ಚಂದಿರನ ಅದ್ಭುತ ಚಿತ್ರ ಸೆರೆಹಿಡಿದ ಇಸ್ರೇಲ್‌ನ ಪ್ರಥಮ ನೌಕೆ

ಜೆರುಸಲೆಂ, ಏಪ್ರಿಲ್ 8: ಬಾನಂಗಳದ ಚಂದಿರನ ಕಕ್ಷೆಗೆ ಪ್ರವೇಶಿಸಿರುವ ಇಸ್ರೇಲ್‌ನ ಬಾಹ್ಯಾಕಾಶ ನೌಕೆ ಬೆರೆಶೀಟ್ ಚಂದ್ರನ ಮೊದಲ ಚಿತ್ರಗಳನ್ನು ಸೆರೆಹಿಡಿದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭೂಮಿಯ ಕಕ್ಷೆಯಿಂದ ಹೊರಟು ಸುದೀರ್ಘ ಪ್ರಯಾಣ ಬೆಳೆಸಿರುವ ನೌಕೆಯು, ಚಂದ್ರನ ಇನ್ನೊಂದು ಬದಿಯ ಅತ್ಯಾಕರ್ಷಕ ಚಿತ್ರಗಳನ್ನು ಸೆರೆಹಿಡಿದು ರವಾನಿಸಿದೆ.

ಈ ನೌಕೆಯು ಏಪ್ರಿಲ್ 4ರಂದು ಚಂದ್ರನ ಕಕ್ಷೆಯೊಳಗೆ ಯಶಸ್ವಿಯಾಗಿ ಪ್ರವೇಶಿಸಿದ್ದು, ಏಪ್ರಿಲ್ 11ರಂದು ಚಂದ್ರನ ಅಂಗಳದಲ್ಲಿ ಕಾಲಿರಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ಚಂದ್ರನ ಕಕ್ಷೆಯೊಳಗೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ರವಾನಿಸಿದ ಏಳನೇ ದೇಶವಾಗಿ ಇಸ್ರೇಲ್ ಸಾಧನೆ ಮಾಡಿದೆ. ಆದರೆ, ಅಮೆರಿಕ, ಸೋವಿಯತ್ ಒಕ್ಕೂಟ ಮತ್ತು ಚೀನಾ ಮಾತ್ರ ಚಂದ್ರನ ಮೇಲ್ಮೈ ಮೇಲೆ ನೌಕೆಗಳನ್ನು ಯಶಸ್ವಿಯಾಗಿ ಇಳಿಸಿದ ಸಾಧನೆ ಮಾಡಿವೆ.

Israel lunar beresheet spcacecrafts snaps far side of the moon

ನೌಕೆ ಕಳುಹಿಸಿದ ಚಿತ್ರಗಳ ಬಗ್ಗೆ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಐಎಲ್ ಹೆಚ್ಚಿನ ವಿವರ ನೀಡಿಲ್ಲ. ಆದರೆ, ಚಂದ್ರನ ಮೇಲ್ಮೈನ ಚಿತ್ರವನ್ನು ಸುಮಾರು 292 ಮೈಲು (470 ಕಿ.ಮೀ) ತೆಗೆಯಲಾಗಿದೆ ಎಂದು ತಿಳಿಸಿದೆ.

ಈ ನೌಕೆಯನ್ನು ಫೆಬ್ರವರಿ 21ರಂದು ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್‌ನಲ್ಲಿ ಕೇಪ್ ಕ್ಯಾನವರಲ್ ಏರ್ ಫೋರ್ಸ್ ನೆಲೆಯಿಂದ ಉಡಾವಣೆ ಮಾಡಲಾಗಿತ್ತು. ಇದು ಎರಡು-ಮೂರು ದಿನ ಮಾತ್ರ ಚಂದ್ರನ ಮೇಲ್ಮೈ ಮೇಲೆ ಕೆಲಸ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+