ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ
ಬಾಗ್ದಾದ್, ಜನವರಿ 08 : ಇರಾನ್ ಸೇನಾ ಮುಖ್ಯಸ್ಥರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ.
ಇರಾಕಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ 12ಕ್ಕೂ ಅಧಿಕ ಖಂಡಾಂತರ ದಾಳಿ ನಡೆಸಲಾಗಿದೆ. ರಾಕೆಟ್ ದಾಳಿ ನಡೆದಿರುವುದನ್ನು ಪೆಂಟಗಾನ್ ಖಚಿತಪಡಿಸಿದೆ.
ಅನಿ ಅಲ್ ಅಸದ್, ಇಬ್ರಿಲ್ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸಾವು-ನೋವು ಆಗಿರುವ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇರಾನ್ ಸೇನಾ ಮುಖ್ಯಸ್ಥ ಸುಲೈಮಾನಿ ಹತ್ಯೆಯ ಬಳಿಕ ತೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಸಂಬಂಧ ಹಳಸಿದೆ.

ಅಮೆರಿಕದ ಪಡೆಗಳು ದೇಶ ತೊರೆಯಬೇಕು ಎಂದು ಇರಾಕ್ ಸಂಸತ್ ನಿರ್ಣಯ ಮಂಡನೆ ಮಾಡಿತ್ತು. ಒಂದು ವೇಳೆ ಅಮೆರಿಕದ ಪಡೆಗಳನ್ನು ಬಲವಂತದಿಂದ ಹೊರ ಹಾಕಿದರೆ ಇರಾಕ್ ಮೇಲೆ ನಿರ್ಬಂಧ ಹೇರುತ್ತೇವೆ ಎಂದು ಅಮೆರಿಕ ಹೇಳಿತ್ತು.
ಇರಾಕ್‌ನಲ್ಲಿ ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದೆ. ಇರಾನ್ ಈ ನೆಲೆಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಿದೆ. ಇರಾನ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ನ್ಯಾಟೊ ದೇಶದ ರಾಯಭಾರಿಗಳು ಸೋಮವಾರ ಸಭೆ ನಡೆಸಿದ್ದರು.
#WATCH: Iran launched over a dozen ballistic missiles at 5:30 p.m. (EST) on January 7 and targeted at least two Iraqi military bases hosting US military and coalition personnel at Al-Assad and Irbil, in Iraq. pic.twitter.com/xQkf9lG6AP
— ANI (@ANI) January 8, 2020
ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಹಳಸಿದ್ದು, ಯದ್ಧದ ಕಾರ್ಮೋಡ ಆವರಿಸಿದೆ. ಹತ್ಯೆಗೆ ಪ್ರತೀಕಾರ ಪಡೆದುಕೊಳ್ಳುತ್ತೇವೆ ಎಂದು ಇರಾನ್ ಹೇಳಿತ್ತು.












Click it and Unblock the Notifications