War Helpline: ಇರಾನ್-ಇಸ್ರೇಲ್‌ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗಾಗಿ ತುರ್ತು ಸಹಾಯವಾಣಿ ಸಂಖ್ಯೆ ಬಿಡುಗಡೆ
ನವದೆಹಲಿ: ಇರಾನ್ ಮತ್ತು ಇಸ್ರೇಲ್ ಮಧ್ಯ ಯುದ್ಧ ಸಂಭವಿಸಿದ್ದು, ಇದು ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊತ್ತದೆಯೋ ಎಂಬ ಚರ್ಚೆ ಶುರುವಾಗಿದೆ. ಇರಾನ್ ಮೇಲೆ ಇಸ್ರೇಲ್ ಮಾಡಿದ್ದು, ಉಭಯ ದೇಶಗಳಲ್ಲಿ ಇರುವ ಭಾರತೀಯರಿಗಾಗಿ ಸಹಾಯವಾಣಿ (ತುರ್ತು ಸಂಖ್ಯೆ)ಯನ್ನು ನೀಡಲಾಗಿದೆ. ಭಾರತೀಯರು ಸಂಪರ್ಕಿಸಬೇಕಿದೆ.
ಭಾರತೀಯರಿಗೆ ತುರ್ತು ಸಂಖ್ಯೆಗಳು: ಇಸ್ರೇಲ್
ಯಾವುದೇ ತುರ್ತು ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು 24x7 ಸಹಾಯವಾಣಿಯ ಮೂಲಕ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು: ದೂರವಾಣಿ: +972-54-7520711; +972-54-2428378, ಇ-ಮೇಲ್: [email protected]

ಇರಾನ್: ತುರ್ತು ಸಂದರ್ಭಗಳಲ್ಲಿ, ಭಾರತೀಯರು ಈ ಕೆಳಗಿನ ಸಂಖ್ಯೆಗಳಲ್ಲಿ ಮಿಷನ್ ಅನ್ನು ಸಂಪರ್ಕಿಸಬಹುದು: +989128109115, +989128109109, +989128109102 ಮತ್ತು +989932179359 ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಇಸ್ರೇಲ್ ಇರಾನ್‌ನ ರಾಜಧಾನಿ ಟೆಹರಾನ್ ಮೇಲೆ ದಾಳಿ ಮಾಡಿದೆ. ಇರಾನ್ ಪ್ರತಿದಾಳಿಗೆ ಮುಂದಾಗಿದೆ. ಇವೆರಡು ರಾಷ್ಟ್ರಗಳ ಮಧ್ಯದ ಯುದ್ಧವು ಜಾಗತಿಕವಾಗಿ ಸುದ್ದಿಯಾಗಿದೆ. ಭಾರತದ ಪ್ರಜೆಗಳು ಈ ಉಭಯ ದೇಶಗಳಲ್ಲಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಮುಖ್ಯಸ್ಥರು ರಾಯಭಾರಿ ಕಚೇರಿಗಳ ಜತೆ ನಿರಂತರ ಸಂಪರ್ಕದಲಿದ್ದಾರೆ. ಯುದ್ಧದ ಉದ್ವಿಘ್ನತೆ ಕಾಣುತ್ತಿದ್ದಂತೆ ಇರಾನ್, ಇಸ್ರೇಲ್‌ನಲ್ಲಿರುವ ಭಾರತೀಯರಿಗಾಗಿ ತುರ್ತು ಸಹಾಯವಾಣಿ ಆರಂಭಿಸಿದೆ.
ಮತ್ತೊಂದೆಡೆ ಯುಎಸ್ ಹಾಗೂ ಇರಾನ್ ಮಧ್ಯ ತೀವ್ರ ಯುದ್ಧ ನಡೆಯುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಹೀಗಾಗಿ ಈಮೂರು ದೇಶಗಳಲ್ಲಿರುವ ಭಾರತೀಯರಲ್ಲಿ ಆತಂಕ ಶುರುವಾಗಿದೆ. ಸಹಾಯವಾಣಿ ಆರಂಭಿಸುವ ಮೂಲಕ ಅಲ್ಲಿನ ಭಾರತೀಯರಲ್ಲಿ ಧೈರ್ಯ ನೀಡಿದೆ.












Click it and Unblock the Notifications