Israel Hamas War: ಗಾಜಾಪಟ್ಟಿಯಲ್ಲಿ ಶವದ ರಾಶಿ, ಎಲ್ಲೆಲ್ಲೂ ಆಕ್ರಂದನ
ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಧ್ಯೆ ಕಳೆದ ತಿಂಗಳು ಶುರುವಾಗಿದ್ದ ಭೀಕರ ಯುದ್ಧ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ಹಮಾಸ್ ಮತ್ತು ಇಸ್ರೇಲ್ ನಡುವೆ ಈ ಬಗ್ಗೆ ಮಾತುಕತೆ ಕೂಡ ಆರಂಭವಾಗಿದೆ. ಇಷ್ಟೆಲ್ಲದರ ನಡುವೆ ಗಾಜಾಪಟ್ಟಿ ಭಾಗದಲ್ಲಿ ಸಾವಿನ ಸಂಖ್ಯೆ ಮುಗಿಲು ಮುಟ್ಟಿದ್ದು, ಎಲ್ಲಿ ನೋಡಿದರೂ ಶವಗಳ ರಾಶಿ ಕಾಣುತ್ತಿದೆ.
ಹಮಾಸ್ ಉಗ್ರರು ದಿಢೀರ್ ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಕಾರಣಕ್ಕೆ ಅಕ್ಟೋಬರ್ 7 ರ ಶನಿವಾರ ಶುರುವಾಗಿದ್ದ ಯುದ್ಧ ಭೀಕರವಾಗಿದೆ. ಎರಡು ಕಡೆ ಸೇರಿ ಇಲ್ಲಿಯ ತನಕ ಸಾವಿನ ಸಂಖ್ಯೆ 15,000 ದ ಗಡಿ ದಾಟಿದೆ ಎನ್ನಲಾಗಿದೆ. ಹಾಗೇ ಈ ಪೈಕಿ, 14 ಸಾವಿರ ಗಾಜಾಪಟ್ಟಿ ನಾಗರಿಕರೇ ಜೀವ ಬಿಟ್ಟಿದ್ದಾರೆ. ಇದೀಗ ಮಾನವೀಯ ನೆರವಿನ ದೃಷ್ಟಿಯಿಂದ, 4 ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಹಿಡಿತಕ್ಕೆ ತರುವ ಎಲ್ಲ ಪ್ರಯತ್ನವು ಈ ಮೂಲಕ ಸಾಗಿದೆ. ಈ ಮಧ್ಯೆ ಸಾವಿನ ಸಂಖ್ಯೆ ಮಾತ್ರ ಭಯ ಹುಟ್ಟಿಸಿದೆ.

ಗಾಜಾಪಟ್ಟಿ ಸುತ್ತುವರಿದ ಇಸ್ರೇಲ್ ಸೇನೆ
ಈಗಿನ ಮಾಹಿತಿ ಪ್ರಕಾರ ಇಸ್ರೇಲ್ ಸೇನೆ ಗಾಜಾಪಟ್ಟಿ ನಗರದ ಭಾಗಶಃ ಜಾಗವನ್ನು ತನ್ನದೇ ವಶಕ್ಕೆ ಪಡೆದಿದ್ದು, ಹಮಾಸ್ ಉಗ್ರರ ಸುರಂಗಗಳನ್ನ ನಾಶ ಮಾಡುತ್ತಿದೆ. ಆದ್ರೆ ಈ ಮಧ್ಯೆ ಇಸ್ರೇಲ್ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆ 4 ದಿನ ಕಾಲ ಕದನ ವಿರಾಮ ಘೋಷಿಸಲಾಗಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆ ಮಾನವೀಯ ಕಾರ್ಯಾಚರಣೆಗೆ ಒತ್ತು ನೀಡಲಾಗಿದ್ದು, ಇಷ್ಟೆಲ್ಲ ಬೆಳವಣಿಗೆ ನಡುವೆ ಗಾಜಾಪಟ್ಟಿ ಸ್ಥಿತಿ ಮಾತ್ರ ಬದಲಾಗಿಲ್ಲ. ಅದ್ರಲ್ಲು ನಾಶವಾದ ಕಟ್ಟಡಗಳ ಕೆಳಗೆ ಸಾವಿರಾರು ಜನರ ಶವ ಸಿಲುಕಿವೆ ಎಂಬ ಆರೋಪವಿದ್ದು, ಗಾಜಾ ಸ್ಥಿತಿ ಭೀಕರವಾಗಿದೆ.
ಒತ್ತಡಕ್ಕೆ ಮಣಿದ ಇಸ್ರೇಲ್?
ಹಮಾಸ್ ಉಗ್ರರು ತನ್ನ ಮೇಲೆ ದಾಳಿ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಇಸ್ರೇಲ್ ಸೇನೆಯ ಕಡೆಯಿಂದ ಗಾಜಾಪಟ್ಟಿ ಮೇಲೆ ಭೀಕರ ದಾಳಿ ಆರಂಭವಾಗಿತ್ತು. ಆದ್ರೆ ಹೀಗೆಲ್ಲ ಅಟ್ಯಾಕ್ ಶುರು ಮಾಡಿ ಬರೋಬ್ಬರಿ 1 ತಿಂಗಳು ಕಳೆದು ಇನ್ನೇನು 2 ತಿಂಗಳನ್ನೂ ಮುಗಿಸುತ್ತಿದ್ದರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗಿದ್ದಾಗಲೇ ಇಸ್ರೇಲ್ ಮೇಲೆ ಬೇರೆ ಬೇರೆ ರೀತಿಯ ಒತ್ತಡ ಹಾಕಲು ಹಲವು ದೇಶಗಳು ತಮ್ಮ ಪ್ರಯತ್ನ ಮುಂದುವರಿಸಿವೆ, ಇದರ ಪರಿಣಾಮ ಎಂಬಂತೆ ಈಗ ತಾತ್ಕಾಲಿಕವಾಗಿ ಯುದ್ಧಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈಗ ಸಂಪೂರ್ಣವಾಗಿ ಯುದ್ಧ ನಿಲ್ಲುತ್ತಾ? ಅನ್ನೋ ಕುತೂಹಲ ಕೆರಳಿದೆ.

ಒಟ್ನಲ್ಲಿ ಇಸ್ರೇಲ್ & ಹಮಾಸ್ ನಡುವೆ ಆರಂಭವಾಗಿರುವ ವಾರ್ ಭೀಕರವಾಗಿದ್ದು, ಇದು ನಿಲ್ಲುವ ತನಕ ನೆಮ್ಮದಿ ಇಲ್ಲ ಎಂಬಂತಾಗಿದೆ. ಹೀಗಾಗಿ ಮುಂದೆ ಪರಿಸ್ಥಿತಿ ಏನಾಗುತ್ತೆ? ಈ ಯುದ್ಧಕ್ಕೆ ಶಾಶ್ವತ ಅಂತ್ಯ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಅದರಲ್ಲೂ ಈ ಎಲ್ಲಾ ಬೆಳವಣಿಗೆ ಮಧ್ಯೆ ಎಲ್ಲವನ್ನೂ ಕಳೆದುಕೊಂಡಿರುವ ಗಾಜಾಪಟ್ಟಿಯ ಜನರ ನೆರವಿಗೆ ಜಗತ್ತಿನ ಹಲವು ದೇಶಗಳು ಮುಂದಾಗುತ್ತಿವೆ. ಹಾಗೇ ವಿಶ್ವಸಂಸ್ಥೆ ಕೂಡ ಕಾಳಜಿ ವಹಿಸಿದ್ದು ವಿಶೇಷ.












Click it and Unblock the Notifications