ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಲು ಇಸ್ರೇಲ್ ಮಾಡಿತ್ತು ಭಾರಿ ದೊಡ್ಡ ತಂತ್ರ | Israel Military

ಅಮೆರಿಕ ಮತ್ತು ಇಸ್ರೇಲ್ ಒಂದಾಗಿ ಇರಾನ್ ಮೇಲೆ ಮುಗಿಬಿದ್ದು, ದೊಡ್ಡ ಮಟ್ಟದಲ್ಲಿ ದಾಳಿಯನ್ನ ನಡೆಸುತ್ತಿವೆ. ಫೆಬ್ರವರಿ 28 ಶನಿವಾರ ದಿಢೀರ್ ಇಸ್ರೇಲ್ ಸೇನೆ ಇರಾನ್ ವಿರುದ್ಧ ಮುಗಿಬಿದ್ದು ಅಟ್ಯಾಕ್ ಶುರು ಮಾಡಿತ್ತು. ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿತ್ತು ಇಸ್ರೇಲ್. ಒಂದು ಕಡೆ ಅಮೆರಿಕ ತನ್ನ ಸೇನೆಯನ್ನ ಇರಾನ್ ಸಮುದ್ರದಲ್ಲಿ ನಿಯೋಜನೆ ಮಾಡಿ ಕಾಯುತ್ತಿದ್ದರೆ, ಇನ್ನೊಂದು ಕಡೆ ಇಸ್ರೇಲ್ ತನ್ನ ಕ್ಷಿಪಣಿಗಳು & ಯುದ್ಧ ವಿಮಾನ ಬಳಸಿ ದಾಳಿ ಶುರು ಮಾಡಿತ್ತು. ಈ ಸಮಯದಲ್ಲಿ ದಿಢೀರ್ ಖಮೇನಿಯ ಜೀವ ತೆಗೆದಿತ್ತು ಇಸ್ರೇಲ್‌ನ ಮಿಲಿಟರಿ. ಆದರೆ ಇದೀಗ ಈ ದಾಳಿಯ ಕುರಿತು ಸ್ಫೋಟಕ ಮಾಹಿತಿಗಳು ಹೊರ ಬಿದ್ದಿವೆ.

ಹೌದು, ಖಮೇನಿ ಮೇಲೆ ಹೇಗಾದರೂ ಮಾಡಿ ಈ ಬಾರಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಬೇಕು & ಆ ಮೂಲಕ ಇರಾನ್ ಸರ್ವಾಧಿಕಾರಿಗೆ ಈ ಬಾರಿ ಹೇಗಾದರೂ ಒಂದು ಗತಿ ಕಾಣಿಸಬೇಕು ಎಂದು ಕಳೆದ ಹಲವು ವರ್ಷಗಳಿಂದ ಪ್ಲಾನ್ ಮಾಡಿತ್ತು ಇಸ್ರೇಲ್. ಅದರಲ್ಲೂ ಇಸ್ರೇಲ್‌ ಗುಪ್ತಚರ ಸಂಸ್ಥೆ ವರ್ಷಗಟ್ಟಲೇ ಖಮೇನಿ ಇಡುತ್ತಿದ್ದ ಪ್ರತಿ ಹೆಜ್ಜೆ ಹಿಂಬಾಲಿಸುತ್ತಾ ಎಲ್ಲವನ್ನೂ ತಣ್ಣಗೆ ನೋಡುತ್ತಿತ್ತು. ಪ್ರಮುಖವಾಗಿ ಇರಾನ್‌ನ ಟ್ರಾಫಿಕ್‌ ಕ್ಯಾಮೆರಾಗಳನ್ನ ಹ್ಯಾಕ್‌ ಮಾಡಿದ್ದ ಇಸ್ರೇಲ್, ಖಮೇನಿ ಇರುವುದು ಎಲ್ಲಿ? ಖಮೇನಿ ಹೋಗುವುದು ಎಲ್ಲಿಗೆ? ಎಂಬ ಮಾಹಿತಿಗಳನ್ನು ಕಲೆ ಹಾಕಿತ್ತು. ಇನ್ನೊಂದು ಕಡೆ ಖಮೇನಿ ಭದ್ರತಾ ವಿವರ ಪಡೆಯಲು ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್ ಕೂಡ ಮಾಡಲಾಗಿತ್ತಂತೆ. ಇಷ್ಟೆಲ್ಲಾ ಮಾಹಿತಿಯ ಮೂಲಕ ಖಮೇನಿಯ ಪ್ರತಿ ಹೆಜ್ಜೆಯನ್ನೂ ಇಸ್ರೇಲ್ ಗಮನಿಸುತ್ತಾ ಇತ್ತು.

Israel Military

ಕೊನೆಗೂ ದಾಳಿ ಮಾಡಿದ ಇಸ್ರೇಲ್

ಇಸ್ರೇಲ್ ಮತ್ತು ಅಮೆರಿಕ ಸೇರಿ ಯುದ್ಧ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದುಬಿಟ್ಟವು, ಹೀಗಾಗಿಯೇ ಯುದ್ಧಕ್ಕೆ ಮೊದಲು ಇರಾನ್‌ಗೆ ಶಾಂತಿ ಮಾತುಕತೆ ಆಫರ್ ಕೂಡ ಕೊಡಲಾಗಿತ್ತು. ಸತತವಾಗಿ 3 ಸುತ್ತಿನ ಮಾತುಕತೆ ಅಮೆರಿಕ ಮತ್ತು ಇರಾನ್ ನಡುವೆ ನಡೆದಿತ್ತು. ಹೀಗಿದ್ದರೂ ಶಾಂತಿ ಮಾತುಕತೆ ಯಶಸ್ಸು ಕಾಣದ ಹಿನ್ನೆಲೆ ದಿಢಿರ್ ಯುದ್ಧ ಶುರುವಾಗಿತ್ತು. ಮೊದಲ ದಿನವೇ ತನ್ನ ಗುರಿಯನ್ನು ತಲುಪಿದ್ದ ಇದೇ ಇಸ್ರೇಲ್, ನೇರವಾಗಿ ಖಮೇನಿ ಇದ್ದ ಜಾಗಕ್ಕೆ ನುಗ್ಗಿ ದಾಳಿ ಮಾಡಿ ಜೀವ ತೆಗೆದಿತ್ತು. ಕೊನೆಗೂ ಇರಾನ್ ಸರ್ವಾಧಿಕಾರಿ ಹತ್ಯೆ ಮಾಡಿ ಇಸ್ರೇಲ್ ಮತ್ತು ಅಮೆರಿಕ ಸಂಭ್ರಮಿಸಿವೆ. ಆದರೆ ಇನ್ನೊಂದು ಕಡೆಯಲ್ಲಿ ಇದೇ ವಿಚಾರವಾಗಿ ಇರಾನ್ ಕೊತ ಕೊತ ಕುದಿಯುತ್ತಾ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+