ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕಾರಣವಾದ ಖಮೇನಿ ಯಾರು ಎಂಬದನ್ನು ತಿಳಿಯಿರಿ | Israel Military
ಇರಾನ್ ಧಗಧಗ ಅಂತಿದೆ, ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ಕೊಡುತ್ತಿರುವ ಏಟಿಗೆ ನಲುಗಿ ಹೋಗಿ ಒದ್ದಾಡುತ್ತಿದೆ ಇರಾನ್. ತನ್ನ ಜೊತೆಗೆ ಸ್ನೇಹಿತ ದೇಶಗಳು ಇಲ್ಲದೆ ಒಂಟಿಯಾಗಿ ಅಮೆರಿಕ & ಇಸ್ರೇಲ್ ಸೇನೆಯ ದಾಳಿ ಎದುರಿಸುವ ಅನಿವಾರ್ಯತೆಗೆ ಈಗ ಸಿಲುಕಿದೆ. ಅಮೆರಿಕ & ಇಸ್ರೇಲ್ ಪಡೆಗಳು ಒಂದಾಗಿ ಇರಾನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಶುರು ಮಾಡಿದ್ದು, ಇರಾನ್ ರಾಜಧಾನಿ ತೆಹ್ರಾನ್ ಸೇರಿ ಸುತ್ತಮುತ್ತಲ ಭಾಗಗಳು ಅಲ್ಲಾಡಿವೆ. ಇದೇ ಸಮಯದಲ್ಲಿ ಇರಾನ್ ಸರ್ವಾಧಿಕಾರಿ ಅಲಿ ಹೊಸೆನಿ ಖಮೇನಿ ಅಥವಾ ಖಮೇನಿ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ಸ್ವತಃ ಇರಾನ್ ಪ್ರಜೆಗಳಿಂದಲೇ ಆಕ್ರೋಶ ಮೊಳಗಿದೆ.
ಅಮೆರಿಕ & ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕು ಎಂದು ಎಲ್ಲ ರೀತಿ ಪ್ರಯತ್ನ ಮಾಡಿ ಚರ್ಚೆ ಕೂಡ ನಡೆಸಲಾಗಿತ್ತು. ಅದರಲ್ಲೂ ಮಧ್ಯಪ್ರಾಚ್ಯದ ಘಟಾನುಘಟಿ ದೇಶಗಳೇ ಈ ವಿಚಾರದಲ್ಲಿ ಮುಂದೆ ನಿಂತು ಶಾಂತಿ ಮಾತುಕತೆಗೆ ಪ್ರಯತ್ನ ಮಾಡಿದ್ದವು. ಆದರೆ ಇದೆಲ್ಲಾ ಹಾಳಾಗಿ ಹೋಗಲು ಖಮೇನಿ ಕಾರಣ ಎಂಬ ಆರೋಪ ಇದೆ, ಇರಾನ್ ಸರ್ವಾಧಿಕಾರಿ ಅಲಿ ಹೊಸೆನಿ ಖಮೇನಿ ತಾನು ಅಧಿಕಾರದಲ್ಲಿ ಇಲ್ಲದೇ ಇದ್ದರೂ ಎಲ್ಲರೂ ತನ್ನ ಮಾತು ಕೇಳಬೇಕು ಎಂಬಂತೆ ನಡೆದುಕೊಳ್ಳುವ ಆರೋಪ ಇದೆ. ಈ ಆರೋಪಗಳಿಗೆ ತಕ್ಕಂತೆ ಈಗಲೂ ಅಮೆರಿಕ & ಇರಾನ್ ನಡುವೆ ಶಾಂತಿ ಒಪ್ಪಂದ ಸಾಧ್ಯವಾಗದೇ ಇರಲು, ಯುದ್ಧ ಆರಂಭವಾಗಲು ಇದೇ ಸರ್ವಾಧಿಕಾರಿ ಅಲಿ ಹೊಸೆನಿ ಖಮೇನಿ ಕಾರಣ ಎಂದು ಸ್ವತಃ ಇರಾನ್ ಜನರು ಆರೋಪಿಸುತ್ತಿದ್ದಾರೆ. ಹಾಗಾದರೆ ಯಾರು ಈ ಸರ್ವಾಧಿಕಾರಿ ಖಮೇನಿ? ಬನ್ನಿ ತಿಳಿಯೋಣ.

ಅಲಿ ಹೊಸೆನಿ ಖಮೇನಿ ಯಾರು?
ಖಮೇನಿ ಇರಾನ್ ಸರ್ವಾಧಿಕಾರಿಯಾಗಿ ಎಲ್ಲ ಹಿಡಿತವನ್ನೂ ತನ್ನ ಬಳಿಯೇ ಇಟ್ಟುಕೊಂಡಿರುವ ವ್ಯಕ್ತಿ. 1939ರಲ್ಲಿ ಇರಾನ್‌ನ ಮಶ್ಹದ್ ನಗರದಲ್ಲಿ ಜನಿಸಿದ ಖಮೇನಿ, ಸ್ಥಳೀಯ ಧಾರ್ಮಿಕ ನಾಯಕ ಜವಾದ್ ಖಮೇನಿಯ 2ನೇ ಪುತ್ರ ಎಂಬುದು ಗಮನಾರ್ಹ. ಆರ್ಥಿಕವಾಗಿ ಸ್ಥಿತಿವಂತ ಕುಟುಂಬ ಆಗಿದ್ದ ಖಮೇನಿ ಫ್ಯಾಮಿಲಿ, ಮಗನಿಗೆ ಧಾರ್ಮಿಕ ಜೀವನ ಶೈಲಿ ಕಲಿಸಿತ್ತು. ಬಾಲ್ಯದಲ್ಲಿಯೇ ಕುರಾನ್ ಓದುವುದನ್ನ ಕಲಿತ ಖಮೇನಿ ಬಳಿಕ ಮಶ್ಹದ್‌ನಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಸೆಮಿನರಿ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ ತನ್ನ 18ನೇ ವಯಸ್ಸಿನಲ್ಲಿ, ಶಿಯಾ ಇಸ್ಲಾಮಿಕ್ ಕಾನೂನುಶಾಸ್ತ್ರ ಅಧ್ಯಯನಕ್ಕಾಗಿ ನಜಫ್ ನಗರಕ್ಕೆ ವಲಸೆ ಹೋಗಬೇಕಾಯಿತು. ಹೀಗೆ ಇರಾಕ್‌ನಲ್ಲಿ ಶಿಕ್ಷಣ ಪಡೆದು, ಇರಾನ್‌ಗೆ ಮರಳಿದ ನಂತರ ಖಮೇನಿಗೆ ಹೊಸ ಬದುಕು ಸಿಕ್ಕಿತ್ತು.
ಖಮೇನಿ ಕುಟುಂಬದ ಬಗ್ಗೆ ರಹಸ್ಯ
ಇರಾನ್ ಸರ್ವಾಧಿಕಾರಿ ಖಮೇನಿ ಕುಟುಂಬದ ಮಾಹಿತಿಯು ಅದೆಷ್ಟು ರಹಸ್ಯವಾಗಿದೆ ಎಂದರೆ ಈಗಲೂ, ಹೆಂಡತಿ ಯಾರು & ಎಲ್ಲಾ ಮಕ್ಕಳ ಹೆಸರು ಏನು? ಎಂಬುದು ಈವರೆಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಒಟ್ಟು 6 ಮಕ್ಕಳ ತಂದೆ ಆಗಿರುವ ಖಮೇನಿ ಆಗಾಗ ಕವನ ವಾಚನ ಕಾರ್ಯಕ್ರಮ ಸೇರಿದಂತೆ ಇರಾನ್ ದೇಶದ ತೋಟಗಾರಿಕೆ ವಿಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದು ಉಂಟು. ಹೀಗೆ ಇರಾನ್ ದೇಶದಲ್ಲಿ ಸರ್ವಾಧಿಕಾರಿ ಆಗಿ ಮೆರೆದು, ಇಡೀ ಇರಾನ್ ಮೇಲೆ ಹಿಡಿತ ಹೊಂದಿರುವ ಖಮೇನಿ ಬಗ್ಗೆ ಸ್ವಂತ ದೇಶದಲ್ಲೇ ಪದೇ ಪದೇ ಆಕ್ರೋಶ ಕೂಡ ಮೊಳಗುತ್ತಾ ಇರುತ್ತದೆ. ಹಾಗಾದರೆ ಇರಾನ್‌ನ ಅಧಿಕಾರ ಖಮೇನಿ ಕೈಗೆ ಸಿಕ್ಕಿದ್ದು ಹೇಗೆ? ಬನ್ನಿ ತಿಳಿಯೋಣ.
ಖಮೇನಿ ಬಂಧಿಸಿದ್ದ ಇರಾನ್ ಗುಪ್ತಚರ ಸಂಸ್ಥೆ
ಅದು 1960 & 1970 ಸಮಯ, ಅಮೆರಿಕದ ಬೆಂಬಲದಿಂದ ಆಡಳಿತ ನಡೆಸುತ್ತಿದ್ದ ಶಾಹ್ ಆಡಳಿತದ ವಿರುದ್ಧ ದೊಡ್ಡ ಹೋರಾಟ ಭುಗಿಲೆದ್ದಿತ್ತು. ರಾಜತಂತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಹಾಗೂ ಪ್ರತಿಭಟನೆ ಆರಂಭ ಆಗಿದ್ದಾಗ, ಖಮೇನಿ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರ ಗಮನ ಸೆಳೆದಿದ್ದು ಮೊದಲ ಬಾರಿಗೆ. ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಪರಿಣಾಮ ಶಾಹ್‌ನ ಗುಪ್ತಚರ ಸಂಸ್ಥೆ ಸಾವಾಕ್ ಎಂದರೆ ರಾಷ್ಟ್ರೀಯ ಭದ್ರತಾ ಮತ್ತು ಮಾಹಿತಿ ಸಂಸ್ಥೆ ಖಮೇನಿಯ ಬಂಧಿಸಿತ್ತು. ಏಕೆಂದರೆ ಈ ಭದ್ರತಾ ಸಂಸ್ಥೆಯ ಮೂಲಕವೇ ಆಗ ಇರಾನ್ ಆಡಳಿತ ತನ್ನ ವಿರೋಧಿಗಳನ್ನು ಮಟ್ಟ ಹಾಕಿ & ಆಡಳಿತಕ್ಕೆ ಎದುರಾದವರನ್ನು ತಣ್ಣಗಾಗಿಸುತ್ತಾ ಇತ್ತು. ಅದೇ ರೀತಿಯಾಗಿ ಖಮೇನಿಗೆ ಕೂಡ ಪ್ರತಿಭಟನೆ ಮಾಡಿದ್ದಕ್ಕೆ ಬಿಸಿ ಮುಟ್ಟಿಸಲಾಗಿತ್ತು.
ಇರಾನ್ ಅಧಿಕಾರ ಸಿಕ್ಕಿದ್ದು ಹೇಗೆ?
ಅಂದಹಾಗೆ 1979ರ ತನಕವೂ ಇರಾನ್‌ನ ಆಡಳಿತ ನಡೆಸಿದ ಮಹಮ್ಮದ್ ರೆಜಾ ಶಾಹ್ ಪಹ್ಲವಿಗೆ ಅಮೆರಿಕ ಮತ್ತು ಬ್ರಿಟನ್ ಸೇರಿ ಪಾಶ್ಚಾತ್ಯ ದೇಶಗಳ ಬೆಂಬಲ ಇತ್ತು. ತೈಲ ಆದಾಯದಿಂದಲೇ ಇರಾನ್ ಆಗ ಆರ್ಥಿಕ ಬೆಳವಣಿಗೆ ಕಂಡರೂ ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆ ಆಗಿರಲೇ ಇಲ್ಲ. ಈ ಕಾರಣಗಳಿಂದ ವಿದ್ಯಾರ್ಥಿಗಳು, ಹೋರಾಟಗಾರರು & ಧಾರ್ಮಿಕ ನಾಯಕರು ಸೇರಿ ಕ್ರಾಂತಿಗೆ ಬೆಂಬಲ ನೀಡುವ ದೊಡ್ಡ ಗುಂಪು ಹುಟ್ಟಿಕೊಂಡಿತ್ತು ಇರಾನ್ ದೇಶದಲ್ಲಿ. ಈ ಕಾರಣಗಳಿಂದ 1979 ಕ್ರಾಂತಿ ನಂತರ, ಶಾಹ್ ಆಡಳಿತ ಪತನಗೊಂಡಿತ್ತು. ಮುಂದೆ ಇರಾನ್ ದೇಶದಲ್ಲಿ ದೊಡ್ಡ ಬದಲಾವಣೆಗಳು ಕೂಡ ಆರಂಭ ಆದವು.
ಇರಾನ್ ದೇಶದಲ್ಲಿ ಶಾಹ್ ಆಡಳಿತ ಪತನಗೊಂಡ ನಂತರ, ಇರಾನ್ ದೇಶ ಇಸ್ಲಾಮಿಕ್ ಗಣರಾಜ್ಯವಾಗಿ ರೂಪುಗೊಂಡಿತು. ಅದೇ ಸಮಯಕ್ಕೆ ಸರಿಯಾಗಿ ಖಮೇನಿಗೆ ಕೂಡ ಅಧಿಕಾರದ ಅದೃಷ್ಟ ಒಲಿದು ಬಂತು ಎನ್ನಬಹುದು. ಹೇಗೆಂದರೆ ಆಗ ಇರಾನ್ ದೇಶದಲ್ಲಿ ಕ್ರಾಂತಿ ನಿರ್ವಹಣೆಗೆ ಎಂದು ಹುಟ್ಟಿಕೊಂಡಿದ್ದ ಇದೇ ಇಸ್ಲಾಮಿಕ್ ರೆವಲ್ಯೂಷನರಿ ಕೌನ್ಸಿಲ್ ಸದಸ್ಯನಾಗಿ ಖಮೇನಿ ನೇಮಕ ಆಗಿದ್ದು ಗಮನ ಸೆಳೆದಿತ್ತು. ಉಪ ರಕ್ಷಣಾ ಸಚಿವ ಸ್ಥಾನವನ್ನು ಕೂಡ ನಿಭಾಯಿಸಿದ್ದ ಇದೇ ಖಮೇನಿಗೆ, ಇರಾನ್‌ನಲ್ಲಿ ಪವಿತ್ರ ಸ್ಥಾನ ಎಂದು ಗುರುತಿಸಲಾಗುವ ತೆಹ್ರಾನ್‌ನ ಶುಕ್ರವಾರದ ಪ್ರಾರ್ಥನೆ ನೇತೃತ್ವ ಕೂಡ ನೀಡಲಾಗಿತ್ತು. ಅಲ್ಲಿಂದ ಮುಂದೆ ದೊಡ್ಡ ಮಟ್ಟದಲ್ಲಿ ಖಮೇನಿ ಇರಾನ್ ದೇಶದ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದು ಅಮೆರಿಕ ಮತ್ತು ಇತರ ದೇಶಗಳ ಜೊತೆಗೆ ಇರಾನ್ ದ್ವೇಷ ಹೆಚ್ಚಾಗಲು ಕಾರಣವಾಗಿತ್ತು.
ಖಮೇನಿಗೆ ಸಿಕ್ಕಿತ್ತು ಮೊದಲ ಬಾರಿ ಅಧಿಕಾರ
ಇರಾನ್ ಹೀಗೆ 1979ರ ನಂತರ ಹೊಸ ರೂಪ ಪಡೆದು, ಹೊಸ ಗಣರಾಜ್ಯವಾಗಿ ರೂಪುಗೊಂಡ ನಂತರ ಪಾಶ್ಚಿಮಾತ್ಯ ದೇಶಗಳನ್ನು ವಿರೋಧಿಸುವ ರೀತಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿತು ಇದೇ ಇರಾನ್ ದೇಶ. ಹೀಗಿದ್ದಾಗಲೇ, 1982ರ ಸಮಯದಲ್ಲಿ ತೆಹ್ರಾನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಆಗಿನ ಅಧ್ಯಕ್ಷ ಮಹಮ್ಮದ್ ಅಲಿ ರಾಜಾಯಿ ಸಾವು ಇಡೀ ಇರಾನ್ ನಲುಗಿ ಹೋಗುವಂತೆ ಮಾಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಖಮೇನಿ ಶೇಕಡಾ 95ರಷ್ಟು ಮತ ಪಡೆದು, ಇರಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು.
ಇಂತಹ ಸಮಯದಲ್ಲೇ ಇರಾನ್‌ಗೆ 1980ರಲ್ಲಿ ಎದುರಾಗಿದ್ದ ಇರಾಕ್ ಜೊತೆಗಿನ ಯುದ್ಧ, 1988 ತನಕವೂ ಮುಂದುವರಿದಿತ್ತು. ಸದ್ದಾಂ ಹುಸೇನ್ ನೇತೃತ್ವದ ಇರಾಕ್ ಸೇನೆ ಇರಾನ್ ದೇಶಕ್ಕೆ ನುಗ್ಗಿದ ಬಳಿಕ ಭೀಕರ ಯುದ್ಧವು ಆರಂಭವಾಗಿತ್ತು. ಆಗ ಎರಡೂ ಕಡೆ ಸೇರಿ ಸುಮಾರು 10 ಲಕ್ಷ ಜನ ಜೀವ ಕಳೆದುಕೊಂಡರು ಎಂಬ ಆರೋಪ ಕೂಡ ಇದೆ. ಈ ಯುದ್ಧದ ನಂತರ ಖಮೇನಿ ಇರಾನ್ ನೆಲದಲ್ಲಿ ಮತ್ತಷ್ಟು ಪ್ರಬಲನಾಗಿ ಹಿಡಿತ ಹೊಂದಲು ಆರಂಭಿಸಿ, ಶತ್ರುಗಳನ್ನೆಲ್ಲಾ ನಾಶ ಮಾಡುವ ಕಾರ್ಯ ಆರಂಭ ಆಗಿತ್ತು. ಇರಾನ್ ಸಂಪೂರ್ಣವಾಗಿ ಖಮೇನಿ ಹಿಡಿತಕ್ಕೆ ಸಿಕ್ಕಿದ್ದೂ ಅಲ್ಲದೆ, ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳನ್ನ ಇನ್ನಷ್ಟು ದ್ವೇಷಿಸಲು ಆರಂಭಿಸಿತ್ತು.
1989ರ ನಂತರ ಖಮೇನಿ ಸಂಪೂರ್ಣವಾಗಿ ಇರಾನ್ ಸರ್ವಾಧಿಕಾರಿ ಪಟ್ಟಕ್ಕೆ ಬಂದು ಕೂತಂತೆ ಆಗಿತ್ತು. 88 ಸದಸ್ಯರ ಇಸ್ಲಾಮಿಕ್ ಧಾರ್ಮಿಕ ಪಂಡಿತರ ಸಮಿತಿ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್, ಖಮೇನಿಗೆ ದೊಡ್ಡ ಮಟ್ಟದಲ್ಲಿ ಅಧಿಕಾರ ನೀಡುವ ನಿರ್ಧಾರಕ್ಕೆ ಬಂದಿತ್ತು. ಅಲ್ಲಿಂದ ಮುಂದೆ ಇರಾನ್ ದೇಶದಲ್ಲಿ ಯಾವ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೂ ಅದು ಖಮೇನಿ ಒಪ್ಪಿಗೆ ಇಲ್ಲದೆ ಜಾರಿಗೆ ಬರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಲೂ ಅಮೆರಿಕ ಜೊತೆಗೆ ಪರಮಾಣು ಶಾಂತಿ ಒಪ್ಪಂದಕ್ಕೆ ಕೂಡ ಇದೇ ಖಮೇನಿ ಅಡ್ಡಿಯಾಗಿರುವ ಆರೋಪ ಕೂಡ ಪದೇ ಪದೇ ಕೇಳಿಬರುತ್ತಾ ಇದ್ದು, ಅಮೆರಿಕ & ಪಾಶ್ಚಿಮಾತ್ಯ ದೇಶಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮತ್ತೊಂದು ಕಡೆ ಅಮೆರಿಕ ಹಾಗೂ ಇಸ್ರೇಲ್ ಬಹಿರಂಗವಾಗಿ ಖಮೇನಿ ನಮ್ಮ ಟಾರ್ಗೆಟ್ ಎನ್ನುತ್ತಿರುವುದು ಯುದ್ಧದ ತಿಕ್ಕಾಟ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಇರಾನ್ ನೆಲದಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ
ಖಮೇನಿ ಸರ್ವಾಧಿಕಾರಿ ಆಡಳಿತ ಹಾಗೂ ಇರಾನ್ ದೇಶದಲ್ಲಿ ಎದುರಾಗಿರುವ ಸಮಸ್ಯೆಗಳು ಆಗಾಗ ಅಲ್ಲಿ ಜನರು ರೊಚ್ಚಿಗೇಳುವಂತೆ ಮಾಡುತ್ತಿದೆ. ಅದರಲ್ಲೂ ಕೊರೊನಾ ನಂತರದ ಕಾಲಘಟ್ಟದಲ್ಲಿ, 2022 ಸಮಯದಲ್ಲಿ ಹಾಗೂ 2023ರ ವೇಳೆ ಇರಾನ್ ಪ್ರಜೆಗಳು ಇದೇ ಖಮೇನಿ ವಿರುದ್ಧ ರೊಚ್ಚಿಗೆದ್ದಿದ್ದರು. ಅಲ್ಲದೆ ಖಮೇನಿ ಅಧಿಕಾರ ಬಿಟ್ಟು ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟ ಶುರು ಮಾಡಿದ್ದರು. ಹೀಗಿದ್ದರೂ ತನ್ನ ಅಧಿಕಾರ ಬಲದಿಂದ ಪ್ರತಿಭಟನೆ ಹಾಗೂ ಹೋರಾಟಗಾರರನ್ನ ನಿಯಂತ್ರಿಸಿದ್ದ ಖಮೇನಿ, ಸರ್ವಾಧಿಕಾರಿ ಪಟ್ಟ ಉಳಿಸಿಕೊಂಡಿದ್ದ. ಈಗ ನೋಡಿದರೆ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಸೇನೆಗಳು ಮುಗಿಬಿದ್ದು ಬಂದಿವೆ. ಪ್ರಮುಖವಾಗಿ ಈ ಎರಡೂ ದೇಶಗಳು, ನಮಗೆ ಖಮೇನಿ ಟಾರ್ಗೆಟ್ ಎನ್ನುತ್ತಿರುವುದು ದೊಡ್ಡ ತಿಕ್ಕಾಟದ ಮುನ್ಸೂಚನೆ ನೀಡುತ್ತಿದೆ.
ಸಂಧಾನ ನಡೆಸಲು ಸತತ ಪ್ರಯತ್ನ
ಅಮೆರಿಕ & ಇರಾನ್ ಮಧ್ಯೆ ಶಾಂತಿ ಒಪ್ಪಂದ ಮಾಡಿಸಬೇಕು ಎಂದು ಎಲ್ಲಾ ರೀತಿ ಪ್ರಯತ್ನ ಮಾಡಿದ್ದರೂ ಅದು ಪ್ರಯೋಜನಕ್ಕೆ ಬರಲೇ ಇಲ್ಲ. ಪ್ರಮುಖವಾಗಿ ಒಮಾನ್ ಈ ವಿಚಾರದಲ್ಲಿ ಇರಾನ್ ಒಪ್ಪಿಸಿ, ಅತ್ತ ಅಮೆರಿಕದ ನಾಯಕರನ್ನೂ ಒಪ್ಪಿಸಿ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿತ್ತು. ಹೀಗಿದ್ದರು ಕೂಡ ಖಮೇನಿಯ ಹಠ ಹಾಗೂ ಸರ್ವಾಧಿಕಾರಿ ಧೋರಣೆ ಶಾಂತಿ ಮಾತುಕತೆ ಸೋತು ಹೋಗಲು ಪ್ರಮುಖ ಕಾರಣ ಎಂದು ಆರೋಪ ಮಾಡಲಾಗುತ್ತಿದೆ. ಶನಿವಾರ ದಿಢೀರ್ ದಾಳಿ ಆರಂಭಿಸಿದ್ದ ಇಸ್ರೇಲ್ ಸೇನೆ ಆಘಾತ ನೀಡಿದ್ದು, ಮತ್ತೊಂದು ಕಡೆ ಅಮೆರಿಕ ಕೂಡ ದೊಡ್ಡ ಮಟ್ಟದಲ್ಲಿ ವಾಯುದಾಳಿ ಶುರು ಮಾಡಿ ಶಾಕ್ ಕೊಟ್ಟಿದೆ.
ಇಸ್ರೇಲ್ ಸೇನೆ ಸುಮಾರು 1,70,000 ಸಕ್ರಿಯ ಸೈನಿಕರನ್ನ ಹೊಂದಿದ್ದು, ಜೊತೆಗೆ 4 ಲಕ್ಷಕ್ಕೂ ಹೆಚ್ಚು ಮೀಸಲು ಪಡೆ ಕೂಡ ಇರುವುದು ಈ ಪುಟಾಣಿ ದೇಶಕ್ಕೆ ಆನೆಬಲ ತರಿಸಿದೆ. ಹೀಗೆ 600ಕ್ಕೂ ಹೆಚ್ಚು ಯುದ್ಧ ವಿಮಾನಗಳು ಅಮೆರಿಕ ಜತೆ ಸೇರಿ ಇರಾನ್ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಸಾವಿರಾರು ಕ್ಷಿಪಣಿಗಳು ಇಸ್ರೇಲ್ ಬಳಿ ಇದ್ದು, ಯಾವುದೇ ಕ್ಷಣ ಈ ಯುದ್ಧ 3ನೇ ಮಹಾ ಯುದ್ಧವಾಗಿ ಬದಲಾಗುವ ಭಯವೂ ಆವರಿಸಿದೆ ಪ್ರಪಂಚದಲ್ಲಿ. ಹಾಗೇ ನ್ಯಾಟೋ ಪಡೆಗಳು ಈ ಯುದ್ಧಕ್ಕೆ ಎಂಟ್ರಿ ಆಗುತ್ತವಾ? ಎಂಬ ಪ್ರಶ್ನೆ ಕೂಡ ಮೂಡಿದ್ದು, ಯುರೋಪ್ ಒಕ್ಕೂಟದಲ್ಲಿ ಈ ಬಗ್ಗೆ ವಿಭಿನ್ನ ನಿಲುವು ಇದೆ. ಹೀಗೆಲ್ಲಾ ಭಾರಿ ಚರ್ಚೆ ಮತ್ತು ತಿಕ್ಕಾಟದ ನಡುವೆ ಘೋರ ಯುದ್ಧ ಆರಂಭವಾಗಿದೆ ಇರಾನ್ ನೆಲದಲ್ಲಿ.
40,000 ಅಮೆರಿಕ ಸೈನಿಕರು ಸಿದ್ಧ
ಅಮೆರಿಕ ಬಳಿ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಸುಮಾರು 40,000 ಸೈನಿಕರು ಸಿದ್ಧವಾಗಿ ನಿಂತಿದ್ದಾರೆ. ಇರಾನ್ ಸಮೀಪಕ್ಕೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮತ್ತು ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಬಂದು ನಿಂತು ಹಲವು ದಿನಗಳೇ ಕಳೆದಿವೆ. ಪ್ರಪಂಚದಲ್ಲೇ ಅತ್ಯಂತ ಬಲಿಷ್ಠ ಯುದ್ಧನೌಕೆ ಎಂದು ಯುಎಸ್‌ಎಸ್ ಅಬ್ರಹಾಂ ಲಿಂಕನ್ ಹಾಗೂ ಫೋರ್ಡ್ ಹೆಸರನ್ನು ಮಾಡಿವೆ. ಹೀಗಿದ್ದಾಗಲೇ ಪ್ರಸ್ತುತ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲದಿಂದ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಡೆಸುವಷ್ಟು ಶಕ್ತಿ ಪಡೆದಿದೆ. ಇದೇ ಕಾರಣಕ್ಕೆ ಆದಷ್ಟು ಬೇಗ ಈ ತಿಕ್ಕಾಟ ಮುಗಿದು ಹೋಗಲಿ ಎಂಬ ಬೇಡಿಕೆಯು ಇಡೀ ಜಗತ್ತಿನಾದ್ಯಂತ ಕೇಳಿಬಂದಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಆದಷ್ಟು ಬೇಗ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧ ನಿಂತು ಶಾಂತಿ ನೆಲೆಸಲಿ ಎಂದು ವಿಶ್ವಸಂಸ್ಥೆ ಕೇಳಿಕೊಳ್ಳುತ್ತಿದೆ. ಆದರೆ ವಿಶ್ವಸಂಸ್ಥೆ ಮಾತಿಗೆ ಬೆಲೆ ಇಲ್ಲದಂತೆ ಆಗಿ ಹೋಗಿದ್ದು, ದಿನದಿಂದ ದಿನಕ್ಕೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಹೊಸ ಹೊಸ ಯುದ್ಧಗಳ ಸರಮಾಲೆ ಆರಂಭ ಆಗುತ್ತಿದೆ. ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಡುವ ಲಕ್ಷಣಗಳು ಗೋಚರಿಸುತ್ತಿದ್ದು, ಆತಂಕದ ವಾತಾವರಣ ಕೂಡ ನಿರ್ಮಾಣ ಆಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications