ್ತಾರು ಸಿಬ್ಬಂದಿ ಕೂಡ ಜೀವ ಬಿಟ್ಟಿದ್ದಾರೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದರೂ, ಹಮಾಸ್ ಮತ್ತು ಇಸ್ರೇಲ್ ನಡುವೆ ಯಾವುದೇ ಶಾಂತಿ ಮಾತುಕತೆಗಳು ನಡೆದಿಲ್ಲ. ಹೀಗಾಗಿ ಸ್ಥಳೀಯ ನಿವಾಸಿಗಳಿಗೆ ಮತ್ತಷ್ಟು ಭಯ ಶುರುವಾಗಿದೆ.

Israel Vs Hamas War Death Toll Is Near To Cross 4 Digit And Will Reach 5 Digit Soon

ಸಿರಿಯಾ ಮೇಲೆ ಅಮೆರಿಕ ದಾಳಿ!

ಒಂದು ಕಡೆ ಇಸ್ರೇಲ್ & ಹಮಾಸ್ ವಾರ್ ನಡೆಯುತ್ತಿದ್ದು, ಇನ್ನೊಂದು ಕಡೆ ಅಮೆರಿಕದ ಸೇನೆ ದಿಢೀರ್ ಸಿರಿಯಾ ಮೇಲೆ ದಾಳಿ ಮಾಡಿದೆ. ಪೂರ್ವ ಸಿರಿಯಾದ ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಇರಾನ್ ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕದ ಸೇನೆ ವಿರುದ್ಧ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಲು, ಅಮೆರಿಕದ ಅಧ್ಯಕ್ಷ ಬೈಡನ್ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಆದೇಶದ ನಂತರ, ಸಿರಿಯಾದಲ್ಲಿ ಇರುವ ಇರಾನ್ ನೆಲೆಗಳ ಮೇಲೆ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.

ಪೆಂಟಗನ್ ಹೇಳಿದ್ದು ಏನು?

ಇಸ್ರೇಲ್ & ಹಮಾಸ್ ಮಧ್ಯೆ ಸಂಘರ್ಷ ತೀವ್ರಗೊಂಡ ಬಳಿಕ ಇರಾಕ್ & ಸಿರಿಯಾದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಮತ್ತು ಮೈತ್ರಿ ಪಡೆಗಳ ಮೇಲೆ ಕನಿಷ್ಠ 19 ಬಾರಿ ದಾಳಿ ನಡೆಸಿವೆ ಎಂದು ಪೆಂಟಗನ್ ಆರೋಪಿಸಿದೆ. ಇರಾಕ್ & ಸಿರಿಯಾದಲ್ಲಿ ಅಮೆರಿಕದ ಸೇನೆ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಆತ್ಮರಕ್ಷಣೆಯ ಭಾಗವಾಗಿ ದಾಳಿ ನಡೆಸಲಾಗಿದೆ ಅನ್ನೋ ಮಾತನ್ನ ಇದೀಗ ಅಮೆರಿಕ ಹೇಳುತ್ತಿದೆ. ಈ ಕುರಿತು ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾದ ಯಾಲ್ಡ್ ಆಸ್ಟಿನ್ ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+