Gaza War: ಗಾಜಾ ಪಟ್ಟಿಯಲ್ಲಿ ಮತ್ತೆ ಹಿಂಸಾಚಾರ, ಓಡಿ ಹೋಗುತ್ತಿರುವ ಜನ!

ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ಭೀಕರ ರಣರಂಗ ಇನ್ನೇನು ನಿಂತು ಹೊಗಿದೆ, ಎಲ್ಲವೂ ಶಾಂತವಾಗುತ್ತಿದೆ ಎನ್ನುವಾಗಲೇ ಮತ್ತೆ ಹಿಂಸಾಚಾರ ಸ್ಫೋಟಗೊಂಡಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಯುದ್ಧ ಮತ್ತೆ ಆರಂಭವಾಗಿದ್ದು, ಪ್ರಮುಖ ಪ್ರದೇಶಗಳ ಮೇಲೆ ಗುರಿ ಇಟ್ಟು ದಾಳಿ ಮಾಡುತ್ತಿದೆ ಇಸ್ರೇಲ್ ಸೇನೆ. ಇಸ್ರೇಲ್ ದಾಳಿ ಪರಿಣಾಮ ನೂರಾರು ಜನ ಜೀವ ಕಳೆದುಕೊಂಡ ಆರೋಪ ಕೇಳಿ ಬಂದಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಇಸ್ರೇಲ್ & ಗಾಜಾ ಯುದ್ಧ ತಣ್ಣಗಾಗಿತ್ತು. ಅಲ್ಲದೆ ಡೊನಾಲ್ಡ್ ಟ್ರಂಪ್ ಅವರು ಇದರ ಕ್ರೆಡಿಟ್ ಪಡೆದು ಬೀಗಿದ್ದರು. ಈ ನಡುವೆ, ಗಾಜಾ ಪಟ್ಟಿಯಲ್ಲಿ ಜನರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಪರಿಸ್ಥಿತಿ ಕೂಡ ಹಿಡಿತಕ್ಕೆ ಸಿಕ್ಕಿದ್ದು, ಇನ್ನು ನೆಮ್ಮದಿಯಾಗಿ ಜೀವನ ನಡೆಸಬಹುದು ಎಂದು ನಿರ್ಧರಿಸಿ ವಾಪಸ್ ತಮ್ಮ ತಮ್ಮ ಜಾಗಕ್ಕೆ ಬಂದಿದ್ದರು. ಆದರೆ ಇದೀಗ ಮತ್ತೆ ಹಿಂಸಾಚಾರ ಸ್ಫೋಟವಾಗಿ ಸಾಲು ಸಾಲಾಗಿ ಶವಗಳು ಬೀಳುತ್ತಿವೆ.

Israel Army Launches Targeted Ground Operations in Gaza

50ಕ್ಕೂ ಹೆಚ್ಚು ಜನ ಒಂದೇ ದಿನ ಬಲಿ?

ಇಸ್ರೇಲ್ ಇದೀಗ ಉತ್ತರ & ದಕ್ಷಿಣ ಗಾಜಾ ಪ್ರದೇಶಗಳ ಭಾರಿ ಘನಘೋರ ದಾಳಿ ಆರಂಭಿಸಿ ಆತಂಕ ಮೂಡಿಸಿದೆ. ಅದರಲ್ಲೂ ಎರಡೂ ಭಾಗದಲ್ಲಿ ಏಕಕಾಲಕ್ಕೆ ದಾಳಿ ನಡೆಯುತ್ತಿರುವ ಪರಿಣಾಮ ಒಂದೇ ದಿನ 50ಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಹಾಗೇ ಇನ್ನೊಂದು ಕಡೆ ಹಮಾಸ್ ಕೂಡ ಪ್ರತಿದಾಳಿಗೆ ನಿರ್ಧರಿಸಿದೆ ಎಂಬ ಸುದ್ದಿ ಹಬ್ಬಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ. ಇಸ್ರೇಲ್ ಸೇನೆಯಿಂದ ದಿಢೀರ್ ಈ ರೀತಿಯ ದಾಳಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಲ್ಲಾ ಪ್ರಯತ್ನ ಹಾಳಾಗಿ ಹೋಯ್ತಾ?

ಇಸ್ರೇಲ್ & ಹಮಾಸ್ ಯುದ್ಧ ನಡೆದು ಗಾಜಾ ಪಟ್ಟಿ, ಪ್ಯಾಲೆಸ್ತೀನ್ ನಾಶವಾಗಿವೆ. ಹೀಗೆ ಯುದ್ಧ ಶುರುವಾಗಲು ಕಾರಣವಾಗಿದ್ದು ಹಮಾಸ್ ಬಂಡುಕೋರರ ಕೃತ್ಯ ಎಂಬ ಆರೋಪ ಇದೆ. 2023 ಅಕ್ಟೋಬರ್ 7 ರಂದು ಇಸ್ರೇಲ್ & ಹಮಾಸ್ ನಡುವೆ ಈ ಯುದ್ಧ ಶುರುವಾಗಿತ್ತು. ಈ ಯುದ್ಧಕ್ಕೆ ಬ್ರೇಕ್ ಹಾಕಲು ಡೊನಾಲ್ಡ್ ಟ್ರಂಪ್ ಎಲ್ಲಾ ಪ್ರಯತ್ನವನ್ನು ಮಾಡಿದ್ದರೂ ಮತ್ತೆ ಈ ಯುದ್ಧ ಭುಗಿಲೆದ್ದಿದೆ. ಅಲ್ಲದೆ ಮಧ್ಯಪ್ರಾಚ್ಯ ಭಾಗದಲ್ಲಿ ತಲೆನೋವು ಶುರುವಾಗಿರುವ ಹಿನ್ನೆಲೆ ಆತಂಕ ಮನೆಮಾಡಿದೆ. ಮತ್ತೊಂದು ಕಡೆ, ಯುದ್ಧ ಇನ್ನಷ್ಟು ಜಾಗಗಳಿಗೆ ಹಬ್ಬುವ ಬಗ್ಗೆಯೂ ಭಯ ಮೂಡಿದೆ. ಗಾಜಾ ಪಟ್ಟಿಯಿಂದ ಜನರು ಮತ್ತೊಮ್ಮೆ ಓಡಿ ಹೋಗುತ್ತಿರುವ ಮಾಹಿತಿ ಇದೀಗ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+