Syrian Civil War: ಇಸ್ರೇಲ್ ವಶಕ್ಕೆ ಸಿರಿಯಾ ನೆಲ? ಏನಿದು ಹೊಸ ಲೆಕ್ಕಾಚಾರ?

ಸಿರಿಯಾ ನೆಲದಲ್ಲಿ ಮತ್ತೆ ರಕ್ತ ಕ್ರಾಂತಿ ಶುರುವಾಗಿದ್ದು, ಸಿರಿಯಾ ವಿರುದ್ಧ ದಂಗೆ ಎದ್ದಿರುವ ಜನರ ಸೇನೆ ಈಗ ರಾಜಧಾನಿ ಸಮೇತ ಹಲವು ಪ್ರಮುಖ ನಗರಗಳನ್ನ ತಮ್ಮ ವಶಕ್ಕೆ ಪಡೆದಿದೆ. ಅದರಲ್ಲೂ ಹೀಗೆ ದಂಗೆಕೋರರು ಅಟ್ಯಾಕ್ ಮಾಡಿದ ನಂತರ, ಸ್ವತಃ ಸಿರಿಯಾ ಅಧ್ಯಕ್ಷ ಆ ದೇಶ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕಠಿಣವಾಗುತ್ತಿರುವ ಸಮಯಕ್ಕೇ ಮತ್ತಷ್ಟು ಸಂಚಲನ ಸೃಷ್ಟಿ ಮಾಡುವ ಸುದ್ದಿ ಇದೀಗ ಸಿಗುತ್ತಿದ್ದು, ಇಸ್ರೇಲ್ ವಶಕ್ಕೆ ಸಿರಿಯಾ ನೆಲ? ಎಂಬ ಪ್ರಶ್ನೆ ಮೂಡಿದೆ.

ಮಧ್ಯಪ್ರಾಚ್ಯ ಭಾಗದ ನೆಮ್ಮದಿ ಹಾಳಾಗಿ ಹೋಗಿದ್ದು, ಸಿರಿಯಾ ನೆಲದಲ್ಲಿ ಈಗ ಏನಾಗುತ್ತಿದೆ? ಎಂಬುದೇ ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಆಗಿರುವುದು ಸಿರಿಯಾ ನೆಲದಲ್ಲಿ ಶುರುವಾದ ದಂಗೆ. ಅಂದಹಾಗೆ, ನಾಗರಿಕ ಯುದ್ಧದ ಪರಿಣಾಮ ನಲುಗಿ ಹೋಗಿರುವ ಸಿರಿಯಾ ಇದೀಗ ಮತ್ತಷ್ಟು ಹೊತ್ತಿ ಉರಿಯುತ್ತಿದೆ. ಇದರ ಪರಿಣಾಮ ಈಗ ಸಿರಿಯಾ ಜನರು ನಲುಗಿ ಹೋಗಿ ದೇಶ ಬಿಟ್ಟು ಓಡಿ ಹೋಗಲು ಸಿದ್ಧರಾಗಿದ್ದಾರೆ. ಇಂತಹ ಸಮಯದಲ್ಲೇ ಇಸ್ರೇಲ್ ಕೂಡ ಭಾರಿ ಭರ್ಜರಿ ದಾಳಿ ಆರಂಭ ಮಾಡಿದೆ. ಯಾಕೆ ಗೊತ್ತಾ? ಮುಂದೆ ಓದಿ.

Israel Started To Attack On The Syria After Fall Of The Bashar Al-Assad Administration

ಇಸ್ರೇಲ್ ಮಿಲಿಟರಿಯಿಂದ ಭರ್ಜರಿ ಅಟ್ಯಾಕ್!

ಸಿರಿಯಾ ಮೇಲೆ ದಿಢೀರ್ ಇಸ್ರೇಲ್ ಘೋರ ದಾಳಿ ಆರಂಭ ಮಾಡಿದೆ. ಯಾಕಂದ್ರೆ ಒಂದು ಕಡೆ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು & ದೇಶವನ್ನೇ ಬಿಟ್ಟು ಅಸ್ಸಾದ್ ಎಸ್ಕೇಪ್ ಆಗಿದ್ದು, ಹೀಗಿದ್ದಾಗ ದಂಗೆಕೋರರು ಸಿರಿಯಾ ರಾಜಧಾನಿಗೆ ನುಗ್ಗಿ ಅಧಿಕಾರ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲೇ ಇಸ್ರೇಲ್ ಕೂಡ ಎದ್ದು ಕೂತಿದ್ದು, ಸಿರಿಯಾ ನೆಲದ ಮೇಲೆ ದಾಳಿ ಮಾಡುತ್ತಾ ಸಿರಿಯಾ ನೆಲವನ್ನು ಇಸ್ರೇಲ್ ತನ್ನ ವಶಕ್ಕೆ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.

1974ರ ಕದನ ವಿರಾಮ ಒಪ್ಪಂದ ಉಲ್ಲಂಘನೆ?

ಗೋಲನ್ ಹೈಟ್ಸ್‌ ಎಂಬ ಪ್ರದೇಶ ಸಿರಿಯಾ ಸೇನೆಯ ಹಿಡಿತದಲ್ಲಿ ಇತ್ತು. ಇದೀಗ ಇಸ್ರೇಲ್‌ನ ಸೇನೆ ಈ ಭಾಗಕ್ಕೆ ನುಗ್ಗಿ 'ಗೋಲನ್ ಹೈಟ್ಸ್‌' ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ ಅಂತಾ ಮಾಹಿತಿ ಹರಿದಾಡುತ್ತಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಸಿರಿಯಾ ನಿಯಂತ್ರಿತ ಭಾಗಗಳು ಈಗ ಇಸ್ರೇಲ್ ಮಿಲಿಟರಿ ವಶಕ್ಕೆ ಸಿಗುತ್ತಿವೆ.

ಇದೀಗ ಈ ಭಾಗದಲ್ಲಿ ಭಾರಿ ಘೋರ ದಾಳಿ ನಡೆಯುವ ಆತಂಕ ಆವರಿಸಿದೆ. 1974ರ ಕದನ ವಿರಾಮ ಒಪ್ಪಂದದ ಪ್ರಕಾರ 'ಗೋಲನ್ ಹೈಟ್ಸ್‌' ಪ್ರದೇಶವನ್ನು ಬಫರ್ ಝೋನ್ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಈ ಪ್ರದೇಶಕ್ಕೆ ನುಗ್ಗಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

1967ರ ಯುದ್ಧದಲ್ಲಿ ಇಸ್ರೇಲ್ ಸೇನೆ....

ಅಂದಹಾಗೆ, 1967ರ ಯುದ್ಧದಲ್ಲಿ ಇಸ್ರೇಲ್ ಸೇನೆಯು 'ಗೋಲನ್ ಹೈಟ್ಸ್‌' ಪ್ರದೇಶದ ಒಂದು ಭಾಗವನ್ನು ತನ್ನ ವಶಕ್ಕೆ ಪಡೆದಿತ್ತು. ಈ ರೀತಿ, ಇಸ್ರೇಲ್ ನಡೆಸಿದ್ದ ದಾಳಿಯನ್ನು ಜಾಗತಿಕ ಸಮುದಾಯ ಅತಿಕ್ರಮ ಪ್ರವೇಶ ಎಂದು ಆರೋಪ ಮಾಡಿತ್ತು. ಆದರೆ ಇದೀಗ ಮತ್ತೊಮ್ಮೆ 'ಗೋಲನ್ ಹೈಟ್ಸ್‌' ಪ್ರದೇಶಕ್ಕೆ ನುಗ್ಗಿರುವ ಇಸ್ರೇಲ್, ಆ ಭಾಗವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+