ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military
ಇಸ್ರೇಲ್ ದಿಢೀರ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯ ಭಾಗದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿದೆ. ಇರಾನ್ ಸೇನೆ ಕೂಡ ರೊಚ್ಚಿಗೆದ್ದು ಇದೀಗ ಮರುದಾಳಿ ಆರಂಭಿಸಿದ್ದು, ಈ ಮೂಲಕ ಎರಡೂ ಕಡೆ ಕ್ಷಿಪಣಿಗಳು ತೂರಾಡುತ್ತಿವೆ. ಇದರ ಜೊತೆಗೆ ಅಮೆರಿಕ ಸೇನೆಯ ಬೃಹತ್ & ಶಕ್ತಿಶಾಲಿ ಯುದ್ಧ ವಿಮಾನಗಳು ಕೂಡ ಅಬ್ಬರಿಸುತ್ತಾ ಇರಾನ್ ನೆಲವನ್ನು ಧೂಳ್ ಧೂಳ್ ಮಾಡುತ್ತಾ ಇವೆ. ಹೀಗೆಲ್ಲಾ ಭೀಕರ ದಾಳಿ ಪರಿಣಾಮ ಇರಾನ್ ಕೂಡ ನಲುಗಿ ಹೋಗಿದ್ದು, ತನ್ನ ಮೇಲೆ ಹೀಗೆ ದಾಳಿ ಮಾಡಿದ ದೇಶಗಳ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಈ ಕೋಪಕ್ಕೆ, ಕುವೈತ್ ನಲುಗಿ ಹೋಗಿದ್ದು ಇರಾನ್ ಸೇನೆಯಿಂದ ನಡೆದ ದಾಳಿಗೆ ಕುವೈತ್‌ನ ಅಮೆರಿಕ ಸೇನೆ ನೆಲೆ ಹಾನಿಗೀಡಾಗಿದೆ.
ಇರಾನ್ ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಟ್ಟಿಗೆ ಸೇರಿ ಬೃಹತ್ ದಾಳಿಯನ್ನು ಸಂಘಟಿಸಿ ಯುದ್ಧವನ್ನೇ ಇದೀಗ ಶುರು ಮಾಡಿಬಿಟ್ಟಿವೆ. ನೋಡ ನೋಡುತ್ತಲೇ ಭಾರಿ ದೊಡ್ಡ ಹಂತಕ್ಕೆ ತಲುಪಿರುವ ಈ ಯುದ್ಧ ಪರಮಾಣು ಸಂಘರ್ಷವಾಗಿ ಕೂಡ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಪ್ರಪಂಚದ ಎಲ್ಲೆಡೆಯೂ ಈ ಬಗ್ಗೆ ಆತಂಕ ಶುರುವಾಗಿದೆ. ಏಕೆಂದರೆ ಅಕಸ್ಮಾತ್ ಇರಾನ್ ಇಲ್ಲಿ ಪರಮಾಣು ಬಾಂಬ್ ಬಳಸಿದ್ದೇ ಆದರೆ ಆಗ ಇನ್ನೂ ದೊಡ್ಡ ಗಲಾಟೆ ಶುರುವಾಗಲಿದೆ. ಹೀಗಿದ್ದಾಗ ಅಮೆರಿಕದ ಸೇನಾ ನೆಲೆಗಳು ಇರುವ ಜಾಗಗಳ ಮೇಲೆ ಇರಾನ್ ದಿಢೀರ್ ತನ್ನ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಶುರು ಮಾಡಿದೆ.

ಅಮೆರಿಕ & ಇರಾನ್ ಜಗಳದಲ್ಲಿ ಕುವೈತ್‌ಗೆ ಭೀತಿ
ಇರಾನ್ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಕಡೆಯಿಂದ ಕುವೈತ್‌ನಲ್ಲಿ ಇರುವ ಅಮೆರಿಕ ನೌಕಾ ನೆಲೆ ಮೇಲೆ ಭೀಕರವಾಗಿ ಖಂಡಾಂತರ ಕ್ಷಿಪಣಿಯ ದಾಳಿ ಮಾಡಲಾಗಿದೆ. ಹಾಗೇ ಡ್ರೋನ್ ಮೂಲಕವೂ ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಕುವೈತ್‌ನ ಅಬ್ದುಲ್ಲಾ ಮುಬಾರಕ್ ಪ್ರದೇಶದಲ್ಲಿರುವ ಅಮೆರಿಕ ನೌಕಾ ನೆಲೆ ಮೇಲೆ 4 ಖಂಡಾಂತರ ಕ್ಷಿಪಣಿ ಹಾಗೂ 12 ಡ್ರೋನ್ ಬಳಸಿ ದಾಳಿ ನಡೆಸಲಾಗಿದೆ, ಎಂದು ಇದೀಗ ಇರಾನ್ ಹೇಳಿಕೊಂಡಿದೆ. ಇನ್ನೊಂದು ಕಡೆ, ಅಮೆರಿಕ ನೌಕೆಗಳಿಗೆ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಎಂಎಸ್‌ಪಿ ಹಡಗನ್ನ ಜೆಬೆಲ್ ಅಲಿ ನಂಗೂರ್ ಪ್ರದೇಶದಲ್ಲಿ ಅಟ್ಯಾಕ್ ಮಾಡಲಾಗಿದೆ. ಒಟ್ಟು 4 ಡ್ರೋನ್ ಬಳಸಿ ಈ ದಾಳಿ ಮಾಡಲಾಗಿದೆಯಂತೆ.
ಇರಾನ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಮೃತಪಟ್ಟಿರುವುದು ಕನ್ಫರ್ಮ್ ಆಗಿದೆ. ಖಮೇನಿ ಮಾತ್ರವಲ್ಲ ಈಗಾಗಲೇ ಇರಾನ್ ದೇಶದ ಇಬ್ಬರು ಪ್ರಮುಖ ಸೇನಾಧಿಕಾರಿಗಳು ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ. ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ನೀಡಿರುವ ಮಾಹಿತಿಯ ಪ್ರಕಾರವೇ, ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಸೇರಿದಂತೆ, ಇರಾನ್ ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಶಾಮ್ಖಾನಿ ಈ ದಾಳಿಯಲ್ಲಿ ಮೃತಪಟ್ಟಿರುವುದು ಕನ್ಫರ್ಮ್ ಆಗಿತ್ತು. ಇದೆಲ್ಲಾ ನೋಡುತ್ತಿದ್ದರೆ, ಇಡೀ ಇರಾನ್ ಬೂದಿ ಮುಚ್ಚಿದ ಕೆಂಡವಾಗಿದೆ.












Click it and Unblock the Notifications