Petrol Price: ಇಸ್ರೇಲ್ & ಇರಾನ್ ಬಡಿದಾಡಿದರೆ ನಮಗೇನು? ಅಂತಾ ಕೇಳಬೇಡಿ, ಪೆಟ್ರೋಲ್ ರೇಟ್ ಜಾಸ್ತಿ ಆಗಿಬಿಡುತ್ತೆ!
ಭಾರತ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ & ಡೀಸೆಲ್ ತಯಾರಿಸಲು ಬೇಕಾದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಯಾಕಂದ್ರೆ ಭಾರತದಲ್ಲಿ ಕಚ್ಚಾ ತೈಲ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಿದ್ದಾಗ ಒಂದು ಕಡೆ ಇಸ್ರೇಲ್ & ಇರಾನ್ ನಡುವೆ ಬಡಿದಾಟ ಶುರುವಾಗಿದ್ದು, ಯಾವ ಕ್ಷಣದಲ್ಲಿ ಎರಡೂ ದೇಶಗಳು ಪರಮಾಣು ಬಾಂಬ್ ಹಾಕಿಬಿಡುತ್ತವೋ? ಎಂಬ ಭಯ ಕಾಡುತ್ತಿದೆ. ಇಂತಹ ಸಮಯದಲ್ಲೇ ಕೆಲವರು, ಇಸ್ರೇಲ್ & ಇರಾನ್ ಬಡಿದಾಡಿದರೆ ನಮಗೇನು? ಅಂತಾ ಪ್ರಶ್ನೆ ಕೇಳುತ್ತಿದ್ದಾರೆ. ಆದ್ರೆ ಅಸಲಿ ಮ್ಯಾಟರ್ ಇರೋದೆ ಅಲ್ಲಿ, ಇವರು ಹಿಂಗೆಲ್ಲಾ ಕಿತ್ತಾಡುತ್ತಿದ್ದರೆ ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಆಕಾಶ ಮುಟ್ಟಿ ವಾಪಸ್ ಬರುತ್ತೆ!
ಭಾರತ ಜಗತ್ತಿನ ಯಾವುದೇ ದೇಶದ ಜೊತೆಗೆ ಯುದ್ಧ ಮಾಡುವ ಹಂತಕ್ಕೆ ಹೋಗಲ್ಲ. ಇದೇ ಕಾರಣಕ್ಕೆ ಭಾರತ ನೆಮ್ಮದಿಯಾಗಿ ಇದೆ. ಪಾಕಿಸ್ತಾನದ ಜೊತೆಗೆ ಒಂದೆರಡು ಸಣ್ಣ ಯುದ್ದವು ನಡೆದಿವೆ & ಚೀನಾ ಜೊತೆಗೆ ಯುದ್ಧ ನಡೆದಿದೆ ಬಿಟ್ಟರೆ, ಭಾರತ ಎಂದಿಗೂ ಘೋರ ಯುದ್ಧಕ್ಕೆ ಮುಂದೆ ಹೋಗಿಲ್ಲ. ಅದರಲ್ಲೂ ಆಧುನಿಕ ಭಾರತಕ್ಕೆ ಯುದ್ಧದ ಸಹವಾಸ ಬೇಡವೇ ಬೇಡ. ಇಂತಹ ಸಮಯದಲ್ಲೇ ಜಗತ್ತಿನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿತ್ತು. ಬಳಿಕ ಗಾಜಾ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ನಡುವೆ ಘೋರ ಯುದ್ಧ ಆರಂಭ ಆಗಿದೆ. ಈ ಸಮಯದಲ್ಲೂ ಭಾರತ ನೆಮ್ಮದಿಯಾಗೇ ಇತ್ತು. ಆದರೆ ಯಾವಾಗ ಈ ಯುದ್ಧದ ಪಟ್ಟಿಗೆ ಇರಾನ್ ಕೂಡ ಎಂಟ್ರಿ ಆಯ್ತೋ ಆಗಲೇ ನೋಡಿ ಭಯ ಶುರುವಾಗಿದ್ದು!

ಇಸ್ರೇಲ್ & ಇರಾನ್ ಯುದ್ಧದಿಂದ ಭಾರತ...
ಗಾಜಾ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧದಿಂದ ಭಾರತಕ್ಕೆ ಯಾವುದೇ ನಷ್ಟ ಆಗಲಿಲ್ಲ. ರಷ್ಯಾ & ಉಕ್ರೇನ್ ಯುದ್ಧದಿಂದ ಕೂಡ ಭಾರತಕ್ಕೆ ನಷ್ಟ ಏನು ಆಗಲಿಲ್ಲ. ಆದರೆ ಇರಾನ್ & ಇಸ್ರೇಲ್ ನಡುವೆ ಕ್ಷಿಪಣಿ ದಾಳಿ ಶುರುವಾದ ನಂತರ ಆತಂಕ ಆವರಿಸಿದೆ. ಯಾಕಂದ್ರೆ ಭಾರತಕ್ಕೆ ಬರುವ ಕಚ್ಚಾ ತೈಲದ ಮೇಲೆ ಈ ಯುದ್ಧವು ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಮೂಲಕ ಭಾರತದಲ್ಲಿ ಪೆಟ್ರೋಲ್ & ಡಿಸೇಲ್ ಬೆಲೆಯಲ್ಲಿಯೂ ಹೆಚ್ಚಳ ಆಗುವ ಭೀತಿ ಕೂಡ ಆವರಿಸಿದೆ.
200ಕ್ಕೂ ಹೆಚ್ಚು ಮಿಸೈಲ್ ದಾಳಿ
ಇಸ್ರೇಲ್‌ನ ಪ್ರಮುಖ ಪಟ್ಟಣ ಟೆಲ್‌ಅವೀವ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಭೀಕರವಾಗಿ ದಾಳಿ ನಡೆಸಿದೆ ಇರಾನ್. ದಕ್ಷಿಣ ಟೆಲ್‌ಅವೀವ್ ನಗರ ಮೇಲೆ ಉಗ್ರರಿಂದ ಕೂಡ ಗುಂಡಿನ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ದಿಢೀರ್ ಹೀಗೆ ಶತ್ರುಗಳು ಇಸ್ರೇಲ್ ವಿರುದ್ಧ ದಾಳಿ ಆರಂಭ ಮಾಡಿದ ನಂತರ ಪರಿಸ್ಥಿತಿ ಕೈಮೀರಿ ಹೊಗುತ್ತಿದೆ. ಒಂದ್ಕಡೆ ನೇರವಾಗಿ ಇಸ್ರೇಲ್ ನೆಲಕ್ಕೆ ನುಗ್ಗಿದ ಉಗ್ರರು ದಾಳಿ ಮಾಡಿರುವ ಆರೋಪ ಕೇಳಿಬಂದಿದೆ, ಇನ್ನೊಂದು ಕಡೆ ಇರಾನ್ ಕೂಡ 200ಕ್ಕೂ ಹೆಚ್ಚು ಮಿಸೈಲ್ ಹಾರಿಸಿ ಇಸ್ರೇಲ್‌ನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications