ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ: ಕನಿಷ್ಠ 25 ಮಂದಿ ಸಿಖ್ಖರ ಸಾವು

ಕಾಬೂಲ್ (ಅಫ್ಗಾನಿಸ್ತಾನ), ಮಾರ್ಚ್ 25: ಅಪರಿಚಿತ ಬಂದೂಕುಧಾರಿ ಮತ್ತು ಆತ್ಮಹತ್ಯಾ ಬಾಂಬರ್ ಗಳು ಬುಧವಾರದಂದು ಕಾಬೂಲ್ ನಲ್ಲಿ ಇರುವ ಸಿಖ್ ಸಮುದಾಯದ ಧಾರ್ಮಿಕ ಸಮುಚ್ಚಯದ ಮೇಲೆ ದಾಳಿ ನಡೆಸಿ, ಹಲವರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಸಂದರ್ಭದಲ್ಲಿ ಇತರ ನಾಗರಿಕರು ಸಹ ಮೃತಪಟ್ಟಿದ್ದು, ಸಂಖ್ಯೆಯನ್ನು ಬಹಿರಂಗ ಮಾಡಿಲ್ಲ.

ಈ ಘಟನೆಯಲ್ಲಿ ಕನಿಷ್ಠ 25 ಭಕ್ತರು ಸಾವನ್ನಪ್ಪಿದ್ದಾರೆ. ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಕಾಲಮಾನ 7.45ರ ಹೊತ್ತಿಗೆ ಶೋರ್ ಬಜಾರ್ ಪ್ರದೇಶದಲ್ಲಿ ಇರುವ ಗುರುದ್ವಾರದ ಮೇಲೆ ದಾಳಿ ನಡೆದಿದೆ. ಈ ವೇಳೆ ಕಟ್ಟಡದ ಒಳಗೆ 150 ಭಕ್ತರಿದ್ದರು.

ಆರು ಗಂಟೆಗಳ ಗುಂಡಿನ ದಾಳಿ ನಂತರ ಎಲ್ಲ ನಾಲ್ವರು ಆತ್ಮಹತ್ಯಾ ಬಾಂಬರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಗಾನಿಸ್ತಾನದ ವಿಶೇಷ ಪಡೆ ತಿಳಿಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಂಬತ್ತು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

IS Terrorists Attack On Gurdwar In Kabul; At Least 25 Dead

ಅಂದ ಹಾಗೆ, ಐಎಸ್ ಐಎಸ್ ಉಗ್ರ ಸಂಘಟನೆ ಈ ಹಿಂದೆ ಕೂಡ ಸಿಖ್ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅಫ್ಗಾನಿಸ್ತಾನದಲ್ಲಿ ದಾಳಿ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+