Israel-Iran war: ಇಸ್ರೇಲ್ ಮೇಲೆ ಬಾಂಬ್ ಸುರಿಸಿದ ಇರಾನ್; ಮತ್ತೊಂದು ಹಂತಕ್ಕೆ ಸಂಘರ್ಷ

ಗಾಜಾ ಪಟ್ಟಿಯಿಂದ ಶುರುವಾದ ಸಂಘರ್ಷ ಇಂದು ಮೂರನೇ ಪ್ರಪಂಚ ಯುದ್ಧದ ಆತಂಕಕ್ಕೆ ತಂದು ನಿಲ್ಲಿಸಿದೆ. ತನಗೆ ಎದುರಾಗಿ ಯಾರೇ ನಿಂತರೂ ಹೊಡೆದುರುಳಿಸುತ್ತೇನೆ ಎನ್ನುವ ಉನ್ಮಾದದಲ್ಲಿ ಇಸ್ರೇಲ್ ಮುನ್ನುಗ್ಗುತ್ತಿದೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಾಯಕನನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಶತ್ರುಗಳ ಗುಂಪಿನ ನಾಯಕನನ್ನು ಕೊಂದು ಹಾಕಿತ್ತು. ಲೆಬನಾನ್ ಮೇಲಿನ ದಾಳಿಯಿಂದ ಕೆರಳಿರುವ ಇರಾನ್ ಇದೀಗ ಇಸ್ರೇಲ್ ಮೇಲೆ ಮುಗಿಬಿದ್ದಿದೆ.

ಮಂಗಳವಾರ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ. 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಿದ್ದು, ನಾಗರಿಕರು ಬಾಂಬ್ ಶೆಲ್ಟರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಪಡೆ ಮಾಹಿತಿ ನೀಡಿದೆ. ಹೆಜ್ಬುಲ್ಲಾ ಸಂಘಟನೆಯ ಕಮಾಂಡರ್ ಹಸನ್ ನಸ್ರಲ್ಲಾ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಉನ್ನತ ಅಧಿಕಾರಿ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದರಿಂದ ಸಿಟ್ಟಿಗೆದ್ದಿರುವ ಇರಾನ್ ಇಸ್ರೇಲ್ ಮೇಲೆ ದಾಳಿ ಆರಂಭಿಸಿದೆ.

Iran Launches Over 100 Missiles at Israel Civilians Evacuated to Shelters

ಇಸ್ರೇಲ್ ವಿದೇಶಾಂಗ ಸಚಿವಾಲಯ ಕ್ಷಿಪಣಿ ದಾಳಿ ನಡೆದಿರುವುದನ್ನು ಖಚಿತಪಡಿಸಿದೆ. ನಸ್ರಲ್ಲಾ, ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್, ತನ್ನ ಹಿರಿಯ ಕಮಾಂಡರ್ ಅಬ್ಬಾಸ್ ನಿಲ್ಫೊರೌಶನ್ ಹತ್ಯೆಗೆ ಪ್ರತೀಕಾರವಾಗಿ 100 ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಉಡಾಯಿಸಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಐರನ್ ಡೋಮ್ ಎನ್ನುವ ರಕ್ಷಾ ಕವಚ

ಸುತ್ತಲೂ ಶತ್ರು ರಾಷ್ಟ್ರಗಳನ್ನೇ ಹೊಂದಿರುವ ಇಸ್ರೇಲ್ ತನ್ನ ಭದ್ರತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಐರನ್ ಡೋಮ್ ಇಸ್ರೇಲ್‌ನ ರಕ್ಷಾ ಕವಚ ಎಂದೇ ಹೇಳಬಹುದು, ಇದೀಗ ಇರಾನ್ ಮಾಡಿರುವ ಕ್ಷಿಪಣಿ ದಾಳಿಯನ್ನು ತಡೆಯುವಲ್ಲಿ ಐರನ್ ಡೋಮ್ ಪ್ರಮುಖ ಪಾತ್ರ ವಹಿಸಿದೆ. ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಈವರೆಗೂ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ತನ್ನ ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಇಸ್ರೇಲ್ ನಾಗರಿಕರಿಗೆ ಬಾಂಬ್ ಶೆಲ್ಟರ್ ಗಳಲ್ಲಿ ಆಶ್ರಯ ಕೊಟ್ಟಿದೆ. ಮುಂದಿನ ಸೂಚನೆ ಬರುವವರೆಗೂ ಸುರಕ್ಷಿತ ಜಾಗಗಳಲ್ಲಿ ಇರುವಂತೆ ನಾಗರಿಕರಿಗೆ ಮನವಿ ಮಾಡಿದೆ.

ಇರಾನ್ ಕ್ಷಿಪಣಿ ದಾಳಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಲೆಬನಾನ್‌ನ ಹೆಜ್ಬುಲ್ಲಾ ಉಗ್ರರ ಹೆಡೆಮುರಿ ಕಟ್ಟಿರುವ ಇಸ್ರೇಲ್‌, ಇದೀಗ ಇರಾನ್‌ ದಾಳಿಗೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗುತ್ತಿರುವ ಹಿನ್ನಲೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಜಾಗತಿಕವಾಗಿ ಇಂದನ ತೈಲ ಬೆಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+