Israel: ಗಾಜಾ ಪಟ್ಟಿಯಲ್ಲಿ 2ನೇ ಹಂತದ ಕದನ ವಿರಾಮಕ್ಕೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್
ಇಸ್ರೇಲ್ ಮತ್ತು ಹಮಾಸ್ ನಡುವೆ ಶುರುವಾಗಿದ್ದ ಯುದ್ಧದ ಪರಿಣಾಮ ಈಗಾಗಲೇ ಗಾಜಾ ಪಟ್ಟಿಯ ಪರಿಸ್ಥಿತಿ ನರಕದಂತೆ ಕಾಣುತ್ತಿದೆ. ಕಳೆದ 2 ವರ್ಷಗಳಿಗೂ ಹೆಚ್ಚು ಕಾಲದಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದ್ದು, ಇದರಲ್ಲಿ ಗಾಜಾ ಪಟ್ಟಿ ನರಕವಾಗಿದೆ. ಯುದ್ಧ ಇವತ್ತು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾ ಕಾಯುತ್ತಿದ್ದರೂ ಯುದ್ಧ ನಿಲ್ಲಲೇ ಇಲ್ಲ. ಈ ಬಗ್ಗೆ ಜಗತ್ತಿನಾದ್ಯಂತ ಚರ್ಚೆ, ಮಾತುಕತೆ ನಡೆಯುತ್ತಲೇ ಇದೆ. ಹೀಗಿದ್ದರೂ ಗಾಜಾ ಯುದ್ಧ ಮಾತ್ರ ನಿಲ್ಲುತ್ತಲೇ ಇಲ್ಲ. ಇಷ್ಟೆಲ್ಲದರ ನಡುವೆ ಕೊನೆಗೂ ಗಾಜಾ ಪಟ್ಟಿಯಲ್ಲಿ 2ನೇ ಹಂತದ ಕದನ ವಿರಾಮಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾದ ನಂತರ ಈಗಾಗಲೇ ಹತ್ತಾರು ಸಾವಿರ ಜನರು ಜೀವ ಬಿಟ್ಟು, ಸಹಸ್ರಾರು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಗಾಜಾ ಪಟ್ಟಿಯಲ್ಲಿ ಈಗ ಬದುಕುವುದು ದೊಡ್ಡ ಸರ್ಕಸ್ ಎಂಬಂತೆ ಆಗಿದೆ. ಇನ್ನೇನು ಪರಿಸ್ಥಿತಿ ಕೈಮೀರಿ ಹೋಗಲಿದೆ ಎನ್ನುವಾಗಲೇ ಗಾಜಾ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಅದರಲ್ಲೂ ಇಸ್ರೇಲ್ ಈ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗಾಜಾ ಪಟ್ಟಿ ಇನ್ನುಮುಂದೆ ತಣ್ಣಗೆ ಇರಲು ಸಾಧ್ಯ ಎನ್ನಲಾಗಿದೆ.

27 ತಿಂಗಳು ಕಳೆದರೂ ಯುದ್ಧ ನಿಲ್ಲುತ್ತಿಲ್ಲ
ಇಸ್ರೇಲ್ & ಗಾಜಾ ಕದನ ಶುರುವಾಗಿ 27 ತಿಂಗಳು ಕಳೆದರೂ ಯುದ್ಧ ನಿಲ್ಲುತ್ತಿಲ್ಲ ಎಂಬ ಆಕ್ರೋಶ ಇದೀಗ ಜಗತ್ತಿನಾದ್ಯಂತ ಮೊಳಗಿದೆ. ಇದೇ ಕಾರಣಕ್ಕೆ ಹೇಗೋ ಹೆಂಗೋ ಕಷ್ಟಪಟ್ಟು ಯುದ್ಧ ನಿಲ್ಲಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಇಸ್ರೇಲ್. ಮತ್ತೊಂದು ಕಡೆ ಈ ಬಾರಿ ಖುದ್ದು ಅಮೆರಿಕ ಕೂಡ ಎಂಟ್ರಿಯನ್ನ ಕೊಟ್ಟಿದ್ದು, ಯುದ್ಧ ನಿಲ್ಲಿಸಲು ಬೇಕಾದ ಎಲ್ಲಾ ಕ್ರಮಗಳಿಗೆ ಬೆಂಬಲ ನೀಡುತ್ತಿದೆ.
ಪ್ರಮುಖವಾಗಿ ಈ ಯುದ್ಧ ನಿಲ್ಲಿಸಲು ಅಂತಾನೇ ಗಾಜಾ ಶಾಂತಿ ಮಂಡಳಿ ಕೂಡ ಸ್ಥಾಪನೆ ಆಗುತ್ತಿದೆ. ಈ ವಾತಾವರಣ ಇರುವಾಗಲೇ ಇಸ್ರೇಲ್ ಕೂಡ 2ನೇ ಹಂತದ ಕದನ ವಿರಾಮ ಪಕ್ಕಾ ಎಂಬುದನ್ನ ತಿಳಿಸಿದೆ. ಹಮಾಸ್ ಬಳಿ ಇದ್ದ ಒತ್ತೆಯಾಳುಗಳು ವಾಪಸ್ ಬಂದ ನಂತರ ಈ ಮಹತ್ವದ ಘೋಷಣೆ ಹೊರಡಿಸಿದೆ. ಇದು ಗಾಜಾ ಜನರಿಗೆ ಒಂದಷ್ಟು ನೆಮ್ಮದಿ ತರುವ ಜೊತೆಗೆ, ಈಗಿನ ನರಳಾಟ ನಿಂತರೆ ಸಾಕು ಎಂಬ ವಾತಾವರಣ ನಿರ್ಮಾಣ ಆಗಿದೆ.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ
ಗಾಜಾದಲ್ಲಿ ಇನ್ನು ಒತ್ತೆಯಾಳುಗಳಿಲ್ಲ ಎಂಬ ವಿಚಾರ ಸ್ಪಷ್ಟವಾದ ನಂತರ ಇಸ್ರೇಲ್ ಈ ನಿರ್ಧಾರಕ್ಕೆ ಬಂದಿದೆ. ಈ ಸಮಯದಲ್ಲಿ ಗಾಜಾ ಪಟ್ಟಿಯ ಭವಿಷ್ಯದ ಬಗ್ಗೆ ಮಾತನಾಡಿರುವ ಇಸ್ರೇಲ್ ಪ್ರಧಾನಿ, ಮುಂದಿನ ಹಂತದಲ್ಲಿ ಹಮಾಸ್ ನಿಶ್ಯಸ್ತ್ರೀಕರಣ ಪ್ರಕ್ರಿಯೆ ಆರಂಭ ಆಗುವ ಮುನ್ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಗಾಜಾ ಪುನರ್ ನಿರ್ಮಾಣಕ್ಕೆ ಕೂಡ ಯೋಜನೆಗಳನ್ನು ರೂಪಿಸಲಾಗಿದ್ದು, ಅಮೆರಿಕ ಕೂಡ ಸಾಥ್ ನೀಡಲಿದೆ. ಗಾಜಾ ಶಾಂತಿ ಮಂಡಳಿ ಮೂಲಕ ಗಾಜಾ ನೆಲವನ್ನು ಮತ್ತೆ ನಿರ್ಮಿಸಲು ಇದೀಗ ಪ್ಲಾನ್ ಮಾಡಲಾಗಿದೆ. ಹೀಗಾಗಿ ಗಾಜಾ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮುಂದೆ ಜೀವನ ಕಟ್ಟಿಕೊಳ್ಳುವ ಬಗ್ಗೆ ಯೋಜಿಸುತ್ತಿದ್ದಾರೆ.












Click it and Unblock the Notifications