Iran War Update: ಹತ್ಯೆಯಾದ ಖಮೇನಿ ಸ್ಥಾನಕ್ಕೆ ನೇಮಕಗೊಂಡ ಅಯತೊಲ್ಲಾ ಅಲಿರೆಜಾ ಅರಾಫಿ, ಯಾರಿವರು?
Ayatollah Alireza Arafi: ಇರಾನ್ ದೇಶದ ಟೆಹರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಯನ್ನು ಹತ್ಯೆ ಮಾಡಲಾಯಿತು. ಅಲ್ಲದೇ ಇರಾನ್ ದೇಶದ ರಕ್ಷಣಾ ಸಚಿವರು, ಕಮಾಂಡರ್ ರನ್ನು ಹತ್ಯೆ ಮಾಡಲಾಗಿದೆ. ಯುದ್ಧದ ವೇಳೆ ಸರ್ವೋಚ್ಚ ನಾಯಕನ ಸಾವಿನಿಂದ ಕುಗ್ಗದ ಇರಾನ್ ಅವರ ಜಾಗಕ್ಕೆ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (Ayatollah Alireza Arafi) ಇರಾನ್‌ನ ಮಧ್ಯಂತರ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಹೊಸ ಸರ್ವೋಚ್ಚ ನಾಯಕರಾದ ಈ ಅರಾಫಿ ಯಾರಿವರು? ಅವರ ಒಂದಿಷ್ಟು ಮಾಹಿತಿ ಇಲ್ಲಿದೆ.
ಇರಾನ್ ನಲ್ಲಿನ ಈ ಬೆಳವಣಿಗೆಯಿಂದ ಅಯತೊಲ್ಲಾ ಅಲಿರೆಜಾ ಅರಾಫಿ ಅವರ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಂತಾಗಿದೆ. ಅರಾಫಿಯವರು ಕೈಗೊಳ್ಳುವ ನಿರ್ಧಾರವು ಇರಾನ್‌ನ ಅಧಿಕಾರವು ದೇಶವು ದಾಳಿಯನ್ನು ತಡೆಯುವಲ್ಲಿ ಅಥವಾ ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಇರಾನ್‌ನ ಸಂವಿಧಾನದ ಅಡಿಯಲ್ಲಿ ಅರಾಫಿ ಅವರು ತಾತ್ಕಾಲಿಕವಾಗಿ ಸರ್ವೋಚ್ಚ ನಾಯಕನ ಕರ್ತವ್ಯಗಳನ್ನು ವಹಿಸಿಕೊಂಡಿದ್ದಾರೆ. ಮಧ್ಯಂತರ ನಾಯಕತ್ವ ಮಂಡಳಿಯ ನ್ಯಾಯಶಾಸ್ತ್ರಜ್ಞ ಸದಸ್ಯರು ಆಗಿರುವ ಅವರು, ಇರಾನ್‌ನ ಸ್ಥಾಪಿತ ಕಾರ್ಯವಿಧಾನದ ಮೂಲಕ ಔಪಚಾರಿಕ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಈ ಮಂಡಳಿಯ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಈ ಹಿಂದೆ ಇರಾನ್‌ನ ಧಾರ್ಮಿಕ ಸೆಮಿನರಿಗಳ ಮುಖ್ಯಸ್ಥರಾಗಿದ್ದರು. ಕೋಮ್‌ನಲ್ಲಿ ಪ್ರಾರ್ಥನಾ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಅವರಿಗೆ 'ಅಧ್ಯಕ್ಷರು ಮತ್ತು ಮುಖ್ಯ ನ್ಯಾಯಾಧೀಶರೊಂದಿಗೆ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವಂತೆ ಎಕ್ಸ್‌ಪೆಡಿಯೆನ್ಸಿ ಡಿಸರ್ನ್‌ಮೆಂಟ್ ಕೌನ್ಸಿಲ್ ಸೂಚಿಸಿ ಆ ಸ್ಥಾನಕ್ಕೆ ನೇಮಕ ಮಾಡಿದೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ 86 ವರ್ಷದ ನಾಯಕ ಖಮೇನಿ ಮೃತಪಟ್ಟರು. 1989 ರಿಂದ ಇರಾನ್ ಅನ್ನು ಮುನ್ನಡೆಸುತ್ತಿದ್ದ ಖಮೇನಿ ಸಾವಿನಿಂದ ಇರಾನ್ ಮತ್ತಷ್ಟು ಕೋಪಗೊಂಡಂತಿದೆ. ಇತ್ತ ಜಂಟಿ ವೈಮಾನಿಕ ದಾಳಿಯು ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸರ್ಜಾದೆ ಮತ್ತು ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೋರ್ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಮಿಲಿಟರಿ ನೆಲೆಗಳು ಮುಂದುವರಿದಿದೆ. ತಮ್ಮ ನಾಯಕ ಸೇರಿ ಸಹಿತ ಕಳೆದುಕೊಂಡರು ಕುಗ್ಗದ ಇರಾನ್ ಪ್ರತಿದಾಳಿಯನ್ನು ನಡೆಸಿದೆ.
ಯುದ್ಧ ಬೆನ್ನಲ್ಲೆ ಇರಾನ್ ನಾಯಕತ್ವದಲ್ಲಿ ಪರಿವರ್ತನೆ
ರಚನೆಯಾಗಿರುವ ತಾತ್ಕಾಲಿಕ ಮಂಡಳಿಯು ಪ್ರಸ್ತುದಲ್ಲಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಮುಖ್ಯ ನ್ಯಾಯಮೂರ್ತಿ ಘೋಲಮ್-ಹೊಸೇನ್ ಮೊಹ್ಸೇನಿ-ಎಜೆಯಿ ಮತ್ತು ಗಾರ್ಡಿಯನ್ ಕೌನ್ಸಿಲ್‌ನ ಧರ್ಮಗುರುವನ್ನು ಒಳಗೊಂಡಿದೆ. ಖಮೇನಿಯವರ ಮರಣದ ನಂತರದ ಪರಿವರ್ತನೆಯ ಅವಧಿಯಲ್ಲಿ ಈ ಮೂವರು ವ್ಯಕ್ತಿಗಳು ಒಟ್ಟಾಗಿ ರಾಜ್ಯ ವ್ಯವಹಾರಗಳಿಗೆ ದಿಕ್ಕು ತೋರಿಸಲಿದ್ದಾರೆ.
ಖಮೇನಿ ಹತ್ಯೆ ಬಗ್ಗೆ ಅಮರಿಕಾ ಹೇಳಿದ್ದೇನು?
ಸಾಮಾಜಿಕ ಜಾಲತಾನ ಎಕ್ಸ್ ಖಾತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದಾಳಿಯ ನಂತರ ಖಮೇನಿಯವರ ಮರಣವನ್ನು ಸಾರ್ವಜನಿಕವಾಗಿ ಘೋಷಿಸಿದರು. "ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾದರು' ಎಂದು ಅವರು ಶಿರ್ಷಿಕೆ ಬರೆದುಕೊಂಡು, ಖಮೇನಿ ಸಾವನ್ನು ಅಧಿಕೃತವಾಗಿ ಬಹಿರಂಗಗೊಳಿಸಿದರು.
ಅಷ್ಟೇ ಅಲ್ಲದೇ ಖಮೇನಿ ಸಾವು ಇರಾನ್‌ನ ಜನರಿಗೆ ಮಾತ್ರವಲ್ಲ, ಎಲ್ಲಾ ಮಹಾನ್ ಅಮೆರಿಕನ್ನರಿಗೆ ಮತ್ತು ಖಮೇನಿಯಂತಹ ರಕ್ತಪಿಪಾಸು ವ್ಯಕ್ತಿಗಳಿಂದ ಹತ್ಯೆಗೀಡಾದ ಇಲ್ಲವೇ ಅಂಗವಿಕಲಗೊಳಿಸದಾದ ವಿಶ್ವದ ಅನೇಕ ದೇಶದ ಜನರಿಗೆ ನ್ಯಾಯ ನೀಡಿದಂತಾಗಿದೆ. ಖಮೇನಿಯಿಂದ ತೊಂದರೆ ಅನುಭವಿಸದ ಎಲ್ಲ ಜನರಿಗೆ ಖಮೇನಿ ಸಾವು ನ್ಯಾಯವಾಗಿದೆ ಎಂದು ಅಮೆರಿಕಾ ತಿಳಿಸಿದೆ. ಆರಂಭದಲ್ಲಿ ಟ್ರಂಪ್ ಹೇಳಿಕೆ ಇರಾನ್ ತಿರಸ್ಕರಿಸಿತ್ತು. ಭಾನುವಾರ ಬೆಳಗ್ಗೆ ಖಮೇನಿ ಸಾವನ್ನು ಒಪ್ಪಿಗೆ ಮಾಹಿತಿಯನ್ನು ಜಗತ್ತಿಗೆ ನೀಡಿತು. ಈ ಬೆಳವಣಿಗೆಯು ಇರಾನ್ ಆಡಳಿತ, ನಾಯಕತ್ವ ಬದಲಾವಣೆಗೆ ಕಾರಣವಾಗಿದೆ.












Click it and Unblock the Notifications