ಡಂ.. ಡಂ.. ಡಮಾರ್... ಇಸ್ರೇಲ್ & ಇರಾನ್ ದೇಶಗಳ ಪ್ರಮುಖ ನಗರಗಳು ಉಡೀಸ್? Israel And Iran

ಇಸ್ರೇಲ್ ಸೇನೆ ಯಾವಾಗ ಇರಾನ್ ಮೇಲೆ ಭೀಕರ ದಾಳಿ ಮಾಡಲು ಶುರು ಮಾಡಿತ್ತೋ ಆಗಲೇ ನೋಡಿ ಜಗತ್ತಿಗೆ ಹೊಸ ಭಯ ಶುರುವಾಗಿದ್ದು. ಈ ಎರಡೂ ದೇಶಗಳು ಬಡಿದಾಡಲು ನಿಂತರೆ ಎಂತಹ ಸಮಸ್ಯೆ ಆಗಬಹುದು? ಅನ್ನೋ ಊಹೆ ಮೊದಲೇ ಇತ್ತು. ಅದರಲ್ಲೂ ಇರಾನ್ & ಇಸ್ರೇಲ್ ದೇಶಗಳ ಬಳಿ ಘೋರ ಘನಘೋರ ಅಸ್ತ್ರಗಳು ಇದ್ದು, ಅಕಸ್ಮಾತ್ ಈ ಅಸ್ತ್ರಗಳನ್ನ ಬಳಕೆ ಮಾಡಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ. ಹೀಗಿದ್ದಾಗಲೇ, ಡಂ.. ಡಂ.. ಡಮಾರ್... ಇಸ್ರೇಲ್ & ಇರಾನ್ ದೇಶಗಳ ಪ್ರಮುಖ ನಗರಗಳು ಉಡೀಸ್?

ಮಧ್ಯಪ್ರಾಚ್ಯ ನೆಮ್ಮದಿಯೇ ಇಲ್ಲದ ಭೂ ಭಾಗ ಆಗಿ ಹೋಗಿದ್ದು, ಅಲ್ಲಿ ದಿನಕ್ಕೊಂದು ಯುದ್ಧ ಶುರುವಾಗುತ್ತಿದೆ. ಹೀಗೆ ಭಾರಿ ದೊಡ್ಡ ಮಟ್ಟದಲ್ಲಿ ಯುದ್ಧ ಅಲ್ಲಿ ನಡೆಯುತ್ತಿರುವ ಕಾರಣಕ್ಕೆ ಜನರು ಕೂಡ ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇಡೀ ಜಗತ್ತಿನ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಮಧ್ಯಪ್ರಾಚ್ಯ ದೇಶಗಳು ಕೂಡ ಸೇರಿವೆ, ಯಾಕಂದ್ರೆ ಅಲ್ಲಿಗೆ ಹೋದರೆ ಜನರು ವಾಪಸ್ ಬರೋದೆ ಡೌಟ್ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದೇ ವೇಳೆ ಇಸ್ರೇಲ್ & ಇರಾನ್ ದೇಶಗಳ ನಡುವೆ ಘೋರ ಕದನ ಆರಂಭ ಆಗಿದ್ದು, ಜೆರುಸಲೇಂ ಸೇರಿದಂತೆ ಪ್ರಮುಖ ನಗರಗಳಲ್ಲೂ ಭಾರಿ ದೊಡ್ಡ ಸ್ಫೋಟದ ಸದ್ದು ಕೇಳಿ ಬರುತ್ತಿದೆಯಂತೆ.

Israel and Iran Exchange Fire Explosions Heard in Major Cities

ಮಧ್ಯಪ್ರಾಚ್ಯದ ಮುಂದಿನ ಪರಿಸ್ಥಿತಿ ಏನು?

ಇಸ್ರೇಲ್ & ಇರಾನ್ ನಡುವೆ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿ, ಭಯದ ವಾತಾವರಣ ಎದುರಾಗಿದೆ. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿ ಆರಂಭವಾಗಿದ್ದು, ಇಸ್ರೇಲ್ ದೇಶದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ಕೈಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಹಾಗೇ ಈ ಯುದ್ಧ ಇನ್ನಷ್ಟು ಜೋರಾದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಭಯ ಕೂಡ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+