ನಿರಾಶ್ರಿತ ಶಿಬಿರದ ಮೇಲೆ ಮತ್ತೆ ಇಸ್ರೇಲ್ ಸೇನೆಯಿಂದ ಡೆಡ್ಲಿ ಅಟ್ಯಾಕ್?

ಹಮಾಸ್ ಉಗ್ರರ ಸರ್ವನಾಶಕ್ಕೆ ಇಸ್ರೇಲ್ ಸೇನೆ ಏನೇನೋ ಮಾಡುತ್ತಿದೆ. ಇದರ ಪರಿಣಾಮ ಪ್ಯಾಲೆಸ್ತೀನ್ ದೇಶದ ಜನರು ನಲುಗಿ ಹೋಗಿದ್ದಾರೆ. ಅದ್ರಲ್ಲೂ ಮತ್ತೆ ಮತ್ತೆ ಇಸ್ರೇಲ್ ಸೇನೆ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸುತ್ತಿರುವ ಗಂಭೀರ ಆರೋಪದ ಮಧ್ಯೆ ಮತ್ತೊಮ್ಮೆ ಇಂತಹದ್ದೇ ಆರೋಪ ಕೇಳಿಬಂದಿದೆ. ಹಾಗಾದರೆ ಇಸ್ರೇಲ್ ಸೇನೆ ಈಗ ನಡೆಸಿರುವ ಗಂಭೀರ ದಾಳಿ ಹೇಗಿತ್ತು?

ಇಸ್ರೇಲ್ ಪುಟಾಣಿ ದೇಶವಾಗಿದ್ದರೂ ಮಿಲಿಟರಿ ವಿಚಾರದಲ್ಲಿ ಯಾವುದೇ ದೊಡ್ಡ ದೇಶಕ್ಕೂ ಸವಾಲು ಎಸೆಯುವಷ್ಟು ಶಕ್ತಿಶಾಲಿಯಾಗಿದೆ ಇಸ್ರೇಲ್. ಇಸ್ರೇಲ್ ಸೇನೆಯ ಬಳಿ ಡೆಡ್ಲಿ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿಯ 75 ಯುದ್ಧ ವಿಮಾನಗಳು ಇವೆ ಅಲ್ದೆ ಡ್ರೋನ್‌ ಸೇರಿ ಒಟ್ಟಾರೆ 684 ಯುದ್ಧ ವಿಮಾನ ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಇದನ್ನು ನಿಭಾಯಿಸಲು ಲಕ್ಷಕ್ಕೂ ಹೆಚ್ಚು ಸೈನಿಕರು ಇದ್ದಾರೆ. ಈ ಮೂಲಕ ಗಾಜಾಪಟ್ಟಿ ಭಾಗದಲ್ಲಿ ಹಮಾಸ್ ಉಗ್ರರ ರಕ್ತಪಾತ ನಡೆಸುತ್ತಿದೆ ಇಸ್ರೇಲ್. 2,500 ಯುದ್ಧ ಟ್ಯಾಂಕರ್ ಮತ್ತೆ 5,000 ಶಸ್ತ್ರಾಸ್ತ್ರ ಸಾಗಿಸುವ ವಾಹನ ಬಳಿಸಿಕೊಂಡು ಇಸ್ರೇಲ್ ಅಟ್ಯಾಕ್ ನಡೆಸುತ್ತಿದೆ.

Israel Continues Attack On Hamas Tunnels In North Gaza

ನಿರಾಶ್ರಿತರ ಶಿಬಿರದ ಮೇಲೆ ಅಟ್ಯಾಕ್?

ಅಂದಹಾಗೆ ಗಾಜಾಪಟ್ಟಿ ಮೊದಲೇ ಬಡತನ & ಹಸಿವಿನಿಂದ ಬಳಲುತ್ತಿದೆ ಈ ಮಧ್ಯೆ ಹಮಾಸ್ ಉಗ್ರರ ಕಾಟ ಬೇರೆ ಕಾಡ್ತಿದೆ. ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿ ಸಾಮಾನ್ಯ ಜನರೀಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಮಾಸ್ ಉಗ್ರರ ಹೊಡೆದು ಹಾಕಲು ಇಸ್ರೇಲ್ ಮುಂದಾಗಿದ್ದರೆ ಕೈಗೆ ಸಿಗುತ್ತಿರುವುದು ಮಾತ್ರ ಸಾಮಾನ್ಯ ಜನ. ಹೀಗಿದ್ದಾಗಲೇ ಇಸ್ರೇಲ್ ಸೇನೆ ನಿರಾಶ್ರಿತರ ಶಿಬಿರಗಳ ಮೇಲೂ ದಾಳಿ ಮಾಡಿದೆ ಎನ್ನಲಾಗಿದೆ. ಈ ಶಿಬಿರಗಳಲ್ಲಿ ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

20 ಸಾವಿರಕ್ಕೂ ಹೆಚ್ಚು ಜನ ಬಲಿ?

ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿದ್ದಾಗಲೇ ಪ್ಯಾಲೆಸ್ತೀನ್ ಪರ 20,000ಕ್ಕೂ ಹೆಚ್ಚು ನಾಗರಿಕರು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇಸ್ರೇಲ್ ಕಡೆಯು ಸಾವಿನ ಸಂಖ್ಯೆ 1000 ದಾಟಿದೆ. ಹೀಗೆ ಸುಮಾರು 3 ತಿಂಗಳ ಹಿಂದೆ ಶುರುವಾಗಿದ್ದ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 20 ಸಾವಿರಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ.

Israel Continues Attack On Hamas Tunnels In North Gaza

ಕೈಮೀರಿ ಹೋಗುತ್ತಿದೆ ಪರಿಸ್ಥಿತಿ

ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ಕ್ಷಣಕ್ಷಣಕ್ಕೂ ಇದೀಗ ಭೀಕರವಾಗುತ್ತಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಇನ್ನೂ ಎಷ್ಟು ಜನ ಈ ಯುದ್ಧಕ್ಕಾಗಿ ಜೀವನವನ್ನೇ ತ್ಯಾಗ ಮಾಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ನಿಲ್ಲಿಸಲು ಜಗತ್ತಿನ ಹಲವು ದೇಶಗಳು ಯತ್ನಿಸುತ್ತಿವೆ. ಆದ್ರೆ ಇದ್ಯಾವುದೂ ಫಲ ನೀಡುತ್ತಿಲ್ಲ, ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+