Indonesia: ಜಕಾರ್ತದಲ್ಲಿನ ತೈಲ ಸಂಗ್ರಹಾಗಾರದಲ್ಲಿ ಬೆಂಕಿ 17 ಸಾವು- ಸಾವಿರಾರು ಜನರನ್ನು ಸ್ಥಳಾಂತರ!
ಇಂಡೋನೇಷ್ಯಾದ ರಾಜಧಾನಿ ಜಕಾರ್ತನಲ್ಲಿ ಶುಕ್ರವಾರ ಇಂಧನ ಶೇಖರಣಾ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 17 ಜನರು ಸಾವನ್ನಪ್ಪಿದ್ದಾರೆ.
ಜಕಾರ್ತ ಮಾರ್ಚ್ 4: ಇಂಡೋನೇಷ್ಯಾದ ರಾಜಧಾನಿ ಜಕಾರ್ತನಲ್ಲಿ ಶುಕ್ರವಾರ ಇಂಧನ ಶೇಖರಣಾ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 17 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಜನ ಗಾಯಗೊಂಡಿದ್ದಾರೆ. ಬೆಂಕಿ ಕೆನ್ನಾಲಿಗೆ ನೆರೆಹೊರೆಗೂ ಹರಡಿದ ನಂತರ ಹತ್ತಿರದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
Plumpang ಇಂಧನ ಶೇಖರಣಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ರಾಜ್ಯ-ಚಾಲಿತ ತೈಲ ಮತ್ತು ಅನಿಲ ಕಂಪನಿ Pertamina ನಿರ್ವಹಿಸುತ್ತದೆ. ಇದು ಉತ್ತರ ಜಕಾರ್ತದ Tanah Merah ನೆರೆಹೊರೆಯಲ್ಲಿ ಜನನಿಬಿಡ ಪ್ರದೇಶದ ಸಮೀಪದಲ್ಲಿದೆ. ಇದು ಇಂಡೋನೇಷ್ಯಾದ ಅಗತ್ಯ ಇಂಧನವನ್ನು 25% ರಷ್ಟು ಪೂರೈಸುತ್ತದೆ.

ಭಾರೀ ಮಳೆಯ ಸಮಯದಲ್ಲಿ ಮಿಂಚಿನ ಹೊಡೆತದಿಂದ ಪೈಪ್‌ಲೈನ್ ಒಡೆದು ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬೆಂಕಿ ಹಲವಾರು ಸ್ಫೋಟಗಳಿಂದ ತ್ವರಿತವಾಗಿ ವಸತಿ ಮನೆಗಳಿಗೆ ಹರಡಿದೆ. 260 ಅಗ್ನಿಶಾಮಕ ಸಿಬ್ಬಂದಿ ಮತ್ತು 52 ಅಗ್ನಿಶಾಮಕ ಇಂಜಿನ್‌ಗಳು ಬೆಂಕಿಯನ್ನು ನಿಯಂತ್ರಿಸಲು ಹೆಣಗಾಡುತ್ತಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ವಿಡಿಯೋಗಳು ವೈರಲ್ ಆಗಿವೆ. ನೂರಾರು ಜನರು ಭಯಭೀತರಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸುಮಾರು 600 ಸ್ಥಳಾಂತರಗೊಂಡ ಜನರನ್ನು ಹಲವಾರು ಸರ್ಕಾರಿ ಕಚೇರಿಗಳು ಮತ್ತು ಕ್ರೀಡಾ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ.

ಜಕಾರ್ತಾದ ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಸತ್ರಿಯಾಡಿ ಗುಣವಾನ್, ಇಬ್ಬರು ಮಕ್ಕಳು ಸೇರಿದಂತೆ 17 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಕೆಲವರು ತೀವ್ರ ಸುಟ್ಟಗಾಯಗಳೊಂದಿಗೆ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇಂಡೋನೇಷ್ಯಾದ ರಾಜ್ಯ-ಮಾಲೀಕತ್ವದ ಉದ್ಯಮಗಳ ಸಚಿವ ಎರಿಕ್ ಥೋಹಿರ್, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಬೆಂಕಿಯ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲು ಮತ್ತು ಸಮುದಾಯಕ್ಕೆ ತ್ವರಿತವಾಗಿ ಸಹಾಯ ಮಾಡುವತ್ತ ಗಮನಹರಿಸುವಂತೆ ಪೆರ್ಟಮಿನಾಗೆ ಆದೇಶಿಸಿದ್ದಾರೆ.
ಮಾರ್ಚ್ 2021 ರಲ್ಲಿ ಜಾವಾದ ಮುಖ್ಯ ದ್ವೀಪದಲ್ಲಿನ ಅತಿದೊಡ್ಡ ತೈಲ ಸಂಸ್ಕರಣಾಗಾರದಲ್ಲಿ ಸಿಲಾಕ್ಯಾಪ್ ಗ್ಯಾಸೋಲಿನ್ ಶೇಖರಣಾ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡು 80 ನಿವಾಸಿಗಳನ್ನು ಸ್ಥಳಾಂತರಿಸಲು ಪ್ರೇರೇಪಿಸಿತು. ಈ ವೇಳೆ 20 ಜನರು ಗಾಯಗೊಂಡರು. ದಿನಕ್ಕೆ 270,000 ಬ್ಯಾರೆಲ್‌ಗಳ ಸಂಸ್ಕರಣಾ ಸಾಮರ್ಥ್ಯದೊಂದಿಗೆ ಸಿಲಾಕ್ಯಾಪ್ ಆರು ಪರ್ಟಾಮಿನಾ ಸಂಸ್ಕರಣಾಗಾರಗಳಲ್ಲಿ ಒಂದಾಗಿದೆ. ಎಂಟು ತಿಂಗಳ ನಂತರ, ಪಶ್ಚಿಮ ಜಾವಾ ಪ್ರಾಂತ್ಯದ ಪೆರ್ಟಮಿನಾ ಬಲೋಂಗನ್ ರಿಫೈನರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ನೆರೆಯ 900 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು.












Click it and Unblock the Notifications