ಗಾಜಾಪಟ್ಟಿ ಪೀಸ್.. ಪೀಸ್.. ಇದರಿಂದ ಇಸ್ರೇಲ್‌ಗೆ ಏನು ಲಾಭ?
ಇಸ್ರೇಲ್ & ಹಮಾಸ್ ಉಗ್ರರ ನಡುವೆ ಭೀಕರ ಯುದ್ಧವು ಆರಂಭವಾಗಿ ಇಂದಿಗೆ ಸರಿಯಾಗಿ ಒಂದು ತಿಂಗಳು ತುಂಬಿದೆ. ಸ್ಥಿತಿ ಹೀಗಿದ್ದಾಗಲೇ ಇಸ್ರೇಲ್ ಬೇರೆಯದ್ದೇ ಗೇಮ್ ಶುರುಮಾಡಿ ಗಾಜಾಪಟ್ಟಿ ನಗರವನ್ನು ಪೀಸ್ ಪೀಸ್ ಮಾಡಿದೆ. ಇದರಿಂದ ಹಮಾಸ್ ಉಗ್ರರ ಬುಡವನ್ನೇ ಅಲುಗಾಡಿಸಿರುವ ಇಸ್ರೇಲ್, ಮುಂಬರುವ ಭೀಕರ ಕಾಳಗಕ್ಕೆ ಸಜ್ಜಾಗಿದೆ. ಹಾಗಾದರೆ ಇದೀಗ ಇಸ್ರೇಲ್ ಸೇನೆ ದಿಢೀರ್ ಗಾಜಾಪಟ್ಟಿ ನಗರವನ್ನು 2 ಭಾಗ ಮಾಡಿದ್ದು ಏಕೆ ಗೊತ್ತಾ?
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧವೇ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗಾಗಿ ಇಂದಿಗೆ ಸರಿಯಾಗಿ 1 ತಿಂಗಳು ಮುಗಿಸಿದೆ ಇಸ್ರೇಲ್ & ಹಮಾಸ್ ಉಗ್ರರ ವಾರ್. ಈ ನಡುವೆ ಉತ್ತರ ಗಾಜಾಪಟ್ಟಿ ಭಾಗದಲ್ಲಿ ಹಮಾಸ್ ಉಗ್ರರ ಪಡೆ, ದೊಡ್ಡ ಬಿಡಾರ ಹೂಡಿದೆ. ಹೀಗಾಗಿ ಅದನ್ನ ಧೂಳ್, ಧೂಳ್ ಮಾಡಲು ಇಸ್ರೇಲ್ ಸೇನೆ ಈಗ ಗಾಜಾಪಟ್ಟಿ ನಗರವನ್ನೇ ಎರಡು ಭಾಗ ಮಾಡಿಬಿಟ್ಟಿದೆ!

ಒಳಗೆ ನುಗ್ಗಿ ಹೊಡೆಯುತ್ತಾ ಇಸ್ರೇಲ್?
ಅಂದಹಾಗೆ ಭೀಕರ ವಾಯುದಾಳಿ ನಂತರ ಗಾಜಾಪಟ್ಟಿ ನಗರವನ್ನ ಇಬ್ಭಾಗ ಮಾಡಲಾಗಿದ್ದು ಸುರಂಗದ ಒಳಗೆ ಅಡಗಿ ಕೂತಿರುವ ಉಗ್ರರಿಗೆ ಹುಡುಕಾಟ ಮುಂದುವರಿದಿದೆ. ಈ ನಡುವೆ, ಇಸ್ರೇಲ್ ಭೂಸೇನೆ ಗಾಜಾಪಟ್ಟಿ ದಕ್ಷಿಣ ಭಾಗದ ತಂಟೆಗೆ ಹೋಗಿಲ್ಲ. ಏಕೆಂದರೆ ಹಮಾಸ್ ಉಗ್ರರು ಇರುವುದು ಉತ್ತರ ಭಾಗದಲ್ಲಿ. ಹೀಗಾಗಿ ಇಸ್ರೇಲ್ ಭೂಸೇನೆ ವಾಯುದಾಳಿ ಮತ್ತು ಭೂದಾಳಿ ಸಹಯಾದಿಂದ ಇದೀಗ ಗಾಜಾಪಟ್ಟಿ ಭಾಗವನ್ನು 2 ಭಾಗ ಮಾಡಿದೆ. ಮುಂದಕ್ಕೆ ತನ್ನಲ್ಲಿರುವ ಅಸ್ತ್ರಗಳನ್ನೆಲ್ಲಾ ಬಳಸಿ, ಹಮಾಸ್ ಉಗ್ರರ ಸರ್ವನಾಶಕ್ಕೆ ಸಜ್ಜಾಗಿದೆ.
ಉಗ್ರರ ಸುರಂಗಕ್ಕೆ ಹೋಗೋದು ಹೇಗೆ?
ಸುರಂಗ ಮಾರ್ಗ ರಚನೆ ಮಾಡಿಕೊಂಡಿರುವ ಈ ಉಗ್ರ ಪಡೆ, ಇಸ್ರೇಲ್ ಸೇನೆ ಒಳಗೆ ಬಂದ ತಕ್ಷಣ ಹೊಂಚು ಹಾಕಿ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂಬ ಆರೋಪವಿದೆ. ಹಮಾಸ್ ಉಗ್ರಪಡೆ ಗಾಜಾಪಟ್ಟಿ ಒಳಗಡೆ ಅಡಗುತಾಣವಾಗಿ ಸುರಂಗ ನಿರ್ಮಿಸಿಕೊಂಡಿದ್ದು, ಹಲವು ವರ್ಷಗಳಿಂದ ಯುದ್ಧ ನಡೆಸಲು ಹೊಂಚು ಹಾಕಿದ್ದಾರೆ ಅಂತ ಹೇಳಲಾಗಿದೆ. ಇದರ ಪರಿಣಾಮ ಮುಂದಿನ ದಿನದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅಂತಾ ಕೂಡ ಹೇಳಲಾಗಿದ್ದು, ಈ ಕಾರಣಕ್ಕೆ ಗಾಜಾಪಟ್ಟಿ ಭಾಗವನ್ನು 2 ಪೀಸ್ ಮಾಡಿ. ಏನೋ ತಂತ್ರವನ್ನು ಇಸ್ರೇಲ್ ಸೇನೆ ರೂಪಿಸಿರುವಂತೆ ಕಾಣುತ್ತಿದೆ.

4,100 ಮಕ್ಕಳ ಸಾವು
ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ರಣಭೀಕರ ಕಾಳಗದಲ್ಲಿ ಈವರೆಗೂ 10,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಬಲಿಯಾಗಿದ್ದು, ಮೃತಪಟ್ಟವರಲ್ಲಿ 4,100 ಮಕ್ಕಳೇ ಸೇರಿದ್ದಾರೆ. ಜೊತೆಗೆ 2,640ಕ್ಕೂ ಹೆಚ್ಚು ಮಹಿಳೆಯರು ಕೂಡ ಬಲಿಯಾಗಿದ್ದಾರೆ. ಹಾಗೂ ಇಸ್ರೇಲ್ ಕಡೆ 1,400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಒತ್ತೆಯಾಳುಗಳು ಹಮಾಸ್ ಉಗ್ರರ ವಶದಲ್ಲಿ ಇದ್ದಾರೆ ಎನ್ನುವ ಆರೋಪವು ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಸಾವಿನ ಸಂಖ್ಯೆ 11,000 ಗಡಿ ದಾಟಿದೆ. ಇದು ಸಾಲದು ಎಂಬಂತೆ ಗಾಜಾಪಟ್ಟಿ ಸಂಪೂರ್ಣ ಸ್ಮಶಾನವಾಗುವ ಸೂಚನೆ ಇದೀಗ ಸಿಗುತ್ತಿದೆ.
ಒಟ್ನಲ್ಲಿ ಇಸ್ರೇಲ್ ತಾನು ಅಂದುಕೊಂಡ ರೀತಿಯೆ ಗಾಜಾಪಟ್ಟಿಗೆ ನುಗ್ಗಿ, ಗಾಜಾಪಟ್ಟಿಯನ್ನ ಉತ್ತರ ಮತ್ತು ದಕ್ಷಿಣ ಭಾಗವಾಗಿ ಪೀಸ್ ಪೀಸ್ ಮಾಡಿದೆ. ಇನ್ನು ಮುಂದೆ ನಡೆಯೋದೆಲ್ಲ ಅಕ್ಷರಶಃ ಸರ್ವನಾಶವಾಗಿದ್ದು, ಮತ್ತೊಂದು ಜಾಗತಿಕ ಯುದ್ಧಕ್ಕೂ ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಈ ಕಿತ್ತಾಟ ಕಿಚ್ಚು ಹೊತ್ತಿಸಿದರೂ ಅಚ್ಚರಿ ಇಲ್ಲ. ಹೀಗಾಗಿ ಅಮೆರಿಕದ ಸೇನೆ ಅಲರ್ಟ್ ಆಗಿ, ಇಸ್ರೇಲ್ ಸಮೀಪವೇ ಅಗತ್ಯ ಯುದ್ಧ ಪರಿಕರಗಳನ್ನ ನಿಯೋಜಿಸಿದೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications