ಇಸ್ರೇಲ್ ನಮ್ಮ ವಿರುದ್ಧ ಮತ್ತೆ ಯುದ್ಧ ಮಾಡಬಹುದು, ಮುಟ್ಟಿದ್ರೆ ತಟ್ಟಿ ಬಿಡ್ತೀವಿ ಅಂತು ಇರಾನ್! Iran And Israel
ಮುಗಿಯದ ಗೋಳು ಇದು ಅನಿಸುತ್ತೆ, ಅರೆರೆ ಯಾರ ಬಗ್ಗೆ ಅಂದ್ರಾ? ನಾವಿಲ್ಲಿ ಹೇಳ್ತಾ ಇರೋದು ಇರಾನ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆ. ಯಾಕಂದ್ರೆ ಇಬ್ಬರ ಮಧ್ಯೆ ಯುದ್ಧ ನಿಂತು ಕದನ ವಿರಾಮ ಘೋಷಣೆ ಮಾಡಿ ಇನ್ನೂ ಕೆಲವೇ ಕೆಲವು ದಿನಗಳು ಕಳೆದಿವೆ ಅಷ್ಟೇ. ಆದರೆ ಈಗಾಗಲೇ ಇಬ್ಬರೂ ಮತ್ತೊಂದು ರೌಂಡ್ ಫೈಟಿಂಗ್ ಮಾಡಲು ಸಜ್ಜಾಗಿದ್ದಾರೆ ಅಂತಾ ಕಾಣುತ್ತದೆ. ಯಾಕಂದ್ರೆ ಒಂದು ಕಡೆ ಇರಾನ್ ಸೇನೆಯನ್ನು, ಇರಾನ್ ನಾಯಕರನ್ನು ಕೆಣಕುವ ರೀತಿ ಇಸ್ರೇಲ್ ಹೇಳಿಕೆ ನೀಡುತ್ತಿದೆ. ಇದೇ ಸಮಯದಲ್ಲಿ ಇರಾನ್ ಏನು ಹೇಳಿದೆ ಗೊತ್ತಾ?
ಇಸ್ರೇಲ್ ಮೇಲೆ ಭೀಕರವಾಗಿ ಕ್ಷಿಪಣಿ ದಾಳಿ ಮಾಡಿ, ಟೆಲ್ ಅವಿವ್ ಸೇರಿದಂತೆ ಹಲವು ಪ್ರಮುಖ ನಗರದ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿತ್ತು. ಈ ಯುದ್ಧ ನೋಡ ನೋಡುತ್ತಲೇ ದೊಡ್ಡದಾಗಿ ಪರಮಾಣು ಬಾಂಬ್ ಕೂಡ ಬಳಕೆ ಆಗುತ್ತಾ? ಅನ್ನೋ ಭಯ ಆವರಿಸಿತ್ತು. ಹೀಗೆ ಎಲ್ಲಾ ಕಡೆಯಿಂದಲೂ ಆತಂಕ ಎದುರಾಗಿ, ಎಲ್ಲರೂ ಚಿಂತೆ ಮಾಡುವ ಸಮಯದಲ್ಲೇ ಅಮೆರಿಕ ಕೂಡ ಮಧ್ಯಪ್ರವೇಶ ಮಾಡಿ ಇರಾನ್ ವಿರುದ್ಧ ದಾಳಿ ಮಾಡಿತ್ತು. ಆದರೆ ಕೊನೆಗೆ ಇರಾನ್ ಜೊತೆಗೆ ಸಂಧಾನ ಮಾಡಿಕೊಂಡು ಇಸ್ರೇಲ್ ಮತ್ತು ಅಮೆರಿಕ ಸುಮ್ಮನೆ ಆಗಿದ್ದವು. ಅಲ್ಲದೆ ಮತ್ತೊಮ್ಮೆ ಜಗಳ ಮಾಡಬೇಡಿ ಅಂತಾ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇಸ್ರೇಲ್ ಬಳಿ ಮನವಿ ಮಾಡಿದ್ದರು. ಆದರೆ ಈಗ ಬೇರೆಯದ್ದೇ ಸುದ್ದಿ ಶುರುವಾಗಿದೆ!

ಇರಾನ್ & ಇಸ್ರೇಲ್ ವಾರ್ ಮತ್ತೆ ಶುರು?
ಹೌದು, ಯಾವುದೇ ಸಮಯದಲ್ಲಿ ನಮ್ಮ ವಿರುದ್ಧ ಇಸ್ರೇಲ್ ದಾಳಿ ಮಾಡಬಹುದು. ಹೀಗಾಗಿ ನಾವು ಈ ಬಗ್ಗೆ ಅಲರ್ಟ್ ಆಗಿದ್ದೇವೆ ಅಂತಾ ಇರಾನ್ ಹೇಳಿದೆ. ಅಲ್ಲದೆ ನಮಗೆ ಇಸ್ರೇಲ್ ತೊಂದರೆ ಮಾಡಿದರೆ ಆ ಕ್ಷಣವೇ ನಾವು ಕೂಡ ಡೆಡ್ಲಿ ಅಟ್ಯಾಕ್ ಮಾಡ್ತೀವಿ ಅಂತಾ ಹೇಳಿದೆ ಇರಾನ್. ಈ ಮೂಲಕ ಮತ್ತೊಮ್ಮೆ, ಮಧ್ಯಪ್ರಾಚ್ಯ ನೆಲದಲ್ಲಿ ಬೆಂಕಿಯ ಕಿಡಿ ಹೊತ್ತಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆಬಿಸಿ ಕೂಡ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications