• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಎಸ್- ಇರಾನ್ ಡೀಲ್, ಭಾರತಕ್ಕೆ ಸಿಕ್ಕಿದ್ದು ಸೊನ್ನೆ

By Mahesh
|

ಟೆಲ್ ಅವೀವ್, ನ.25: ಅಮೆರಿಕ ಸೇರಿದಂತೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜರ್ಮನಿ(ಪಿ5+1) ಇರಾನ್ ನೊಂದಿಗೆ ಮಾಡಿಕೊಂಡಿರುವ ಪರಮಾಣು ಒಪ್ಪಂದವನ್ನು ಭಾರತ ಸ್ವಾಗತಿಸಿದೆ. ಇರಾನ್ ಮೇಲಿನ ನಿರ್ಬಂಧವನ್ನು ಅಮೆರಿಕ ಸಡಿಲಗೊಳಿಸಿದೆ. ಆದರೆ, ಭಾರತ ತೈಲ ಆಮದು ನಿರ್ಬಂಧ ಹಾಗೆ ಮುಂದುವರೆದಿದೆ. ಹೀಗಾಗಿ ಭಾರತದ ಪೆಟ್ರೋಲ್, ಡೀಸೆಲ್ ಅಭಾವ ಸಮಸ್ಯೆಗೆ ಪರಿಹಾರ ಸದ್ಯಕ್ಕಂತೂ ಸಿಗುವ ಸೂಚನೆ ಇಲ್ಲ.

ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳು ಹಾಗೂ ಜರ್ಮನಿಯ ಇರಾನ್ ನೊಂದಿಗೆ ಐತಿಹಾಸಿಕ ಪರಮಾಣು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರೂ, ಇರಾನ್ ನಿಂದ ಭಾರತದ ತೈಲ ಆಮದಿನ ಮೇಲೆ ವಿಧಿಸಲಾಗಿರುವ ನಿರ್ಬಂಧಗಳು ಮೊದಲಿನಂತೆಯೇ ಮುಂದುವರಿಯಲಿದೆ.

ಇದರಿಂದ ಭಾರತದಂಥ ಹಲವು ರಾಷ್ಟ್ರಗಳಿಗೆ ಈ ಒಪ್ಪಂದದಿಂದ ತೈಲ ಆಮದಿಗೆ ಸಂಬಂಧಿಸಿದಂತೆ ಯಾವುದೇ ಸಮಾಧಾನ ಸಿಕ್ಕಿಲ್ಲ ಎನ್ನಬಹುದು. ಕಳೆದ ಮಾರ್ಚ್ 31 ಅಂತ್ಯಕ್ಕೆ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ ಭಾರತವು ಇರಾನ್ ನಿಂದ ಶೇಕಡ 26.5ರಷ್ಟು ತೈಲ ಆಮದನ್ನು ಕಡಿತಗೊಳಿಸಿತ್ತು. ಯುಎಸ್ ಹಾಗೂ ಯುರೋಪಿನ ರಾಷ್ಟ್ರಗಳ ಜತೆ ಇರಾನ್ ಒಡಂಬಡಿಕೆಯಿಂದಾಗಿ ಪರ್ಷಿಯನ್ ಗಲ್ಫ್ ರಾಷ್ಟ್ರದಿಂದ ಭಾರತದೆಡೆಗೆ ತೈಲ ಆಮದು ಕಷ್ಟವಾಗಿತ್ತು.

2012-13 ಅರ್ಥಿಕ ವರ್ಷದಲ್ಲಿ ಭಾರತ ಒಟ್ಟಾರೆ 13.3 ಮಿಲಿಯನ್ ಟನ್ ಗಳಷ್ಟು ಕಚ್ಚಾತೈಲವನ್ನು ಇರಾನ್ ನಿಂದ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 18.1 ಮಿಲಿಯನ್ ಟನ್ ಕಚ್ಚಾ ತೈಲ ಪಡೆಯಲಾಗಿತ್ತು. ಆಮದು ನಿರ್ಬಂಧ ಹೇರಿರುವುದರಿಂದ ಇರಾನ್ ಗೆ ಪ್ರತಿ ತಿಂಗಳಿಗೆ ಸುಮಾರು 5 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ. ಭಾರತಕ್ಕೆ ಕಚ್ಚಾ ತೈಲ ಒದಗಿಸುವ ಎರಡನೇ ಅತಿದೊಡ್ಡ ರಾಷ್ಟ್ರವೆನಿಸಿದ್ದ ಇರಾನ್ ಈಗ ಐದನೇ ಸ್ಥಾನಕ್ಕೆ ಕುಸಿದಿದೆ.

ಏನಿದು ಪರಮಾಣು ಒಪ್ಪಂದ?: ಒಪ್ಪಂದದ ಪ್ರಕಾರ ತನ್ನ ವಿರುದ್ಧದ ನಿರ್ಬಂಧಗಳಿಗೆ ಪರಿಹಾರವಾಗಿ 7 ಶತಕೋಟಿ ಅಮೆರಿಕನ್ ಡಾಲರ್ ಪಡೆದು ಇರಾನ್ ತನ್ನ ವಿವಾದಿತ ಪರಮಾಣು ಕಾರ್ಯಕ್ರಮಗಳ ವೇಗವನ್ನು ಕುಂಠಿತಗೊಳಿಸಲಿದೆ. ಇಸ್ರೇಲ್ ನ ತೀವ್ರ ವಿರೋಧದ ನಡುವೆಯೇ ಈ ಒಪ್ಪಂದ ಏರ್ಪಟ್ಟಿದೆ.

ಒಪ್ಪಂದದನ್ವಯ ತಪಾಸಣಾಧಿಕಾರಿಗಳಿಗೆ ಇರಾನ್‌ನ ಪರಮಾಣುಸ್ಥಾವರಗಳಿಗೆ ಭೇಟಿ ನೀಡಲು ಅವಕಾಶ ಒದಗಿಸಲು ಹಾಗೂ ಯುರೇನಿಯಂ ಸಂವರ್ಧನೆಯ ಚಟುವಟಿಕೆಗಳನ್ನು ಸೀಮಿತವಾಗಿ ಸ್ಥಗಿತಗೊಳಿಸಲು ಇರಾನ್ ಸಮ್ಮತಿಸಿದೆ. ಆದಾಗ್ಯೂ, ಈಗಲೂ ತನಗೆ ನಾಗರಿಕ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಹೊಂದುವ ಅಧಿಕಾರವಿದೆ ಎಂದು ಹೇಳಿಕೊಂಡಿದೆ.

ಒಪ್ಪಂದದ ಷರತ್ತುಗಳ ಪ್ರಕಾರ ತನ್ನ ಶೇಕಡ 20ರ ಶುದ್ಧತೆಯ ಯುರೇನಿಯಂ ಸಂವರ್ಧನೆಯನ್ನು ಇರಾನ್ ಸ್ಥಗಿತಗೊಳಿಸಲಿದೆ. ಈಗಾಗಲೇ ಇರುವ ಈ ಪದಾರ್ಥಗಳ ಸಂಗ್ರಹವನ್ನು ನಿಸ್ಸಾರಗೊಳಿಸುವ ಅಥವಾ ಆಕ್ಸೈಡ್ ಆಗಿ ಪರಿವರ್ತಿಸುವ ಮೂಲಕ ಮತ್ತೆ ಅವುಗಳು ಮೂಲ ಸಾಮರ್ಥ್ಯವನ್ನು ಪಡೆದುಕೊಳ್ಳಲಾರವು ಎಂದು ಭಾವಿಸಲಾಗಿದೆ. ಒಪ್ಪಂದದನ್ವಯ ಇನ್ನು ಮುಂದಿನ ಆರು ತಿಂಗಳ ಅವಧಿಗೆ ಇರಾನ್ ವಿರುದ್ಧ ಪರಮಾಣು ಸಂಬಂಧ ಯಾವುದೇ ನಿರ್ಬಂಧಗಳನ್ನು ವಿಧಿಸುವಂತಿಲ್ಲ.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Countries like India would have to continue reducing oil imports from Iran despite a deal with the world powers over its controversial nuclear programme, according to a US fact sheet which also said Tehran would get a relief of $7 billion under the agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more