28 ಜನರು ದಿಢೀರ್ ಸೇನಾ ದಾಳಿಗೆ ಜೀವ ಕಳೆದುಕೊಂಡರಾ?
ಮನುಷ್ಯ ನಾಗರಿಕತೆ ಹೆಸರಿನಲ್ಲಿ ಅನಾಗರಿಕ ವರ್ತನೆ ಮುಂದುವರಿಸಿದ್ದಾನೆ. ಅದ್ರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಯುದ್ಧದ ಹೆಸರಿನಲ್ಲಿ, ರಕ್ತಪಾತ ನಡೆಸುತ್ತಿದ್ದಾನೆ. ಈ ಮಾತು ಈಗ ಇಸ್ರೇಲ್ & ಪ್ಯಾಲೆಸ್ತೀನ್ ಯುದ್ಧದಲ್ಲಿ ಕೂಡ ನಿಜವಾಗುತ್ತಿದೆ. ರಷ್ಯಾ ಹಾಗೂ ಉಕ್ರೇನ್ ಕಿತ್ತಾಟದ ನಡುವೆ ಹಮಾಸ್ ಉಗ್ರರ ಮೇಲಿನ ಸೇಡಿಗೆ ಇಸ್ರೇಲ್ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿದೆ.
ಇಸ್ರೇಲ್ ಸೇನೆ ತನ್ನ ದಾಳಿಯನ್ನ ಕ್ಷಣಕ್ಷಣಕ್ಕೂ ಭೀಕರಗೊಳಿಸುತ್ತಿದೆ. 2023ರ ಅಕ್ಟೋಬರ್ 7ರಂದು ತನ್ನ ಮೇಲೆ, ಹಮಾಸ್ ಉಗ್ರರು ದಾಳಿ ಮಾಡಿದ್ದರು ಎನ್ನುವ ಕಾರಣಕ್ಕೆ ಹೀಗೆಲ್ಲಾ ಮನಸ್ಸಿಗೆ ಬಂದ ರೀತಿ ಅಟ್ಯಾಕ್ ಮಾಡುತ್ತಿದೆ ಇಸ್ರೇಲ್. ಪರಿಣಾಮ ಈಗಾಗಲೇ 25,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂಬ ಆರೋಪದ ನಡುವೆ, ಇದೀಗ ಮತ್ತೆ ಒಂದೇ ದಿನ 28 ಪ್ಯಾಲೆಸ್ತೀನ್ ನಾಗರಿಕರು ಇಸ್ರೇಲ್ ದಾಳಿಗೆ ಜೀವ ಕಳೆದುಕೊಂಡಿದ್ದಾರೆಂಬ ಆರೋಪ ಮಾಡಲಾಗಿದೆ.

ಸಾಮಾನ್ಯ ಜನರ ಸ್ಥಳಾಂತರ?
ಈಜಿಪ್ಟ್ ಗಡಿಯಲ್ಲಿ ಇರುವ ರಫಾ ನಗರದ ಮೇಲೆ ಇಸ್ರೇಲ್‌ನ ಸೇನೆ ಅಟ್ಯಾಕ್ ಮಾಡಿದೆಯಂತೆ. ಹೀಗೆ ಇಸ್ರೇಲ್ ಸೇನೆ ನಸುಕಿನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 28 ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಸುದ್ದಿ ಇದೀಗ ಮತ್ತಷ್ಟು ಆಕ್ರೋಶ ಮೊಳಗಿಸಿದೆ. ಆದ್ರೆ ಇಸ್ರೇಲ್ ಮಾತ್ರ ಹಮಾಸ್‌ಗೆ & ಹಮಾಸ್ ಉಗ್ರರಿಗೆ ಒಂದು ಗತಿ ಕಾಣಿಸದೆ ಸುಮ್ಮನೆ ಕೂರಲ್ಲ ಎಂದು ಪಣತೊಟ್ಟಿದೆ. ಹೀಗಾಗಿಯೇ ದಾಳಿ ಮಾಡುವ ಮೊದಲು ದಕ್ಷಿಣ ಗಾಜಾ ನಗರದಿಂದ ಸಾಮಾನ್ಯ ಜನರನ್ನೆಲ್ಲ ಸ್ಥಳಾಂತರ ಮಾಡಿ ಎಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚಿಸಿದ್ದಾರೆ ಎನ್ನಲಾಗಿದೆ.
90 ದಿನ ಮುಗಿಸಿದ ಯುದ್ಧ
ಹಮಾಸ್ ಉಗ್ರರು VS ಇಸ್ರೇಲ್ ಸೇನೆ ಮಧ್ಯೆ ಭೀಕರ ಯುದ್ಧ ಆರಂಭವಾಗಿ ಭರ್ಜರಿ 90 ದಿನಗಳೇ ಕಳೆದು ಹೋಗಿದೆ. ಇವತ್ತು ಯುದ್ಧ ನಿಲ್ಲುತ್ತೆ, ನಾಳೆ ಯುದ್ಧ ನಿಲ್ಲುತ್ತೆ ಅಂತಾನೆ ಅಲ್ಲಿ ಜನರು ಕಾಯ್ತಿದ್ದಾರೆ. ಇಷ್ಟಾದರೂ ಯುದ್ಧ ನಿಲ್ಲುತ್ತಿಲ್ಲ ಕೆಲ ತಿಂಗಳ ಹಿಂದಷ್ಟೇ ಈ ರಕ್ತಪಾತಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಯತ್ನ ಮಾಡಿತ್ತು. ಆದ್ರೆ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಅಡ್ಡಿ ಸಾಕಷ್ಟು ಜೋರಾಗಿದೆ. ಪರಿಸ್ಥಿತಿ ಹೀಗಿದ್ದಾಗ ಗಾಜಾಪಟ್ಟಿ ದಕ್ಷಿಣ ಭಾಗದಲ್ಲಿ ಕೂಡ ಕಾರ್ಯಾಚರಣೆ ಶುರುವಾಗಿದ್ದು, 23 ಲಕ್ಷ ಜನರು ಭಯದಲ್ಲೇ ದಿನ ದೂಡುವಂತಾಗಿದೆ.
ರಷ್ಯಾ & ಉಕ್ರೇನ್ ಯುದ್ಧವೂ ಜೋರು
ನಿನ್ನೆಯಷ್ಟೇ ರಷ್ಯಾದ ಕ್ರಾಸ್‌ನೋಡಾರ್ ಪ್ರಾಂತ್ಯದಲ್ಲಿರುವ ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಉಕ್ರೇನ್‌ನ ಭದ್ರತಾ ಸಂಸ್ಥೆ ಎಸ್‌ಬಿಯು ನಡೆಸಿದ ದಾಳಿ ಹಿನ್ನೆಲೆ, ತೈಲ ಸಂಸ್ಕರಣಾ ಘಟಕ ಇರುವ ಸ್ಥಳದಲ್ಲಿಯೇ ಬೆಂಕಿ ಹೊತ್ತಿತ್ತು. ಹೀಗೆ ತೈಲ ಸಂಸ್ಕರಣಾ ಘಟಕದ ಮೇಲೆ, ದಾಳಿ ನಡೆಸಿದ ನಂತರ ಪರಿಣಾಮ ಭೀಕರವಾಗಿತ್ತು. ಇದೇ ಕಾರಣಕ್ಕೆ ಈಗ ಉಕ್ರೇನ್ ವಿರುದ್ಧ ರಷ್ಯಾ ಸೇಡು ತೀರಿಸಿಕೊಂಡಿದೆ, ಇಂತಹ ಗಂಭೀರ ಆರೋಪ ಈಗ ಕೇಳಿಬಂದಿದೆ.

15 ಮನೆಗಳು ಸುಟ್ಟು ಭಸ್ಮ
ಇನ್ನು ಹೀಗೆ ರಷ್ಯಾ ನಡೆಸಿದ ಡ್ರೋನ್ ದಾಳಿ ಪರಿಣಾಮ, 15 ಮನೆಗಳು ಸುಟ್ಟು ಹೋಗಿವೆ ಎಂದು ಉಕ್ರೇನ್ ಆಕ್ರೋಶ ಹೊರಹಾಕಿದೆ. 50ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು ಪರಿಸ್ಥಿತಿ ಭೀಕರವಾಗಿದೆ ಎಂದು ಉಕ್ರೇನ್ ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಆಕ್ರೋಶ, ಹೊರಹಾಕಿದ್ದಾರೆ. ಹಾಗೇ ಈಶಾನ್ಯ ಹಾರ್ಕಿವ್ & ದಕ್ಷಿಣ ಪ್ರಾಂತ್ಯದ ಒಡೆಸಾ ಗುರಿಯಾಗಿಸಿಯೇ ರಷ್ಯಾ ರಾತ್ರೋರಾತ್ರಿ ಇರಾನ್ ನಿರ್ಮಿತ 31 ಶಾಹಿದ್ ಡ್ರೋನ್ ಮೂಲಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 23 ಡ್ರೋನ್ ನಾಶ ಮಾಡಿದ್ದೀವಿ ಎಂದಿದೆ ಉಕ್ರೇನ್ ವಾಯುಪಡೆ.












Click it and Unblock the Notifications