ಇಂಡೋನೇಷಿಯಾದ ವಿಮಾನ ಪಪುವಾದಲ್ಲಿ ನಾಪತ್ತೆ

ಜಕಾರ್ತಾ, ಆಗಸ್ಟ್ 16: ಸುಮಾರು 54 ಜನರಿದ್ದ ಇಂಡೋನೇಷಿಯಾದ ಪ್ಯಾಸೆಂಜರ್ ವಿಮಾನ ಪಪುವಾದಲ್ಲಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಭವಿಸಿದೆ.

ಇಂಡೋನೇಷಿಯಾದ ತ್ರಿಗಣ ಏರ್ ಪ್ಯಾಸೆಂಜರ್ ಏಟಿಆರ್42-300 ವಿಮಾನ ಸ್ಥಳೀಯ ಕಾಲಮಾನ 3 ಗಂಟೆ(6.00 GMT)ಪಪುವಾ ಹಾಗೂ ನ್ಯೂಗಿನಿಯಾದ ದ್ವೀಪಕ್ಕೆ ಹೊಂದಿಕೊಂಡಿರುವ ಜಯಪುರ ನಗರದ ಸೆಂತಾನಿ ವಿಮಾನ ನಿಲ್ದಾಣದಿಂದ ಹೊರಟ ಮೇಲೆ ಸಂಪರ್ಕ ಕಳೆದುಕೊಂಡಿದೆ. 49 ಮಂದಿ ಪ್ರಯಾಣಿಕರು ಸೇರಿದಂತೆ ಐವರು ವಿಮಾನಯಾನ ಸಿಬ್ಬಂದಿಯನ್ನು ವಿಮಾನ ಹೊಂದಿದೆ. ಪ್ರಯಾಣಿಕರ ಪೈಕಿ 44 ಜನ ವಯಸ್ಕರು, 5 ಮಕ್ಕಳು ಹಾಗೂ 5 ಜನ ಸಿಬ್ಬಂದಿ ಇದ್ದಾರೆ.

Indonesian plane with 54 aboard missing over Papua region

ಪಪುವಾದ ಒಕ್ಸಿಬಿಲ್ ನಗರದ ಕಡೆಗೆ ಹೊರಟ ವಿಮಾನಕ್ಕೆ ಪ್ರತಿಕೂಲ ಹವಾಮಾನ ಎದುರಾಗಿರಬಹುದು. ಹಿಮದಿಂದ ಆವೃತವಾದ ಪ್ರದೇಶದಲ್ಲಿ ನಾಪತ್ತೆಯಾಗಿರುವ ಅನುಮಾನಗಳಿವೆ. ಟೇಕ್ ಆಫ್ ಆದ 33 ನಿಮಿಷಗಳಲ್ಲೇ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಸಾರಿಗೆ ಸಚಿವಾಲಯದ ವಕ್ತಾರ ಜೂಲಿಯಸ್ ಭರಟ ಹೇಳಿದ್ದಾರೆ.

1991ರಿಂದ ಕಾರ್ಯ ನಿರ್ವಹಿಸುತ್ತಿರುವ ತ್ರಿಗಣ ಏರ್ ಇದುವರೆವಿಗೂ 14 ಬಾರಿ ಇಂಥ ದುರಂತಗಳಿಗೆ ಸಾಕ್ಷಿಯಾಗಿದೆ. ಯುರೋಪಿಯನ್ ಯೂನಿಯನ್ ನಲ್ಲಿ ಈ ಸಂಸ್ಥೆಯನ್ನು 2007ರಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+