Israel-Iran War: ಇರಾನ್ ವಿರುದ್ಧ ಭೀಕರ ದಾಳಿಗೆ ಸಜ್ಜಾದ ಇಸ್ರೇಲ್?
ಮಧ್ಯಪ್ರಾಚ್ಯ ಮತ್ತೆ ನಲುಗಿ ಹೋಗುತ್ತಿದೆ, ಈಗಿನ್ನೂ ಗಾಜಾ ಪಟ್ಟಿಯಲ್ಲಿ ಇಸ್ರೇಲ್ & ಗಾಜಾ ನಡುವೆ ಯುದ್ಧ ನಿಂತಿದೆ. ಅದಾಗಲೇ ಮತ್ತೊಂದು ಯುದ್ಧಕ್ಕೆ ಕೌಂಟ್‌ಡೌನ್ ಶುರುವಾದಂತೆ ಕಾಣುತ್ತಿದೆ. ಅಮೆರಿಕದ ಆಂತರಿಕ ವಿಚಾರ ಇದೀಗ ಬಯಲಾಗಿದ್ದು, ಇಸ್ರೇಲ್ ಸೇನೆ ಇರಾನ್ ವಿರುದ್ಧ ಯುದ್ಧ ಸಾರಲು ಸನ್ನದ್ಧವಾಗಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಹಾಗಾದರೆ ಈ ಸಮಯದಲ್ಲಿ ಮತ್ತೊಂದು ಡೆಡ್ಲಿ ವಾರ್ ಗ್ಯಾರಂಟಿ ಆಯ್ತಾ?
ಒಂದು ಕಡೆ ಜಗತ್ತಿನಾದ್ಯಂತ ಯುದ್ಧಗಳು ಕ್ಷಣಕ್ಷಣಕ್ಕೆ ಹೆಚ್ಚಾಗುತ್ತಿವೆ, ಹಾಗೇ ಮತ್ತೊಂದು ಕಡೆ ವಿನಾಶಕಾರಿ ಬಾಂಬ್ ಅಂದ್ರೆ ಅಸ್ತ್ರವನ್ನ ರೆಡಿ ಮಾಡಿಕೊಂಡಿರುವ ಮನಷ್ಯ ಇದೀಗ ಅವುಗಳನ್ನ ಬಳಸಲು ತುದಿಗಾಲಲ್ಲಿ ನಿಂತಿದ್ದಾನೆ. ಹೀಗಿದ್ದಾಗಲೇ ಇಸ್ರೇಲ್ & ಇರಾನ್ ನಡುವೆ ಘೋರವಾದ ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ, ಎಂಬ ಸ್ಫೋಟಕ ಸುದ್ದಿ ಇದೀಗ ತಲ್ಲಣ ಎಬ್ಬಿಸಿದೆ. ಹಾಗಾದರೆ ಇರಾನ್ ವಿರುದ್ಧ ದಾಳಿ ಮಾಡಲು ಇಸ್ರೇಲ್ ಮಾಡಿರುವ ಪ್ಲಾನ್ ಏನು? ಮುಂದೆ ಓದಿ.

ಇರಾನ್ ಉಡೀಸ್ ಮಾಡಲು ಸ್ಕೆಚ್?
ಮಧ್ಯಪ್ರಾಚ್ಯ ಭಾಗದಲ್ಲಿ ತನಗೆ ಇರುವ ಒಬ್ಬೊಬ್ಬರೇ ಶತ್ರುಗಳ ಕಥೆಯನ್ನು ಮುಗಿಸುತ್ತಿರುವ ಇಸ್ರೇಲ್, ಈಗಾಗಲೇ ಸಿರಿಯಾ & ಗಾಜಾ ಸೇರಿದಂತೆ ಲೆಬನಾನ್ ಮೇಲೆ ಕೂಡ ಹಿಡಿತವನ್ನು ಸಾಧಿಸಿದೆ. ಇಂತಹ ಸಮಯದಲ್ಲೇ ಇಸ್ರೇಲ್ ಮತ್ತೊಂದು ಯುದ್ಧಕ್ಕೂ ಸನ್ನದ್ಧವಾಗಿದೆ ಎಂಬ ಸ್ಫೋಟಕ ಸಂಗತಿ ಬಯಲಾಗಿದೆ. ಇರಾನ್ ಎಂಬ ನ್ಯೂಕ್ಲಿಯರ್ ಪವರ್ ದೇಶದ ವಿರುದ್ಧವೇ ಡೆಡ್ಲಿ ದಾಳಿಗೆ ಸಿದ್ಧವಾಗಿದೆಯಂತೆ ಇಸ್ರೇಲ್ ಸೇನೆ.
2025ರ ಮಧ್ಯದಲ್ಲಿ ಘೋರ ದಾಳಿ?
ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲೇ ಈ ಬಗ್ಗೆ ಚರ್ಚೆ ನಡೆದಿತ್ತಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಇದೀಗ ರಿವೀಲ್ ಆಗಿರುವ ಹೊಸ ದಾಖಲೆಗಳು ಅದನ್ನೇ ಹೇಳುತ್ತಿವೆ ಎಂದು ವರದಿಯಾಗಿದೆ. 2025ರ ಮಧ್ಯದಲ್ಲಿ ಈ ರೀತಿ ಇರಾನ್ ವಿರುದ್ಧ ಘೋರ ದಾಳಿ ಮಾಡಲು ಇಸ್ರೇಲ್ ಸ್ಕೆಚ್ ಹಾಕಿದೆಯಂತೆ. ಇಂತಹ ಸುದ್ದಿ ಹೊರಬಿದ್ದ ತಕ್ಷಣ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಯಾಕಂದ್ರೆ ಇಸ್ರೇಲ್ ಈ ರೀತಿ ನ್ಯೂಕ್ಲಿಯರ್ ಪವರ್ ಇರುವ ದೇಶದ ಮೇಲೆ ದಾಳಿ ಮಾಡಿದರೆ ಪರಿಸ್ಥಿತಿ ವ್ಯತಿರಿಕ್ತವಾಗುವ ಭಯ ಕಾಡುತ್ತಿದೆ.












Click it and Unblock the Notifications