ಡೊನಾಲ್ಡ್ ಟ್ರಂಪ್ ಆಫರ್ ತಿರಸ್ಕರಿಸಿದ ಇರಾನ್, ಮುಂದೇನು ಕಥೆ?
ಇರಾನ್ & ಅಮೆರಿಕ ನಡುವೆ ಸುಮಾರು ಅರ್ಧ ಶತಮಾನದಿಂದ ತಿಕ್ಕಾಟ ನಡೆಯುತ್ತಲೇ ಇದೆ. ಎರಡೂ ದೇಶಗಳು ಆಜನ್ಮ ವೈರಿಗಳಂತೆ ಆಗಿದ್ದು, ಪದೇ ಪದೇ ಬಡಿದಾಡುತ್ತವೆ. ಇಷ್ಟೆಲ್ಲಾ ಕಿರಿಕ್ ಮಾಡಿಕೊಂಡು, ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭಯವನ್ನೂ ಇರಾನ್ & ಅಮೆರಿಕ ನಾಯಕರು ಹುಟ್ಟುಹಾಕಿದ್ದಾರೆ. ಯಾಕೆ ಅಂದ್ರೆ ಇರಾನ್ ಬಳಿಯೂ ನ್ಯೂಕ್ಲಿಯರ್ ವೆಪನ್ಸ್ ಇದ್ದು, ಅಮೆರಿಕ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಸಾಕಷ್ಟು ಮುಂದೆ ಇದೆ. ಈ ಎಲ್ಲಾ ಕಾರಣಕ್ಕೆ ಇರಾನ್ & ಅಮೆರಿಕ ನಡುವೆ ಶಾಂತಿ ಮಾತುಕತೆ ನಡೆಯಬೇಕು ಎನ್ನುವ ಒತ್ತಡ ಕೇಳಿ ಬರುತ್ತಿತ್ತು.
ಇರಾನ್ ದೇಶದಲ್ಲಿ ಈಗಾಗಲೇ ನ್ಯೂಕ್ಲಿಯರ್ ವೆಪನ್ಸ್ ಮತ್ತು ಪರಮಾಣು ಶಕ್ತಿ ವಿಚಾರದಲ್ಲಿ ಸಾಕಷ್ಟು ಸಂಶೋಧನೆ ಮಾಡುತ್ತಿದೆ. ಹೀಗೆ ಇರಾನ್ ನೋಡ ನೋಡುತ್ತಲೇ ಇಡೀ ಜಗತ್ತಿನ ಶಕ್ತಿಶಾಲಿ ಪರಮಾಣು ರಾಷ್ಟ್ರವಾಗುವ ಕನಸು ಕಾಣುತ್ತಿದೆ. ಆದರೆ ಇರಾನ್ ಶತ್ರುಗಳಿಗೆ ಇದು ಸಾಕಷ್ಟು ಭಯ ಹುಟ್ಟಿಸಿದೆ. ಅಮೆರಿಕ ಮಾತ್ರವಲ್ಲದೆ ಇಸ್ರೇಲ್ ಕೂಡ ಇರಾನ್‌ಗೆ ದೊಡ್ಡ ಶತ್ರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಯಲ್ಲಿ ಸಂಧಾನ ಮಾತುಕತೆಗೆ ಮುಂದಾಗಿದ್ದರು.

ನೇರ ಮಾತುಕತೆಗೆ ಒಪ್ಪದ ಇರಾನ್!
ಹೌದು, ಇರಾನ್ ಅಧ್ಯಕ್ಷರು ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಆಫರ್ ತಿರಸ್ಕಾರ ಮಾಡಿದ್ದಾರೆ. ಅಲ್ಲದೆ ಪರಮಾಣು ಶಕ್ತಿ & ಸಂಶೋಧನೆ ವಿಚಾರದಲ್ಲಿ ಅಮೆರಿಕದ ಜೊತೆಗೆ ಯಾವುದೇ ಕಾರಣಕ್ಕೂ ನೇರ ಮಾತುಕತೆ ಇಲ್ಲ ಎಂದಿದ್ದಾರೆ. ಇದು ಸಂಧಾನಕ್ಕೆ ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಘಾತ ನೀಡಿದೆ. ಆದರೂ ಕೆಲವು ಬದಲಾವಣೆ ನಂತರ ಸಂಧಾನ ಮಾತುಕತೆ ಆರಂಭವಾಗುವ ಸಾಧ್ಯತೆ ಇದೆ.
ಸಂಧಾನದಿಂದ ಯಾರಿಗೆ ಹೆಚ್ಚು ಲಾಭ?
ಇರಾನ್ & ಅಮೆರಿಕ ನಡುವೆ ಸಂಧಾನ ಮಾತುಕತೆ ನಡೆದರೆ ಯಾರಿಗೆ ಹೆಚ್ಚು ಲಾಭ? ಎಂಬ ಚರ್ಚೆ ಶುರುವಾಗಿದೆ. ಈ ಪ್ರಶ್ನೆಗೆ ಉತ್ತರ ಕಷ್ಟವಾದರೂ, ಅಮೆರಿಕಗಿಂತ ಹೆಚ್ಚಿನ ಲಾಭವನ್ನ ಇಸ್ರೇಲ್ ಪಡೆಯುವುದು ಗ್ಯಾರಂಟಿ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಈಗಾಗಲೇ ಇಸ್ರೇಲ್ ತನ್ನ ಎಲ್ಲಾ ಶತ್ರುಗಳನ್ನ ಪೀಸ್ ಪೀಸ್ ಮಾಡಿ ಹಾಕಿದೆ.
ಮಧ್ಯಪ್ರಾಚ್ಯದಲ್ಲಿ ಸದ್ಯಕ್ಕೆ ಇರಾನ್ ಮಾತ್ರ ಬಾಕಿ ಉಳಿದಿರುವ ಶತ್ರುವಾಗಿದ್ದು, ಅಮೆರಿಕ & ಇರಾನ್ ನಡುವೆ ಸಂಧಾನ ಮಾತುಕತೆ ನಡೆದರೆ ಅದು ಇಸ್ರೇಲ್ ಪಾಲಿಗೆ ಹೊಸ ಆರಂಭ ಅಂತಾ ಹೇಳಬಹುದು. ಹೀಗಾಗಿ, ಇರಾನ್ ನಡೆ ಕುತೂಹಲ ಕೆರಳಿಸುತ್ತಿದೆ. ಹಾಗೇ ಇನ್ನೊಂದು ಕಡೆ ರಷ್ಯಾ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಯುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications