ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಖಮೇನಿ ಕೊಲೆಯಾಗಿದೆ; ಅಮೆರಿಕಾ - ಇಸ್ರೇಲ್ ಗುರಿ ಸಾಧಿಸಿದೆ: ಗೋಪಾಲಕೃಷ್ಣ ಕುಂಟಿನಿ ಬರಹ

Iran Supreme Leader Khamenei: ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಖಮೇನಿ ಕೊಲೆಯಾಗಿದೆ; ಅಮೆರಿಕಾ - ಇಸ್ರೇಲ್ ಗುರಿ ಸಾಧಿಸಿದೆ: ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ. ಯುದ್ಧ ದಿನ 1ರಂದೇ ಅಮೆರಿಕಾ ಮತ್ತು ಇಸ್ರೇಲ್ ಗುರಿ ಸಾಧಿಸಿದೆ. ಅಯಾತೊಲ್ಲ ಅಲಿ ಹೊಸೈನಿ ಖಮೇನಿಯನ್ನು ಕೊಂದಿದ್ದು ಅಮೆರಿಕಾ ಅಲ್ಲ, ಇಸ್ರೇಲ್. ಎಲ್ಲ ಅನಿಷ್ಟಕ್ಕೂ ಈತನೇ ಕಾರಣ, ಈ ಅಯಾತೊಲ್ಲ ಖಮೇನಿಯನ್ನು ಕೊಂದರಷ್ಟೇ ಜಗತ್ತಿನಲ್ಲಿ ಶಾಂತಿ ಮೂಡುತ್ತದೆ ಎಂದು ಅಮೆರಿಕಾ ಮಿತ್ರಪಡೆಗಳು ಬಹಳ ಹಿಂದಿನಿಂದಲೇ ಹೇಳುತ್ತಿದ್ದವು.

ಖಮೇನಿ ಎಂಬುದು ಪಟ್ಟದ ಹೆಸರು. ಹಿಂದಿನ ಖಮೇನಿಯ ಆಡಳಿತದಲ್ಲಿ ಇರಾಕ್ - ಇರಾನ್ ಯುದ್ಧ ನಡೆಯುತ್ತಿದ್ದಾಗ ಖಮೇನಿ ಇರಾನ್ ಅಧ್ಯಕ್ಷನಾಗಿದ್ದ. 1989ರಲ್ಲಿ ಹಳೆಯ ಖಮೇನಿ ಸತ್ತ ಬಳಿಕ ಈತ ಪಟ್ಟಕ್ಕೆ ಬಂದಿದ್ದ. 87 ವರ್ಷದ ಅಲಿ ಖಮೇನಿ 45 ವರ್ಷ ಕಾಲ ಇರಾನ್ ದೇಶವನ್ನು ಆಳಿದ್ದ. ಇರಾನ್ ಶಾಸಕಾಂಗದಲ್ಲಿ, ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ ಎಲ್ಲೆಲ್ಲೂ ಖಮೇನಿ ಹೇಳಿದ್ದೇ ಅಂತಿಮ. ಆತನ ಮಾತಿಗೆ ಸಮಸ್ತ ಇರಾನ್ ತಲೆಬಾಗತಕ್ಕದ್ದು.

Iran s Supreme Leader Ali Khamenei Assassinated Did the U S Israel Alliance Achieve Its Goal

1979 ರಿಂದಲೂ ನಡೆದುಕೊಂಡು ಬಂದ ಪದ್ಧತಿ ಇದು. ಒಬ್ಬ ಖಮೇನಿ ಸತ್ತರೆ ಎಲ್ಲವೂ ಮುಗಿಯುವುದಿಲ್ಲ. ಖಮೇನಿ ಪಟ್ಟಕ್ಕೆ ನಾಲ್ವರು ಸರದಿ ಸಾಲಲ್ಲಿ ನಿಂತಿದ್ದಾರೆ. ಒಬ್ಬ ಖಮೇನಿ ಹೋದರೆ ಮತ್ತೊಬ್ಬ ಬರುತ್ತಾನೆ. ಮತ್ತೊಬ್ಬ ಖಮೇನಿ ಬಾರದಂತೆ ತಡೆಯಲಾಗುತ್ತದೆಯೇ. ಈಗ ಯುದ್ಧವು ಇರಾನ್‌ ನಿಲುವನ್ನು ಕಠಿಣಗೊಳಿಸುವ ಅಥವಾ ಆಡಳಿತದ ಪತನಕ್ಕೆ ತಿರುಗುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕಾಕ್ಕೆ ಆಶ್ರಯ ನೀಡುವ ಯಾರನ್ನೂ ಬಿಡಲಾರೆ ಎಂದು ಕೆಲವು ದಿನಗಳ ಹಿಂದೆ ಇರಾನ್ ಹೇಳಿತ್ತು. ಹೀಗಾಗಿ ಇಸ್ರೇಲ್ ಮಾತ್ರವಲ್ಲ,ದೋಹ,ಅಬುದಾಭಿ, ರಿಯಾದ್ ಗಳ ಮೇಲೂ ಇರಾನ್ ಕ್ಷಿಪಣಿ ದಾಳಿ ಮಾಡುತ್ತಿದೆ. ಅಮೆರಿಕಾದ ಸೇನಾನೆಲೆಗಳಾದ ಕತಾರ್‌ನ ಅಲ್ ಉದೈದ್ ಏರ್ ಬೇಸ್, ಕುವೈತ್‌ನ ಅಲ್ ಸಲ್ಮಿಯಾ, ಯುಎಇ ಯಲ್ಲಿರುವ ಅಲ್-ಝಫ್ರಾ ಏರ್ ಬೇಸ್, ಬಹ್ರೈನ್‌ನ 5 ನೇ ನೌಕಾನೆಲೆ, ಜೋರ್ಡಾನ್‌ನ ಕಿಂಗ್ ಹುಸೈನ್ ಏರ್ ಬೇಸ್ ಮೇಲೆ ನಿರಂತರ ಕ್ಷಿಪಣಿದಾಳಿಯಾಗುತ್ತಿದೆ.

Our response to the escalation is further escalation ಎಂದು ಪದೇ ಪದೇ ಹೇಳುತ್ತಿದ್ದ ಇರಾನ್ ಎಸೆಯುತ್ತಿರುವುದು ಬ್ಯಾಲೆಸ್ಟಿಕ್ ಮಿಸೈಲ್ ಗಳನ್ನು. ಅವುಗಳಿಗೆ ನಿರ್ದಿಷ್ಟ ಗುರಿ ಇಲ್ಲ. ಒಮ್ಮೆ ಎಸೆದರೆ ಎಲ್ಲಿ ಬೇಕಾದರೂ ಅದು ಹೋಗಿ ಬೀಳಬಹುದು. ಒಂದೊಂದು ಮಿಸೈಲ್ ಕೂಡಾ ಎಷ್ಟಾದರೂ ಹಾನಿ ಮಾಡಬಹುದು.

ಈ ಬಾರಿಯ ನಮ್ಮ ದಾಳಿ ಕಳೆದ ಜೂನ್ ಮಾದರಿಯದ್ದಲ್ಲ. ಈ ಬಾರಿಯದ್ದು "more significant" , ನಮ್ಮ ಗುರಿ ಅಯಾತೊಲ್ಲ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಎಂದು ಇಸ್ರೇಲ್ ಹೇಳಿದೆ. ಕೆಲವು ದಿನಗಳ ಹಿಂದೆ ಟ್ರಂಪ್ ಕೂಡಾ ಇದನ್ನೇ ಹೇಳಿದ್ದು ನೆನಪಿಸಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+