ಬನ್ನಿ.. ಬನ್ನಿ.. ಭಾರತೀಯರೇ ಪ್ಲೀಸ್: ಭಾರತದ ಬಳಿ ಬೇಡಿಕೊಳ್ಳುತ್ತಿದೆ ಇಸ್ರೇಲ್!
ಭಾರತ ಬಲಿಷ್ಠವಾಗುತ್ತಿದ್ದು, ದಿನದಿಂದ ದಿನಕ್ಕೆ ಭಾರತೀಯರು & ಭಾರತ ಇಲ್ಲದೆ ಜಗತ್ತಿನಲ್ಲಿ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಸಂಕಷ್ಟದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಇಸ್ರೇಲ್ ದೇಶಕ್ಕೆ ಭಾರತದ ಸಹಾಯ ಬೇಕಾಗಿದೆ. ಈ ಕಾರಣಕ್ಕೆ ಈಗ ಭಾರತದ ಬಳಿ ಮತ್ತೊಮ್ಮೆ ಇಸ್ರೇಲ್ ನಾಯಕರು ಮಹತ್ವದ ಮನವಿ ಮಾಡಿದ್ದಾರೆ. ಹೀಗೆ ಇಸ್ರೇಲ್ ಮಾಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಿದೆ ಗೊತ್ತಾ?
ಗಾಜಾಪಟ್ಟಿ ಪ್ರದೇಶದ ಮೇಲೆ ಯುದ್ಧ ಸಾರಿದ ನಂತರ ಇಸ್ರೇಲ್ ಸಾಕಷ್ಟು ಸಮಸ್ಯೆ ಸುಳಿಗೆ ಸಿಲುಕಿ ನರಳಾಡುತ್ತಿದೆ. ಅದರಲ್ಲೂ ಇಸ್ರೇಲ್ ದೇಶದಲ್ಲಿ ಇದೀಗ ಕಾರ್ಮಿಕರ ಕೊರತೆ ಕೂಡ ಕಾಡುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ, ಭಾರತ ತನ್ನ ಗೆಳೆಯ & ಬ್ಯುಸಿನೆಸ್ ಪಾರ್ಟ್ನರ್ ಆಗಿರುವ ಇಸ್ರೇಲ್ ನೆರವಿಗೆ ಓಡೋಡಿ ಬಂದಿದೆ. ಈ ಹಿಂದೆ ಕೂಡ ಇದೇ ರೀತಿ ಸಹಾಯ ಮಾಡಿದ್ದ ಭಾರತ ಈಗ ಇಸ್ರೇಲ್ ದೇಶಕ್ಕೆ & ಆ ದೇಶದ ಅಭಿವೃದ್ಧಿಗೆ ಯಾವ ರೀತಿ ನೆರವು ನೀಡಲು ಮುಂದಾಗಿದೆ ಗೊತ್ತಾ? ಮುಂದೆ ಓದಿ.

10 ಸಾವಿರ ಕಟ್ಟಡ ನಿರ್ಮಾಣ...
ಮೊದಲೇ ಹೇಳಿದಂತೆ ಇಸ್ರೇಲ್ ದೇಶದಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿದೆ. ಅದರಲ್ಲೂ, ಕಟ್ಟಡ ಕಾರ್ಮಿಕರ ಕೊರತೆ ಕಾರಣ ಇಸ್ರೇಲ್ ದೇಶದ ಅಭಿವೃದ್ಧಿ ಸಾಕಷ್ಟು ಪ್ರಮಾಣದಲ್ಲಿ ಹಿಂದೆ ಉಳಿಯುತ್ತಿದೆ. ಹೀಗಿದ್ದಾಗ ಕೆಲವು ತಿಂಗಳ ಹಿಂದೆ ಭಾರತದಿಂದ ಹತ್ತಾರು ಸಾವಿರ, ಕಟ್ಟಡ ನಿರ್ಮಾಣ ಕಾರ್ಮಿಕರನ್ನ ಭಾರತ ಸರ್ಕಾರ ಇಸ್ರೇಲ್‌ಗೆ ಕಳಹಿಸಿತ್ತು. ಇದರ ಬೆನ್ನಲ್ಲೇ ಇದೀಗ ಇನ್ನೂ 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರನ್ನ ನಮಗೆ ಕಳುಹಿಸಿ. ಯಾಕಂದ್ರೆ ಈಗಿನ ಪರಿಸ್ಥಿತಿಯಲ್ಲಿ ನಮಗೆ ಮತ್ತಷ್ಟು ಕಟ್ಟಡ ನಿರ್ಮಾಣ ಕಾರ್ಮಿಕರು ಬೇಕಿದ್ದಾರೆ ಎನ್ನುತ್ತಾ ಮನವಿ ಮಾಡಿದೆ ಇಸ್ರೇಲ್.
ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭ?
ಹೀಗೆ ಇಸ್ರೇಲ್ ಮನವಿ ಹಿನ್ನೆಲೆ ಭಾರತ ಮೂಲದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಇಸ್ರೇಲ್ ದೇಶದಲ್ಲಿ ಉದ್ಯೋಗ ಪಡೆಯಲು ಅವಕಾಶ ಸಿಕ್ಕಂತೆ ಆಗಿದೆ. ಮತ್ತೊಂದ್ಕಡೆ ಈ ಸಮಯದಲ್ಲೇ, ಮತ್ತೆ ನೇಮಕ ಪ್ರಕ್ರಿಯೆ ಆರಂಭಿಸಲು ಭಾರತವು ಸಿದ್ಧತೆ ನಡೆಸಿದೆ ಎಂಬ ಮಾತು ಕೇಳಿ ಬಂದಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು ಮಾತ್ರ ಅಲ್ಲದೆ, ಈಗ ಇಸ್ರೇಲ್‌ನ ಮನೆಗಳಲ್ಲಿ ಆರೈಕೆಗಾಗಿ 5 ಸಾವಿರ ಸಿಬ್ಬಂದಿ ಅಗತ್ಯ ಇದೆ ಎಂದು ಇಸ್ರೇಲ್ ದೇಶವು ಭಾರತದ ಬಳಿ ಮನವಿ ಮಾಡಿದೆ. ಇಸ್ರೇಲ್ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ, ಅಂದ್ರೆ ಎನ್‌ಎಸ್‌ಡಿಸಿ ಈ ಕುರಿತು ಈಗ ರಾಜ್ಯಗಳಿಗೆ ಕೂಡ ಪತ್ರ ಬರೆದಿದೆಯಂತೆ.
ಮತ್ತೊಂದು ಕಡೆ ಕಳೆದ ಬಾರಿ ಇಸ್ರೇಲ್‌ಗೆ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಕಳುಹಿಸಲು, ಉತ್ತರ ಪ್ರದೇಶ, ಹರಿಯಾಣ & ತೆಲಂಗಾಣದಲ್ಲಿ ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಆದರೆ ಇದೀಗ 2ನೇ ಸುತ್ತಿನ ನೇಮಕಾತಿ ಪ್ರಕ್ರಿಯೆಗಳು ಕರ್ನಾಟಕದ ನೆರೆಯ ರಾಜ್ಯ ಅಂದ್ರೆ ಮಹಾರಾಷ್ಟ್ರದಲ್ಲಿ ನಡೆಯಲಿವೆ ಎನ್ನಲಾಗಿದೆ.











Click it and Unblock the Notifications