ಇಸ್ರೇಲ್ ನಾಯಕರಿಗೆ ಗುನ್ನಾ ಇಟ್ಟ ಅಂತಾರಾಷ್ಟ್ರೀಯ ನ್ಯಾಯಾಲಯ!

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಕಾಳಗ ಇದೀಗ ಒಂದು ಹಂತಕ್ಕೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯುದ್ಧದ ಬಗ್ಗೆ ಇಸ್ರೇಲ್ ವಿರುದ್ಧ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಮಧ್ಯೆ ಅಂತಾರಾಷ್ಟ್ರೀಯ ನ್ಯಾಯಾಲಯ ಯುದ್ಧದ ವಿಚಾರದಲ್ಲಿ ಎಂಟ್ರಿ ಕೊಟ್ಟಿದ್ದು, ಇಸ್ರೇಲ್‌ಗೆ ಆಘಾತ ಎದುರಾಗಿದೆ.

ಹೌದು ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿ 1948ರಲ್ಲಿ ಮಾಡಿಕೊಂಡ ಒಪ್ಪಂದ ಇಸ್ರೇಲ್‌ ಉಲ್ಲಂಘಿಸುತ್ತಿದೆ ಅಂತಾ, ದಕ್ಷಿಣ ಆಫ್ರಿಕಾ ಮಾಡಿರುವ ಆರೋಪದ ಹಿನ್ನೆಲೆ ಅಂತಾರಾಷ್ಟ್ರೀಯ ನ್ಯಾಯಾಲಯ ವಿಚಾರಣೆ ಕೈಗೊಂಡಿತ್ತು. ಈ ಕುರಿತು ಇದೀಗ ಮಹತ್ವದ ತೀರ್ಪು ನೀಡಿದ್ದು ಇಸ್ರೇಲ್‌ಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ಅಂತರಾಷ್ಟ್ರೀಯ ನ್ಯಾಯಾಲಯವು ಗಾಜಾದ ದಕ್ಷಿಣ ಪಟ್ಟಣ ರಫಾದಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸುವಂತೆ ಖಡಕ್ ಆದೇಶ ನೀಡಿದೆ. ಈ ಮೂಲಕ ಇಸ್ರೇಲ್‌ಗೆ ದೊಡ್ಡ ಶಾಕ್ ಕೊಟ್ಟಿದೆ. ಹಾಗಾದ್ರೆ ಇಸ್ರೇಲ್ ಯುದ್ಧ ನಿಲ್ಲಿಸುತ್ತಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

International Court Of Justice Orders Israel To Stop The Rafah Operation Immediately

2 ವಾರದಿಂದ ಭೀಕರ ಕಾಳಗ!

ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ ಕಳೆದ 2 ವಾರದಿಂದ ತಿಕ್ಕಾಟ ತೀವ್ರವಾಗಿದೆ. ಈ ಹಿನ್ನೆಲೆ, ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಯುದ್ಧವನ್ನು ತಕ್ಷಣ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್‌ನ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ, ಹೀಗಾಗಿ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಿದ್ದಾಗ ಇಂಟರ್‌ನ್ಯಾಷನಲ್ ಕೋರ್ಟ್ ಇಸ್ರೇಲ್‌ಗೆ ಆಘಾತ ನೀಡಿದೆ.

ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?

ಅಂದಹಾಗೆ ಗಾಜಾ ಪಟ್ಟಿ ಭಾಗದ ರಫಾ ಮೇಲೆ ಇಸ್ರೇಲ್ ಸೇನೆಯು ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಆಗ್ರಹಿಸಿ, ಈ ಬಗ್ಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಂತಾರಾಷ್ಟ್ರೀಯ ನ್ಯಾಯಾಲಯವು ಇದೀಗ ಮಹತ್ವದ ತೀರ್ಪು ನೀಡಿದೆ. ತಕ್ಷಣ ರಫಾ ಭಾಗದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸಿ ಎಂದಿದೆ ಕೋರ್ಟ್.

International Court Of Justice Orders Israel To Stop The Rafah Operation Immediately

ಆದ್ರೆ ಕೋರ್ಟ್ ಮಾತಿಗೆ ಬೆಲೆ ಕೊಟ್ಟು ಇಸ್ರೇಲ್ ಯುದ್ಧ ನಿಲ್ಲಿಸುತ್ತ? ಎಂಬ ಪ್ರಶ್ನೆ ಕಾಡುತ್ತಿದ್ದು, ಜೊತೆಗೆ ಜನವರಿ 26ರ ತೀರ್ಪನ್ನ ಅಂತಾರಾಷ್ಟ್ರೀಯ ನ್ಯಾಯಾಲಯ ಮತ್ತೆ ಪ್ರಸ್ತಾಪ ಮಾಡಿದ್ದು ಗಾಜಾದ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದಿದೆ. ಆದರೆ ಇದೆಲ್ಲ ಕೇವಲ ತೀರ್ಪಿಗೆ ಮಾತ್ರ ಸೀಮಿತ ಆಗುತ್ತಾ? ಅಥವಾ ಇಸ್ರೇಲ್ ಕೋರ್ಟ್ ಆದೇಶದ ಪಾಲನೆ ಮಾಡುತ್ತಾ? ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+