ಮುಗೀತು ಮನುಷ್ಯರ ಕಥೆ, ಇರಾನ್ ನೆಲದಲ್ಲಿ ಪರಮಾಣು ಸೋರಿಕೆ ಶುರು? Israel And Iran

ಇಸ್ರೇಲ್ & ಇರಾನ್ ಯುದ್ಧದ ಪರಿಣಾಮ ಇಡೀ ಜಗತ್ತಿಗೆ ಇದೀಗ ಕಂಟಕ ಎದುರಾಗಿದೆ, ಯಾರೋ ಮಾಡುವ ತಪ್ಪಿಗೆ ಈಗ ಪ್ರಪಂಚವೇ ಸರ್ವನಾಶ ಆಗುವ ಹಂತಕ್ಕೆ ಬಂದು ತಲುಪಿದೆ. ಇರಾನ್ ನಮ್ಮ ಮೇಲೆ ಡ್ರೋನ್ ದಾಳಿ ಮಾಡುತ್ತಿದೆ ಅಂತಾ ಆರೋಪಿಸಿ ಇಸ್ರೇಲ್ ಪಡೆಗಳು ಅಟ್ಯಾಕ್ ಮಾಡಿದ್ದವು. ಈ ಘಟನೆ ನಂತರ ಇಡೀ ಮನುಷ್ಯ ಕುಲವೇ ನಾಶವಾಗಿ ಹೋಗುವ ಘಟನೆ ಒಂದು ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದ್ದು, ಇಂತಹ ಪರಿಸ್ಥಿತಿಯಲ್ಲೇ ಪರಮಾಣು ಸೋರಿಕೆ ಅಂದ್ರೆ ಜಗತ್ತನ್ನು ನಾಶ ಮಾಡುವ ಘಟನೆ ನಡೆದೇ ಹೋಯಿತಾ? ಅನ್ನೋ ಅನುಮಾನ ಮೂಡಿದೆ.

ಇರಾನ್ & ಇಸ್ರೇಲ್ ಯುದ್ಧ ನೋಡುತ್ತಿದ್ದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಮಾತು ಕೇಳಿ ಬರುತ್ತಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿದೆ, ಪರಮಾಣು ಸಾಮರ್ಥ್ಯ ಅಂದ್ರೆ ಅಣುಬಾಂಬ್ ಇರುವ ಇರಾನ್ ಮತ್ತು ಅಮೆರಿಕ ಬೆಂಬಲ ಇರುವ ಇಸ್ರೇಲ್ ನಡುವೆ ಘೋರ ಕದನ ಆರಂಭವಾಗಿ ದೊಡ್ಡ ಹಿಂಸಾಚಾರ ಕೂಡ ನಡೆಯುತ್ತಿದೆ. ಹೇಗಾದರೂ ಮಾಡಿ ಇರಾನ್ ದೇಶಕ್ಕೆ ಸರಿಯಾದ ಪಾಠ ಕಲಿಸಬೇಕು ಅನ್ನೋ ರೀತಿಯಲ್ಲೇ ಇಸ್ರೇಲ್ ಈಗ ದಾಳಿ ಮಾಡುತ್ತಿದೆ. ಆದರೆ ಹೀಗೆ ದಾಳಿ ಮಾಡುವ ಸಮಯದಲ್ಲೇ ಇರಾನ್ ದೇಶದ ಪರಮಾಣು ಸ್ಥಾವರಕ್ಕೆ ಕೂಡ ಭಾರಿ ದೊಡ್ಡ ಹಾನಿ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

Iran s Natanz Nuclear Site Significantly Harmed Risks of Radiation Leak

ವಿಕಿರಣ ಸೋರಿಕೆಯಿಂದ ಭೂಮಿ ಸರ್ವನಾಶ?

ಇಸ್ರೇಲ್ & ಇರಾನ್ ನಡುವೆ ಹತ್ತಿರ ಹತ್ತಿರ ಹಲವು ವರ್ಷಗಳಿಂದ ಶತ್ರುತ್ವ ಬೆಳೆದು ಬಂದಿದ್ದು, ಇಬ್ಬರೂ ಬಡಿದಾಡ್ತಿದ್ದಾರೆ. ಹೌದು, ಅಮೆರಿಕ & ಇರಾನ್ ನಡುವೆ ಸುಮಾರು ಅರ್ಧ ಶತಮಾನದಿಂದ ಫೈಟಿಂಗ್ ನಡೆಯುತ್ತಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ದೇಶಕ್ಕೆ ಇರುವ ಏಕೈಕ ದೊಡ್ಡ ಶತ್ರು ರಾಷ್ಟ್ರ ಅಂದ್ರೆ ಅದು ಇರಾನ್. ಹೀಗಾಗಿಯೇ, ಪದೇ ಪದೇ ಇರಾನ್ ಜೊತೆಗೆ ಅಮೆರಿಕ & ಸ್ನೇಹಿತರ ಬಡಿದಾಟ ನಡೆಯುತ್ತಲೇ ಇರುತ್ತದೆ. ಈಗಾಗಲೇ ಸಾವಿರಾರು ನಿರ್ಬಂಧ ಹೇರಿ ಇರಾನ್ ದೇಶ ವಿಲವಿಲ ಎನ್ನುವಂತೆ ಮಾಡಿರುವ ಅಮೆರಿಕ ಇದೀಗ ಮತ್ತೊಂದು ಶಾಕ್ ಕೊಟ್ಟಿದೆ. ಇಸ್ರೇಲ್ & ಇರಾನ್ ಈಗ ಭರ್ಜರಿಯಾಗಿ ಬಡಿದಾಡುವಾಗ ಪರಮಾಣು ಸೋರಿಕೆ ಆತಂಕ ಕೂಡ ಎದುರಾಗಿದೆ. ಇರಾನ್ ದೇಶದ ಪರಮಾಣು ಸ್ಥಾವರ ಮೇಲೆ ಇಸ್ರೇಲ್ ದಾಳಿ ಮಾಡಿದೆ & ಇದರಿಂದ ವಿಕಿರಣ ಸೋರಿಕೆ ಶುರುವಾಗಿದೆ ಎಂಬ ಆರೋಪ ಕೂಡ ಈಗ ಕೇಳಿ ಬಂದಿದೆ.

ಮಧ್ಯಪ್ರಾಚ್ಯದ ಮುಂದಿನ ಪರಿಸ್ಥಿತಿ ಏನು?

ಇಸ್ರೇಲ್ & ಇರಾನ್ ನಡುವೆ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿ, ಭಯದ ವಾತಾವರಣ ಎದುರಾಗಿದೆ. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿ ಆರಂಭವಾಗಿದ್ದು, ಇಸ್ರೇಲ್ ದೇಶದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ಕೈಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಹಾಗೇ ಈ ಯುದ್ಧ ಇನ್ನಷ್ಟು ಜೋರಾದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಭಯ ಕೂಡ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+